

- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಕಸ ವಿಲೇವಾರಿ ಘಟಕಗಳು ಕಾರ್ಯ ನಿರ್ವಹಣೆ ಮಾಡುತ್ತಿವೆಯಾ?
ನಗರ ಪ್ರದೇಶಗಳಂತೆ ಗ್ರಾಮೀಣ ಪ್ರದೇಶಗಳಲ್ಲೂ ಸ್ವಚ್ಛತೆ ಕಾಪಾಡಲು ಪರಿಸರ ಶುದ್ಧವಾಗಿ ಇಟ್ಟುಕೊಳ್ಳಲು ಸರ್ಕಾರ ಪ್ರತಿ ಪಂಚಾಯತಿ ಕೇಂದ್ರಗಳಲ್ಲೂ ಕಸ ವಿಲೇವಾರಿ ಘಟಕಗಳು ನಿರ್ಮಿ ಅಲ್ಲಿ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸಿ, ಗೊಬ್ಬರವನ್ನು ರೈತರಿಗೆ ಮಾರಾಟ ಮಾಡಿ ಆ ಹಣದಿಂದ ಕಾರ್ಮಿಕರಿಗೆ ವೇತನ ನೀಡಲು ವ್ಯವಸ್ಥೆ ಮಾಡಲು ಸರ್ಕಾರದ ನಿರ್ದೇಶನ ಇದೆ ಎನ್ನಲಾಗುತ್ತದೆ. ಕಸ ವಿಲೇವಾರಿ ಘಟಕಗಳನ್ನು ಮಾಡಲು ಸರ್ಕಾರ ಹಣ ಬಿಡುಗಡೆ ಮಾಡಿದೆ ಎನ್ನಲಾಗುತ್ತದೆ.
ಆದರೆ ಎಷ್ಟು ಗ್ರಾಮ ಪಂಚಾಯತಿಗಳು ಗ್ರಾಮಗಳಲ್ಲಿ ಕಸವನ್ನು ಸಂಗ್ರಹಿಸಿ ಕಸ ವಿಲೇವಾರಿ ಘಟಕಗಳಿಗೆ ತಲುಪಿಸಿ ಅಲ್ಲಿ ಹಸಿ ಕಸವನ್ನು ಗೊಬ್ಬರ ಮಾಡುವುದು ಒಣ ಕಸವನ್ನು ವಿಂಗಡಣೆ ಮಾಡಿ ಮಾರಾಟ ಮಾಡಿ ಕಾರ್ಮಿಕರಿಗೆ ವೇತನ ನೀಡುವ ವ್ಯವಸ್ಥೆಯನ್ನು ಎಷ್ಟು ಪಂಚಾಯಿತಿಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ ಎಂಬುದರ ಬಗೆ ಸರ್ಕಾರ ಗಮನ ಹರಿಸಿದೆಯಾ? ಗಮನಹರಿಸಿಲ್ಲ ಎನ್ನುವುದಾದರೆ ಯಾವ ಪುರುಷರ್ಥಕ್ಕಾಗಿ ಲಕ್ಷಾಂತರ ಹಣವನ್ನು ಬಿಡುಗಡೆ ಮಾಡಬೇಕಾಗುತ್ತದೆ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ ಎಂಬುದು ತಿಳಿಯುವುದಿಲ್ಲ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳ ಮಗ್ಗಲಿನಲ್ಲಿ ಕಸ ಬಿದ್ದು ಪರಿಸರ ಕೆಡಲು ಕಾರಣವಾಗುತ್ತಿದೆ. ಇದರಿಂದ ಜನತೆ ಹಲವು ಕಾಯಿಲೆಗಳು ಬರಲು ಕಾರಣವಾಗುತ್ತಿದೆ ಹಾಗೂ ಒಣ ಕಸದಿಂದ ಭವಿಷ್ಯದಲ್ಲಿ ಹೆಚ್ಚು ಅಪಾಯಕಾರಿ ಸನ್ನಿವೇಶ ಸೃಷ್ಟಿಯಾಗಲು ಕಾರಣವಾಗುತ್ತದೆ ಎಂಬುದು ಪ್ರಜ್ಞಾವಂತರಿಂದ ಕೇಳಿ ಬರುತ್ತದೆ.
ಕೆಲವು ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ಯಾವ ರೀತಿ ಕಸ ವಿಲೇವಾರಿ ಘಟಕಗಳಲ್ಲಿ ಕಾರ್ಯಗಳನ್ನು ಮಾಡಿ ಅದರಿಂದ ಲಾಭ ಮಾಡಿಕೊಂಡು ಕಾರ್ಮಿಕರಿಗೆ ವೇತನ ನೀಡುವ ಬಗೆಗೆ ವಿಡಿಯೋಗಳ ಮುಖಾಂತರ ಜಾಗೃತಿ ಮೂಡಿಸಿರುವುದು ಆನ್ಯ ಪಂಚಾಯ್ತಿಗಳಿಗೆ ಮಾರ್ಗದರ್ಶನ ಹಾಗೂ ಸ್ಪೂರ್ತಿ ನೀಡಿದಂತೆ ಆಗಿದೆ. ಬೇರೆ ಪಂಚಾಯ್ತಿಗಳಿಗೆ ಮಾದರಿ ಆಗಬೇಕಾಗಿದೆ.
ಕೆಲವು ಪಂಚಾಯ್ತಿಗಳಲ್ಲಿ ಅಂಗಡಿ ಮುಗ್ಗಟ್ಟುಗಳಿಂದ ಹಾಗೂ ಮನೆಗಳಿಂದ ಕಸ ಪಡೆದುಕೊಳ್ಳಲು ಪ್ರತಿ ತಿಂಗಳು ಇಂತಿಷ್ಟು ಎಂದೂ ಹಣ ವಸೂಲಿ ಮಾಡುತ್ತಾರೆ ಎಂಬುದು ನಾಗರೀಕರಿಂದ ಕೇಳಿ ಬರುತ್ತದೆ. ಈ ಹಣ ಕಾರ್ಮಿಕರಿಗೆ ನೀಡಲು ಎಂಬ ಕಾರಣ ಕೇಳಿ ಬರುತ್ತದೆ. ಕಾರ್ಮಿಕರಿಗೆ ಸರ್ಕಾರದಿಂದ ಅನುದಾನ ಬರುವುದಿಲ್ಲವೇ? ಹಾಗೂ ಕಸ ವಿಲೇವಾರಿ ಘಟಕಗಳಲ್ಲಿ ಒಣ ಕಸ ವಿಂಗಡಣೆ ಮಾಡಿ ಮಾರಾಟ ಮಾಡುವುದರಿಂದ ಬರುವ ಹಣ ಹಾಗೂ ಹಸಿ ಕಸದಿಂದ ಗೊಬ್ಬರ ತಯಾರಿ ಮಾಡಿ ರೈತರಿಗೆ ಮಾರಾಟ ಮಾಡಿ ಅದರಿಂದ ಬರುವ ಹಣ ಕಾರ್ಮಿಕರಿಗೆ ವೇತನ ನೀಡಲು ಬಳಕೆ ಮಾಡಿಕೊಳ್ಳಬೇಕು ಅಲ್ಲವೇ ಎಂಬ ಪ್ರಶ್ನೆಗಳು ನಾಗರೀಕರಿಂದ ಕೇಳಿ ಬರುತ್ತದೆ.
ಒಟ್ಟಾಗಿ ಕಸ ವಿಲೇವಾರಿ ಘಟಕಗಳು ವೈಜ್ಞಾನಿಕವಾಗಿ ಕಾರ್ಯನಿರ್ವಹಿಸಿದಾಗ ಈ ಸಮಸ್ಯೆಗಳು ಬರುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತದೆ. ಇನ್ನೊಂದು ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ತಿಗಳಿಗೆ ಕಸ ವಿಲೇವಾರಿ ಮಾಡಲು ವಾಹನಗಳು ನೀಡಲಾಗಿದೆ. ಆದರೆ ಕೆಲವು ಪಂಚಾಯ್ತಿತ್ತಿಗಳಲ್ಲಿ ಹಳ್ಳಿಗಳಲ್ಲಿ ಕಸ ಶೇಖರಣೆ ಮಾಡುವುದು ಆಗಲಿ ಕಸ ವಿಲೇವಾರಿ ಘಟಕಗಳಿಗೆ ಸಾಗಣೆ ಮಾಡಿ ಕಸ ವಿಂಗಡಣೆ ಮಾಡುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತವೆ? ಸರ್ಕಾರ ಉದ್ದೇಶ ವಿಫಲ ಆಗುತ್ತಿದೆ ಎಂಬುದು ಸರ್ಕಾರದ ಗಮನಕ್ಕೆ ಬಾರದೆ ಇರುವುದು ವಿಪರ್ಯಾಸ ಅಲ್ಲವೇ? ಸರ್ಕಾರಗಳು ಪರಿಸರ ಉದ್ದೇಶಕ್ಕಾಗಿ ಯಶಸ್ವಿ ಮಾಡಬೇಕಾಗಿದೆ.
ಕೇಂದ್ರ ಸರ್ಕಾರ ಸ್ವಚ್ಛಾತಾ ಅಭಿಯಾನ ಮಾಡಿ ಅದಕ್ಕೆ ಸಾಕಷ್ಟು ಪ್ರಚಾರ ನೀಡಿದೆ. ಆದರೆ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಕಸ ವಿಲೇವಾರಿ ಘಟಕಗಳು ಚಾಲ್ತಿಯಲ್ಲಿ ಇದೆಯಾ? ಅದಕ್ಕೆ ಸಂಬಂಧಪಟ್ಟಂತೆ ಕೊರತೆಗಳೇನು? ಹಾಗೂ ಪ್ರಾಮಾಣಿಕವಾಗಿ ಕಾರ್ಯಗಳು ಮಾಡುತ್ತಿವೆ ಎಂಬುದನ್ನು ಪರಿಶೀಲನೆ ಮಾಡದ ಮೇಲೆ ಕೇಂದ್ರ ಸರ್ಕಾರ ಸ್ವಚ್ಛತಾ ಅಭಿಯಾನ ಕೈಗೊಂಡಿದ್ದು ಏಕೆ ಎಂಬ ಪ್ರಶ್ನೆಗಳು ನಾಗರೀಕರಿಂದ ಕೇಳಿ ಬರುತ್ತವೆ.
ಅದೇ ರೀತಿ ರಾಜ್ಯ ಸರ್ಕಾರ ಸಹ ನಗರ ಹಾಗೂ ಗ್ರಾಮೀಣ ಕಸ ವಿಲೇವಾರಿ ಘಟಕಗಳು ಸರಿಯಾಗಿ ಕಾರ್ಯ ನಿರ್ಹವಣೆ ಮಾಡಲು ಕಾರ್ಯಪ್ರವೃತ್ತರಾಗಬೇಕಾಗಿದೆ. ಇದರಿಂದ ಭವಿಷ್ಯದಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡಲು ಸಾಧ್ಯ ಆಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.
- N.S. ಈಶ್ವರಪ್ರಸಾದ್, ನೇರಳೇಕೆರೆ, ಮಧುಗಿರಿ ತಾಲ್ಲೂಕ್




