ಹಾಸನದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

5 months ago

ಹಾಸನ: ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ 2025-26 ನೇ ಸಾಲಿನ ಯೋಜನೆಯಡಿ ಆಲೂರು ತಾಲ್ಲೂಕಿನಲ್ಲಿ (1 ಹುದ್ದೆ) ಮತ್ತು ಹಾಸನ ತಾಲ್ಲೂಕಿನಲ್ಲಿ(1 ಹುದ್ದೆ), ‘ಸಹಾಯಕ ತಾಂತ್ರಿಕ ವ್ಯವಸ್ಥಾಪಕರು’ ಹುದ್ದೆಗೆ ನೇರಗುತ್ತಿಗೆ ಆಧಾರದ ಮೇಲೆ ಸೀಮಿತ ಅವಧಿಗೆ ನೇಮಕಾತಿ ಮಾಡಿಕೊಳ್ಳಲು ಷರತ್ತಿಗೆ ಒಳಪಟ್ಟು ಅರ್ಜಿಗಳನ್ನು ಆಹ್ವಾನಿಸಿದೆ.

ಸಹಾಯಕ ತಾಂತ್ರಿಕ ವ್ಯವಸ್ಥಾಪಕರು ಹುದ್ದೆಗೆ ಅರ್ಹ ಅಭ್ಯರ್ಥಿಗಳು ಕೃಷಿ / ಕೃಷಿ ಸಂಬಂಧಿತ ವಿಶ್ವ ವಿದ್ಯಾನಿಲಯಗಳು ನೀಡುವ ಕೃಷಿ ಸ್ನಾತಕ ಪಧವಿಯೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿದ್ದು, ಕನಿಷ್ಠ 2 ವರ್ಷಗಳ ಕೃಷಿ / ಕೃಷಿ ಸಂಬಂಧಿತ ವಿಭಾಗಗಳಲ್ಲಿ ಕ್ಷೇತ್ರ ಮಟ್ಟದ ಅನುಭವ ಹೊಂದಿರಬೇಕು. ವೇತನ 25,000.

ಆಸಕ್ತ ಅಭ್ಯರ್ಥಿಯು ಆತ್ಮ ವಿಭಾಗ, ಜಂಟಿ ಕೃಷಿ ನಿರ್ದೇಶಕರ ಕಚೇರಿ, ಹಾಸನ ಇಲ್ಲಿ ಅರ್ಜಿಯನ್ನು ಪಡೆದು, ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿದ ಪೂರ್ಣ ಮಾಹಿತಿಯೊಂದಿಗೆ ನ.15 ರ ಸಂಜೆ 5 ಗಂಟೆಯ ಒಳಗಾಗಿ ಜಂಟಿ ಕೃಷಿ ನಿರ್ದೇಶಕರು, ಹಾಸನ ಇವರ ಕಚೇರಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಹಾಸನ ಇವರನ್ನು ಸಂಪರ್ಕಿಸಬಹುದು.

Leave a Reply