ಕರ್ನಾಟಕ ಕ್ರೀಡಾ ಪ್ರಾಧಿಕಾರ
ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ 14 ಹಿರಿಯ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳಿಗೆ ಫಿಟ್ನೆಸ್ ತರಬೇತಿ ನೀಡುವ ಸಲುವಾಗಿ 14 ಫಿಟ್ನೆಸ್ ತರಬೇತುದಾರರ ಸೇವೆ ಪಡೆಯಲು ಒಂದು ವರ್ಷದ ತಾತ್ಕಾಲಿಕ ಅವಧಿಯವರೆಗೆ ಮಾಸಿಕ ಸಂಚಿತ ವೇತನ, ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
- ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಫೇಕುಗಳ ಕಾಟ!
- ಇತಿಹಾಸದಲ್ಲೇ ದಾಖಲೆ ಬರೆಯುವಂತೆ ಬಸ್ ಟಿಕೆಟ್ ದರ ಏರಿಕೆ: ಆರ್ ಅಶೋಕ್
- ನವೆಂಬರ್ 07 ರಿಂದ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನ
- ಆ್ಯಕ್ಸಿಡೆಂಟಲ್ ಸಿಎಂ ಬೊಮ್ಮಾಯಿ ಅವರೇ ಹಾವೇರಿ ಕ್ಷೇತ್ರದ ಬಗ್ಗೆ ಗಮನ ಕೊಡಿ: ಬಿ ಕೆ ಹರಿಪ್ರಸಾದ್
- 40 ದಾಟಿದ ಪುರುಷರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ?
ಆಸಕ್ತ ಅರ್ಹ ಅಭ್ಯರ್ಥಿಗಳು ಏಪ್ರಿಲ್ 15 ರ ಸಂಜೆ 4.00 ಗಂಟೆಯೊಳಗೆ ನೃಪತುಂಗ ರಸ್ತೆ, ರಾಜ್ಯ ಯುವ ಕೇಂದ್ರ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಮಹಾ ನಿರ್ದೇಶಕರು, ಬೆಂಗಳೂರು ಇವರಿಗೆ ಸಲ್ಲಿಸಬೇಕು. ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವೆಬ್ಸೈಟ್ dyes.karnataka.gov.in ನಲ್ಲಿ ಪಡೆಯಬಹುದು.
ಅರ್ಹತಾ ಮಾನದಂಡಗಳು: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕ್ರೀಡಾ, ವಿಜ್ಞಾನದೊಂದಿಗೆ ಯಾವುದೇ ವಿಷಯದಲ್ಲಿ ಪದವಿ. ಕ್ರೀಡೆ ಮತ್ತು ವ್ಯಾಯಾಮ ವಿಜ್ಞಾನ, ಕ್ರೀಡಾ ತರಬೇತಿ, ಕ್ರೀಡಾ ವಿಜ್ಞಾನ ಹಾಗೂ ದೈಹಿಕ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ASCA -ಮಟ್ಟ 1, ಮಟ್ಟ-02, ಮಟ್ಟ-03 ಕೋರ್ಸ್ಗಳೊಂದಿಗೆ, N.I.S ನಿಂದ ಸಾಮರ್ಥ್ಯ ಮತ್ತು ಕಂಡೀಷನಿಂಗ್ನಲ್ಲಿ ಒಂದು ವರ್ಷದ ಡಿಪ್ಲೊಮಾ ಪದವಿ ಪಡೆದಿರಬೇಕು. ಫಿಟ್ನೆಸ್ ತರಬೇತಿಯಲ್ಲಿ ಡಿಪ್ಲೊಮಾದೊಂದಿಗೆ ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು.




