ಸ್ವಯಂ ಸೇವಕ ಗೃಹರಕ್ಷಕರ ನೇಮಕಾತಿಗಾಗಿ  ಅರ್ಜಿ ಆಹ್ವಾನ

1 year ago

ಬೆಂಗಳೂರು: ಜಿಲ್ಲಾ ಗೃಹರಕ್ಷಕ ದಳ, ಬೆಂಗಳೂರು ಉತ್ತರ ಜಿಲ್ಲೆ ಇಲ್ಲಿ  ಸ್ವಯಂ ಸೇವಕ ಗೃಹರಕ್ಷಕರ ಖಾಲಿ ಇರುವ ಸ್ಥಾನಗಳ  ಭರ್ತಿ ಗಾಗಿ ಅರ್ಹ  ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಬೆಂಗಳೂರು ಉತ್ತರ  ಜಿಲ್ಲೆಯ ಗೃಹರಕ್ಷಕ  ದಳದ ಕಮಾಂಡೆಂಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ವಿದ್ಯಾರ್ಹತೆ: ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ  ಪರೀಕ್ಷೆಯಲ್ಲಿ  ತೇರ್ಗಡೆ ಹೊಂದಿರಬೇಕು. 20 ವರ್ಷದಿಂದ 50 ವರ್ಷಗಳ ವಯೋಮಿತಿ ಒಳಗಿರಬೇಕು.  ಗೃಹರಕ್ಷಣೆ  ಸದಸ್ಯತ್ವವು  ಖಾಯಂ ಹುದ್ದೆ ಆಗಿರುವುದಿಲ್ಲ.

ಅರ್ಜಿಯನ್ನು ಗೃಹ ರಕ್ಷಕ ಸದಸ್ಯತ್ವ ಸಮಾದೇಷ್ಟರವರ ಕಛೇರಿ, ಗೃಹರಕ್ಷಕ ದಳ, ಬೆಂಗಳೂರು  ಉತ್ತರ ಜಿಲ್ಲೆ,  ವೆಸ್ಟ್ ಆಫ್ ಕಾರ್ಡ್ ರಸ್ತೆ, ಆಗ್ನಿಶಾಮಕ ಠಾಣೆ ಪಕ್ಕ, ರಾಜಾಜನಿಗರ, ಬೆಂಗಳೂರು ಇಲ್ಲಿ ಭೇಟಿ ನೀಡಿ  ಅಕ್ಟೋಬರ್   03 ರಿಂದ 31 ರವರೆಗೆ (ಕೆಲಸದ ದಿನಗಳಲ್ಲಿ)  ಮಧ್ಯಾಹ್ನ 2.30 ಗಂಟೆಯಿಂದ 5.00 ಗಂಟೆಯವರಿಗೆ  ಉಚಿತವಾಗಿ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 080-23142852   ಗೆ ಸಂಪರ್ಕಿಸಬಹುದು.

Leave a Reply