ಬಳ್ಳಾರಿ: ಕೇಂದ್ರ ಪುರಸ್ಕೃತ ಯೋಜನೆಯಾದ ಅಮೃತ್ 2.0 ಅಭಿಯಾನದ ಅಮೃತ್ ಮಿತ್ರ ಕಾರ್ಯಕ್ರಮದ ತಾಂತ್ರಿಕೇತರ ಚಟುವಟಿಕೆಯಡಿ ಕಾರ್ಯಕ್ರಮದಡಿ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ನೀರಿನ ಬಳಕೆಯ ಶುಲ್ಕದ ಹಿಂದಿನ ಬಾಕಿ ಮೊತ್ತ ಮತ್ತು ಬಹುದಿನಗಳಿಂದ ಬಾಕಿ ಇರುವ ಆಸ್ತಿ ತೆರಿಗೆ ಮೊತ್ತವನ್ನು ಸ್ವಸಹಾಯ ಸಂಘಗಳಿಂದ ಸಮರ್ಪಕವಾಗಿ ವಸೂಲಾತಿ ಮಾಡಲು ಅರ್ಹ ಸ್ವಸಹಾಯ ಸಂಘಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
- ಗಮನ ಬೇರೆಡೆ ಸೆಳೆದು ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ: ಪ್ರಕಾಶ್ ರಾಜ್
- ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯೂ ವ್ಯಂಗ್ಯಕ್ಕೆ ಅತೀತರಲ್ಲ
- ಹಾಲಿನ ದರ ಏರಿಕೆ ಕುರಿತು ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಡಿ ಕೆ ಶಿವಕುಮಾರ್
- ಒಂದು ತಿಂಗಳ ಸಂಬಳವನ್ನು ಬರ ಪರಿಹಾರ ನಿಧಿಗೆ ನೀಡಿ
- ಕಾಮಗಾರಿ ಬಿಲ್ ಪಾವತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ : ಕೃಷ್ಣ ಬೈರೇಗೌಡ
ಆಸಕ್ತ ಅರ್ಹ ಸ್ವಸಹಾಯ ಸಂಘದ ಸದಸ್ಯರು ನಿಗದಿತ ನಮೂನೆಯ ಅರ್ಜಿ ಪಡೆದು ಭರ್ತಿ ಮಾಡಿ ಫೆ.05 ರೊಳಗಾಗಿ ಅರ್ಜಿಯನ್ನು ಮಹನಾಗರ ಪಾಲಿಕೆ ಕಚೇರಿಯ ಡೇ-ನಲ್ಮ್ ಶಾಖೆಗೆ ಸಲ್ಲಿಸಬೇಕು.
ಅರ್ಹತೆ: ಸ್ವಸಹಾಯ ಸಂಘವು ಡೇ-ನಲ್ಮ್ ಅಭಿಯಾನದಡಿ ನೋಂದಾಯಿಸಿರಬೇಕು (ಎಂಐಎಸ್ ಕೋಡ್ ಹೊಂದಿರಬೇಕು) ಹಾಗೂ ಪಂಚಸೂತ್ರಗಳನ್ನು ಅನುಸರಿಸುತ್ತಿರಬೇಕು. ಆಸಕ್ತ ಸ್ವಸಹಾಯ ಸಂಘದ ಸದಸ್ಯರು ಕನಿಷ್ಠ 7ನೇ ತರಗತಿಯವರೆಗೆ ಶಿಕ್ಷಣ ಹಾಗೂ ಎಲೆಕ್ಟ್ರಾನಿಕ್ ಪರಿಕರಗಳನ್ನು ಬಳಸುವ ಸಾಮರ್ಥ್ಯ ಹೊಂದಿರಬೇಕು.
ಸ್ವಸಹಾಯ ಸಂಘದ ಹೆಸರಿನಲ್ಲಿ ಸಕ್ರಿಯ ಬ್ಯಾಂಕ್ ಖಾತೆ ಹೊಂದಿರಬೇಕು. ಸ್ವಸಹಾಯ ಗುಂಪು ರಚನೆಯಾಗಿ ಕನಿಷ್ಠ 3 ವರ್ಷ ಪೂರೈಸಿರಬೇಕು. ಬ್ಯಾಂಕಿನ ಮೂಲಕ ಅಥವಾ ಆಂತರಿಕ ಸಾಲ ಪಡೆದು ನಿಯಮಿತವಾಗಿ ಸಾಲ ಮರು ಪಾವತಿ ಮಾಡಿರಬೇಕು.
ಹೆಚ್ಚಿನ ಮಾಹಿತಿಗಾಗಿ ನಗರದ ಗಡಿಗಿ ಚೆನ್ನಪ್ಪ ವೃತ್ತದ ಬಳಿಯ ಮಹಾನಗರ ಪಾಲಿಕೆ ಕಚೇರಿಗೆ ಸಂಪರ್ಕಿಸಬಹುದು.




