ಧಾರವಾಡ: 2024-25 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಮಹಿಳಾ ತರಬೇತಿ ಯೋಜನೆಯಡಿ ನಿರುದ್ಯೋಗಿ ಮಹಿಳೆಯರಿಗೆ ಡೋಮೆಸ್ಟೀಕ್ ಡಾಟಾ ಎಂಟ್ರಿ ಆಪರೆಟರ್ ವಿಷಯದ ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ತರಬೇತಿಯನ್ನು ಧಾರವಾಡ ಅಭಿಯಾನ್ ಫೌಂಡೇಶನ್, ಸುವರ್ಣಾ ಕಂಪ್ಯೂಟರ್ ಎಜುಕೇಶನ್ ಸೆಂಟರ್, ಪ್ರೀಜಮ್ ಕಾಂಪ್ಯೂಟೇಟಿವ್ ಅಕಾಡೆಮಿ ಮತ್ತು ತಿಮ್ಮನ್ನಗೌಡರ್ ಎಜುಕೇಷನ್ ಅಕಾಡಮಿ ಸಂಸ್ಥೆಗಳಿಂದ ನೀಡಲಾಗುತ್ತಿದೆ.
ಆಸಕ್ತ 10 ನೇ ತರಗತಿ ವಿದ್ಯಾರ್ಹತೆ ಹೊಂದಿದ ಮಹಿಳೆಯರು ಆಧಾರ್ ಕಾರ್ಡ್, ಶಾಲೆಯ ಅಂಕ ಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಇತ್ತಿಚಿನ 6 ಭಾವಚಿತ್ರಗಳೊಂದಿಗೆ ಜೂನ್ 10, 2025 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಧಾರವಾಡ ಟಿಪ್ಪು ಸರ್ಕಲ್ ಹತ್ತಿರವಿರುವ ಅಭಿಯಾನ್ ಫೌಂಡೇಶನ್, ಧಾರವಾಡ ವಿದ್ಯಾಗಿರಿ ಜೆ.ಎಸ್.ಎಸ್. ಸಂಸ್ಥೆ ಎದುರಗಡೆ ಇರುವ ಸುವರ್ಣಾ ಕಂಪ್ಯೂಟರ್ ಎಜುಕೇಶನ್ ಸೆಂಟರ್, ಧಾರವಾಡ ಸಪ್ತಾಪೂರಭಾವಿ ಹತ್ತಿರ ಇರುವ ಪ್ರೀಜಮ್ ಕಾಂಪ್ಯೂಟೇಟಿವ್ ಅಕಾಡೆಮಿ ಮತ್ತು ತಿಮ್ಮನ್ನಗೌಡರ್ ಎಜುಕೇಷನ್ ಅಕಾಡೆಮಿಗೆ ಸಂಪರ್ಕಿಸಬಹುದು.




