ಮಹಿಳೆ ಮೇಲೆ ವಾಗ್ದಾಳಿ ನಡೆಸಿದ ಅರವಿಂದ ಲಿಂಬಾವಳಿ ವಿಡಿಯೋ ವೈರಲ್

4 years ago

ಮಹಿಳೆ ಮೇಲೆ ವಾಗ್ದಾಳಿ ನಡೆಸಿದ ಅರವಿಂದ ಲಿಂಬಾವಳಿ ವಿಡಿಯೋ ವೈರಲ್

ಬೆಂಗಳೂರು: ಬರಬರುತ್ತಾ ಜನಪ್ರತಿನಿಧಿಗಳ ಮೇಲೆ ವಿಶ್ವಾಸ ಕಳೆದುಹೋಗುತ್ತಿದೆ‌. ಇದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಬೆಂಗಳೂರಿನ ವರ್ತೀರು ಕೆರೆ ಕೋಡಿ ವೀಕ್ಷಿಸಲು ಬಂದಿದ್ದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ತಮ್ಮ ಮುಂದೆ ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಮಹಿಳೆಯ ಮೇಲೆ ದರ್ಪ ಮೆರೆದಿದ್ದಾರೆ. ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಳೆದ ವಾರ ಸುರಿದ ಭಾರೀ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳ ಜೊತೆ ಬಂದಿದ್ದ ಅವರಿಗೆ, ಸಮಸ್ಯೆ ಹೇಳಿಕೊಳ್ಳಲು ಮಹಿಳೆ ಮುಂದಾದರು. ಆಗ ರೊಚ್ಚಿಗೆದ್ದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯೂ ಆದ ಲಿಂಬಾವಳಿ, ನಿನಗೆ ಮಾನ ಮರ್ಯಾದೆ ಇದ್ಯಾ? ನಿನಗೆ ನಾಚಿಕೆ ಆಗಲ್ವಾ ಎಂದು ಏರು ದನಿಯಲ್ಲಿ ಕೂಗಾಡಿದರು. ಕಡೆಗೆ ಮಹಿಳೆಯನ್ನು ಸ್ಟೇಷನ್‍ಗೆ ಕರೆದುಕೊಂಡು ಹೋಗಿ ಕೂರಿಸಿ ಎಂದರು.

ಇನ್ನು ಅರವಿಂದ ಲಿಂಬಾವಳಿಯವರಿಂದ ವಾಗ್ದಾಳಿಗೆ ಗುರಿಯಾದ ಮಹಿಳೆಯ ಮೇಲೆ ಬಿಬಿಎಂಪಿ ಎಂಜಿನಿಯರ್ ದೂರು ದಾಖಲಿಸಿದ್ದು, ದೂರಿನ ಆಧಾರದ ಮೇಲೆ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ತೆರಳಿದ ವೇಳೆ ಕರ್ತವ್ಯಕ್ಕೆ ಅಡ್ಡಿಮಾಡಿದ್ದಾರೆ ಎಂಬ ಆರೋಪವನ್ನು ಮಹಿಳೆ ವಿರುದ್ಧ ಹೊರಿಸಲಾಗಿದೆ.

Leave a Reply