ನೂರಾರು ಪಟ್ಟು ಅಕ್ರಮ ಆಸ್ತಿ ಗಳಿಸಿದ ಸರ್ವೆ ಸೂಪರ್ವೈಸರ್ ಬಂಧನ

3 years ago

#Arrest #survey #supervisor #earned #hundreds #times #illegal #wealth

ಬೆಂಗಳೂರು: ಆದಾಯಕ್ಕಿಂತ ನೂರಾರು ಪಟ್ಟು ಅಕ್ರಮ ಆಸ್ತಿ ಗಳಿಸಿ ಸಿಕ್ಕಿಬಿದ್ದಿರುವ ಸರ್ವೆ ಸೂಪರ್ ವೈಸರ್ ಕೆ.ಟಿ ಶ್ರೀನಿವಾಸ್ ಮೂರ್ತಿಯವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಕೆ.ಟಿ ಶ್ರೀನಿವಾಸ್ ಮೂರ್ತಿ ನಗರದ ಕಚೇರಿ, ಮನೆ, ತುಮಕೂರಿನ ಮನೆ ಸೇರಿದಂತೆ 14 ಕಡೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತರು ದಾಳಿ ನಡೆಸಿ ಮೂರು ಕೋಟಿಗೂ ಅಧಿಕ ಆಸ್ತಿ ಪಾಸ್ತಿ ಪತ್ತೆ ಹಚ್ಚಿದ್ದರು.

ಆರ್ ಪುರ ತಾಲ್ಲೂಕು ಕಚೇರಿಯಲ್ಲಿ ಸರ್ವೇ ಸೂಪರ್ ವೈಸರ್ ಆಗಿರುವ ಕೆ ಟಿ ಶ್ರೀನಿವಾಸಮೂರ್ತಿ ಅವರ ಅಕ್ರಮ ಆಸ್ತಿ ಪಾಸ್ತಿ ಪರಿಶೀಲನೆ ವೇಳೆ ಐದು ಬಾರ್ ಗಳನ್ನು ಹೊಂದಿರುವುದು ಪತ್ತೆಯಾಗಿತ್ತು. ರಾಜ್ಯದ 14 ಕಡೆಗಳಲ್ಲಿ ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಆಸ್ತಿಗೆ ಸಂಬಂಧಿಸಿದ ದಾಖಲೆ ಜಪ್ತಿ ಮಾಡಿದ್ದಾರೆ. ಮನೆಯಲ್ಲಿ ಪತ್ತೆಯಾಗಿರುವ ದಾಖಲೆ ಪರಿಶೀಲಿಸಿದಾಗ 5 ಅಬಕಾರಿ ಪರವಾನಗಿ (ಲಿಕ್ಕರ್ ಲೈಸೆನ್ಸ್) ಹೊಂದಿರುವುದು ಬೆಳಕಿಗೆ ಬಂದಿದೆ.

ಕೆ.ಟಿ ಶ್ರೀನಿವಾಸಮೂರ್ತಿ ಹೆಸರಿನಲ್ಲಿ 5 ಅಬಕಾರಿ ಲೈಸೆನ್ಸ್ ಪತ್ತೆಯಾಗಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 5 ಬಾರ್ ಲೈಸೆನ್ಸ್ ಪಡೆದಿದ್ದು, ದಾಖಲೆ ಪರಿಶೀಲನೆ ನಡೆಸಿದ್ದಾರೆ. ಹೆಣ್ಣೂರು ನಿವಾಸ, ಅಂಧ್ರಳ್ಳಿ ನಿವಾಸ, ಸಹೋದರಿಯ ನಿವಾಸ, ಪತ್ನಿ ಹೆಸರಿನ ಹೋಟೆಲ್ಸ್ ಬೋರ್ಡಿಂಗ್ ಹೌಸ್ಗಳ ಮೇಲೂ ಲೋಕಾ ದಾಳಿ ಮಾಡಿ ಪರಿಶೀಲನೆ ನಡೆಸಿ ಬಂಧಿಸಲಾಗಿದೆ.

Leave a Reply