ಸುರಪುರ : ಶಹಾಪುರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶರಣಬಸಪ್ಪಗೌಡ ದರ್ಶನಾಪುರ ಅವರು ಶಾಸಕರಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರು ಮಾಡಿದ ಜನೋಪಯೋಗಿ ಕೆಲಸಗಳನ್ನು ಮೆಚ್ಚಿ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಆರ್. ಎಸ್ ಮಾಲಗತ್ತಿ ಹೇಳಿದರು.
ಮಾಲಗತ್ತಿಯಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ. ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡುವ ಮೂಲಕ ಬಹುದಿನದ ಬೇಡಿಕೆ ಈಡೇರಿಸಿದ್ದಾರೆ. ಡಾ. ಅಂಬೇಡ್ಕರ್ ಭವನ ಹಾಗೇಯೇ ಜ್ಯೂನಿಯರ್ ಕಾಲೇಜ್ , ಸಿಸಿ ರಸ್ತೆ ನಿರ್ಮಾಣ, ಮಾಲಗತ್ತಿ ಕೆರೆ ಅಭಿವೃದ್ಧಿ ಸೇರಿದಂತೆ ಜನಪರ ನಿಲುವು ಮತ್ತು ಅಭಿವೃದ್ಧಿ ಕೆಲಸಗಳಿಗೆ ಬೆಂಬಲಿಸುವಂತೆ ಮನವಿ ಮಾಡಿದರು.
ಸರ್ವ ಜನಾಂಗವನ್ನು ಸಮವಾಗಿ ಕಾಣುವ ಹಸ್ತದ ಗುರುತಿಗೆ ತಮ್ಮ ಅಮೂಲ್ಯವಾದ ಮತ ನೀಡಿ ಎಂದು ಕೋರಿದೆ. ಮುಖಂಡರಾದ ಭೀಮಣ್ಣ ದೊರೆ, ಸಣ್ಣಕ್ಕೆಪ್ಪ ಸಾಹು ಮಹಾರಾಯ ಸಾಹು, ಆರ್.ಎಸ್ ಮಾಲಗತ್ತಿ , ನಿಂಗಣ್ಣ ಸಾಹುಕಾರ, ಚಂದಣ್ಣ ನಾಯ್ಕೋಡಿ, ನರಸಿಂಹ ನಾಯ್ಕೊಡಿ, ಮಹಾನಿಂಗಪ್ಪ ಮಳ್ಳಿ ಬಾಬು ಕಂಬಾರ , ಶ್ರಿಶೈಲ್ ಮ್ಯಾಗೇರಿ ಮುತ್ತರಾಜ ಬೋನಾಳ, ಮಂಜು ಯನಗುಂಟಿ, ಅಬ್ಬಾಸಲಿ ಮಕ್ಕಾಂದಾರ, ಯಂಕೋಬ ದೊರೆ, ಹೈಯ್ಯಾಳಪ್ಪ ಸಾಹು, ಭೀಮಣ್ಣ ಹೊಸಗೆರಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.




