ತಾತ್ಕಾಲಿಕ ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನ

2 years ago

ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಪದವಿ ಪೂರ್ವ ಕಾಲೇಜಿನಲ್ಲಿ ಅವಕಾಶ

ದಾವಣಗೆರೆ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2024-25 ನೇ ಸಾಲಿಗೆ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಪದವಿ ಪೂರ್ವ ವಸತಿ ಕಾಲೇಜು, ಕೊಂಡಜ್ಜಿ ಗ್ರಾಮ ಇಲ್ಲಿ ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ ಪಿ.ಸಿ.ಎಂ.ಬಿ ವಿಷಯಗಳಿಗೆ ಅಂಗ ಮಾಧ್ಯಮದಲ್ಲಿ ಬೋಧಿಸಲು ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ವಿಷಯವಾರು ಉಪನ್ಯಾಸಕ ಹುದ್ದೆಗಳು:
ಇಂಗ್ಲಿಷ್ ಉಪನ್ಯಾಸಕರು ಹುದ್ದೆ ಸಂಖ್ಯೆ -1
ಗಣಿತ ಉಪನ್ಯಾಸಕರು ಹುದ್ದೆ ಸಂಖ್ಯೆ-1
ಭೌತಶಾಸ್ತ್ರ ಉಪನ್ಯಾಸಕರು ಹುದ್ದೆ ಸಂಖ್ಯೆ-1
ರಸಾಯನ ಶಾಸ್ತ್ರ ಉಪನ್ಯಾಸಕರ ಹುದ್ದೆ ಸಂಖ್ಯೆ-1

ಉಪನ್ಯಾಸಕ ಹುದ್ದೆಗೆ ಎಂ.ಎಸ್ಸಿ ಮತ್ತು ಬಿ.ಎಡ್ ವಿದ್ಯಾರ್ಹತೆಯನ್ನು ಹೊಂದಿರಬೇಕು. ಅರ್ಹ ಅಭ್ಯರ್ಥಿಗಳು ಮೇ 30ರೊಳಗಾಗಿ ವಸತಿ ಕಾಲೇಜಿನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9008815296, 8970159714 ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ್ ಮಠದ್ ತಿಳಿಸಿದ್ದಾರೆ.

Leave a Reply