ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸಖಿ ಒನ್ ಸ್ಟಾಪ್ ಸೆಂಟರ್ ನಲ್ಲಿ ಕಾರ್ಯನಿರ್ವಹಿಸಲು ಹೊರ ಗುತ್ತಿಗೆ ಆಧಾರ ಮೇಲೆ ಘಟಕ ಆಡಳಿತಾಧಿಕಾರಿಗಳು 02 ಹುದ್ದೆ, ಆಪ್ತ ಸಮಾಲೋಚಕರು 01 ಹುದ್ದೆ, ಸಮಾಜ ಸೇವಾ ಕಾರ್ಯಕರ್ತರು / ಕೇಸ್ ವರ್ಕರ್ 07 ಹುದ್ದೆ, ಕಾನೂನು ಸಲಹೆಗಾರರು, ವಕೀಲರು (ಪ್ಯಾರಾ ಲೀಗಲ್ ) 09 ಹುದ್ದೆ ಮತ್ತು ವಿವಿದೋದ್ದೇಶ ಸ್ವಚ್ಛತಗಾರರು / ಸೆಕ್ಯೂರಿಟಿ 07 ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ವಿದ್ಯಾರ್ಹತೆ : ಘಟಕ ಆಡಳಿತಾಧಿಕಾರಿಗಳು ಹುದ್ದೆಗೆ ಎಂ.ಎಸ್ ಡಬ್ಲೂ., ಸ್ನಾತಕೋತ್ತರ ಕಾನೂನು ಪದವಿ., ಎಂ.ಎಸ್.ಸಿ ಹೋಮ್ ಸೈನ್ಸ್ (ಹ್ಯೂಮನ್ ಡೆವೆಲಪ್ ಮೆಂಟ್ & ಫ್ಯಾಮಿಲಿರಿಲೇಷನ್) ಎಂ.ಎಸ್.ಸಿ. ಸೈಕಾಲಜಿ., ಎಂ.ಎಸ್.ಸಿ ಸೈಕಿಯಾಟ್ರಿ ಹೊಂದಿರಬೇಕು. ಆಪ್ತ ಸಮಾಲೋಚಕರ ಹುದ್ದೆಗೆ ಎಂ.ಎಸ್ ಡಬ್ಲೂ., ಎಂ.ಎಸ್.ಸಿ ಹೋಮ್ ಸೈನ್ಸ್ (ಹ್ಯೂಮನ್ ಡೆವೆಲಪ್ ಮೆಂಟ್ & ಫ್ಯಾಮಿಲಿರಿಲೇಷನ್) ಎಂ.ಎಸ್.ಸಿ. ಸೈಕಾಲಜಿ., ಎಂ.ಎಸ್.ಸಿ ಸೈಕಿಯಾಟ್ರಿ ಪದವಿ ಹೊಂದಿರಬೇಕು. ಸಮಾಜ ಸೇವಾ ಕಾರ್ಯಕರ್ತರ / ಕೇಸ್ ವರ್ಕರ್ ಹುದ್ದೆಗೆ ಬಿ.ಎಸ್.ಡಬ್ಲ್ಯೂ, ಬಿ.ಎ (ಸೋಷಿಯಾಲಜಿ, ಮಹಿಳಾ ಅಧ್ಯಯನ) ಪದವಿ ಹೊಂದಿರಬೇಕು. ಕಾನೂನು ಸಲಹೆಗಾರರು, ವಕೀಲರು (ಪ್ಯಾರಾ ಲೀಗಲ್ ) ಹುದ್ದೆಗೆ ಕಾನೂನು ಪದವಿ ಹೊಂದಿರಬೇಕು.
ವಿವಿದೋದ್ದೇಶ ಸ್ವಚ್ಛತಗಾರರು / ಸೆಕ್ಯೂರಿಟಿ (ರಾತ್ರಿ ಕಾವಲು) ಹುದ್ದೆಗೆ 7ನೇ ತರಗತಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.
ಆಸಕ್ತ ಮಹಿಳಾ ಅಭ್ಯರ್ಥಿಗಳು ಉಪ ನಿರ್ದೇಶಕರವರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಸುಧಾರಣಾ ಸಂಸ್ಥೆಗಳ ಸಂಕೀರ್ಣ, ಡಾ.ಎಂ.ಹೆಚ್. ಮರಿಗೌಡ ರಸ್ತೆ, ಬೆಂಗಳೂರು –560029 ಇಲ್ಲಿಗೆ ತಮ್ಮ ವ್ಯಕ್ತಿಗತ ವಿವರವನ್ನು ಎಲ್ಲಾ ದಾಖಲೆಗಳೊಂದಿಗೆ ಮೇ 02 ರ ಸಂಜೆ 5.30 ರೊಳಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 080- 29578688 ಗೆ ಸಂಪರ್ಕಿಸಬಹುದು.




