ಸಫಾಯಿ ಕರ್ಮಚಾರಿಗಳ ವೇತನ ಹೆಚ್ಚಳಕ್ಕೆ ಸಚಿವರಲ್ಲಿ ಮನವಿ

3 years ago

#Appeal #Minister #increase #salary #SafaiKarmacharis

ಬೆಂಗಳೂರು: ಕವಿಪ್ರನಿನಿ ಕಾರ್ಮಿಕ ಮುಖಂಡರಿಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಇಂಧನ ಸಚಿವ ಕೆ.ಜೆಜಾರ್ಜ್, ಲೋಕಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕಾರ್ಮಿಕ ಮುಖಂಡರಾದ ಕರಣ್ಶೀಲ್, ಡಾ.ಎ.ಆರ್.ಗೋವಿಂದಸ್ವಾಮಿ ಮುಂತಾದವರು ನಿಗಮದಲ್ಲಿ ಸುಮಾರು 35 ವರ್ಷಗಳಿಂದ ರೂ.150/- ರೂ.ಗಳಿಗೆ ದುಡಿಯುತ್ತಾ ಬಂದಿರುವ ಸಫಾಯಿ ಕರ್ಮಚಾರಿಗಳನ್ನು (ಶುಚಿಗಾರರು) ದಿನಾಂಕ: 02-05-2019ರ ಕವಿಪ್ರನಿನಿ ಆದೇಶದಂತೆ, ಪ್ರಸ್ತುತ ರೂ 16,370-00 ಕನಿಷ್ಠ ವೇತನ ನೀಡುವಂತೆ ಮನವಿ ಮಾಡಲಾಯಿತು.

ಪ್ರಸಕ್ತ 2022-23 ರಿಂದ ವೇತನ ಪರಿಷ್ಕರಣೆಯಾಗಿದ್ದು ವೇತನ ಹೆಚ್ಚಾಗಿರುತ್ತದೆ. ಇದಕ್ಕೆ ಪೂರಕವಾಗಿ ಸುಪ್ರಿಂಕೋರ್ಟಿನ ಆದೇಶವಿದ್ದರೂ ಸಹ ಸುಮಾರು 646 ಜನರಿಗೆ ವೇತನ ಹೆಚ್ಚಾಗಿರುವುದಿಲ್ಲ. ಹೀಗಾಗಿ ಸದರಿ ಆದೇಶದಂತೆ ಇಲಾಖೆಯ ಕನಿಷ್ಠ ವೇತನವಾಗಿ ರೂ.28,550-00 ನೀಡಬೇಕಾಗಿರುತ್ತದೆ ಎಂದು ವಿಷಯವನ್ನು ವಿವರಿಸಿದರು.

ಈ ವೇಳೆ ಶುಚಿಗಾರರ ನಿಯೋಗದೊಂದಿಗೆ ವೇತನ ಹೆಚ್ಚಿಸಲು ಮನವಿ ಪತ್ರದೊಂದಿಗೆ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿದರು. ಎಲ್ಲಾಸಚಿವರು ವೇತನ ಹೆಚ್ಚಳ ಮಾಡಿಸುವುದಾಗಿ ಭರವಸೆ ನೀಡಿರುವುದಾಗಿ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave a Reply