ಫಲಿತಾಂಶಗಳನ್ನು ತಿರುಚುವ ಅಥವಾ ಅಕ್ರಮ ಎಸಗುವ ಭಾಗವಾಗಿ ವೇದಿಕೆಯನ್ನು ಸಿದ್ಧಗೊಳಿಸುವ ಇನ್ನೊಂದು ಅಸ್ತ್ರವೆ?

2 years ago

Exit ಪೋಲ್ ಗಳ ಸತ್ಯಾಸತ್ಯತೆ

ಗಜಗರ್ಭವಾದ ಲೋಕಸಭೆಯ ಚುನಾವಣಾ ಫಲಿತಾಂಶಗಳನ್ನು ಕುತೂಹಲದಿಂದ ಎದುರು ನೋಡುತ್ತಿವೆ ಭಾರತದ ಇನ್ನೂರು ಕೋಟಿ ಕಣ್ಣುಗಳು. ಜನರ ಕುತೂಹಲವನ್ನು ತಾತ್ಕಾಲಿಕವಾಗಿ  ತಣಿಸಲು ಕಂಡುಕೊಂಡಿದ್ದು ಎಕ್ಜಿಟ್ ಪೋಲ್ ಎಂಬ ಹೊಸ ಅಸ್ತ್ರ.

ಇದೊಂದು ಅರೆ ವೈಜ್ಞಾನಿಕ ಸಮೀಕ್ಷೆ. ಜಾತಿ, ಧರ್ಮ, ಶಿಕ್ಷಣ, ಪ್ರದೇಶ, ವಯಸ್ಸು, ಲಿಂಗ, ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ಆಧಾರದ ಮೇಲೆ  ಕೆಲ ಚುನಾಯಿತ ಕ್ಷೇತ್ರಗಳಲ್ಲಿ, ಕೆಲ ನಾಗರಿಕರಿಗೆ ಕೆಲ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅವರಿಂದ ಪಡೆದ ಉತ್ತರಗಳನ್ನು ಕ್ಷೇತ್ರವಾರು ಪ್ರದೇಶವಾರು ಸಂಕಲಿಸಿ ವೈಜ್ಞಾನಿಕ ಆಧಾರದಲ್ಲಿ ಫಲಿತಾಂಶವನ್ನು ಅಂದಾಜಿಸಲಾಗುತ್ತದೆ.

ಭಾರತದಲ್ಲಿ ಟಿ.ವ್ಹಿ. ಮಾಧ್ಯಮಗಳು ದಾಪುಗಾಲು ಇಡುವ ಹಂತದಲ್ಲಿ NDTV ಯ ಪ್ರಣವರಾಯ್ ಮತ್ತು ಯೋಗೆಂದ್ರ ಯಾದವ ಎಂಬ ಮಾಂತ್ರಿಕರು ಇದನ್ನು ಜನಪ್ರಿಯಗೊಳಿಸಿದ್ದರು. ಇದು  ಮುಖ್ಯವಾಗಿ ಪ್ರಶ್ನೆಗಳು, ಸ್ಯಾಂಪಲ್ ಸೈಜ್ ಮತ್ತು ಕೇಳುಗನ ಸತ್ಯಾಸತ್ಯತೆಯನ್ನು ಬಹು ಮುಖ್ಯವಾಗಿ ಅವಲಂಭಿಸಿರುತ್ತದೆ.

ಇದೀಗ ಇದೊಂದು ಹಣ ಮಾಡುವ ಉದ್ಯಮವಾಗಿದೆ. Exit poll ಗಳು Exact poll ಗಳಲ್ಲ ಎಂದು ಜನ ಮಾತಾಡಿಕೊಳ್ಳುವಂತೆ ಇವುಗಳನ್ನು ಅಲಕ್ಷಿಸುವಂತೆ ಮಾಡುತ್ತವೆ. ಅಥವಾ ಪ್ರಜಾಪ್ರಭುತ್ವಕ್ಕೆ ಮಾರಕವಾಗಬಹುದಾದ ಕೃತ್ಯಗಳಿಗೆ ಇವುಗಳನ್ನು ಸಾಧನವನ್ನಾಗಿ ಬಳಸುವ ಕುತಂತ್ರವೂ ಇರಬಹುದು.

ನಿನ್ನೆ ನಾನು India Today  ನೋಡುತ್ತಿದ್ದೆ. ಕೆಲವು ರಾಜ್ಯಗಳ ಫಲಿತಾಂಶ ನಾವು ಲೆಕ್ಕ ಹಾಕಿದ ರೀತಿಯಲ್ಲಿ ಬಂದಿತ್ತು. ಉದಾಹರಣೆಗೆ ತಮೀಳನಾಡಿನ ಎಕ್ಜಿಟ್ ಪೋಲ್ ಫಲಿತಾಂಶ ಸ್ವತಃ ನಾವೇ ಕಂಡುಕೊಂಡ ಸತ್ಯಕ್ಕೆ ಹತ್ತಿರವಾಗಿತ್ತು. India ಅಲಯನ್ಸ್ ೩೭-೩೮ ಕ್ಷೇತ್ರಗಳಲ್ಲಿ ಗೆಲ್ಲುತ್ತದೆ ಎಂದು ನಾವು ಕಂಡ ಸತ್ಯವನ್ನು  ಎಕ್ಜಿಟ್ ಪೋಲ್ ಖಾತ್ರಿಮಾಡಿತ್ತು.

ರಾಜಸ್ಥಾನದಲ್ಲಿ ಹತ್ತು ಕ್ಷೇತ್ರಗಳನ್ನು India ಅಲೈಯನ್ಸ್ ಗೆಲ್ಲುತ್ತದೆ ಎಂದು ಬಹು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ. ಅದು ಸ್ವಲ್ಪ ಹೆಚ್ಚು ಕಡಿಮೆ ಸರಿಯಾಗಿದೆ. ಪಂಜಾಬಿನಲ್ಲಿ ಕಾಂಗ್ರೆಸ್ ಮುಂದಿದೆ ಎಂಬುದೂ ಸತ್ಯಕ್ಕೆ ಹತ್ತಿರವಾಗಿದೆ. ನಾರ್ಥ್ ಈಸ್ಟ್ ರಾಜ್ಯಗಳಲ್ಲಿ, ಜಮ್ಮು ಕಾಶ್ಮೀರ ರಾಜ್ಯಗಳಲ್ಲಿ  ಹಿಂದಿ ಹಾರ್ಟ್ ಲ್ಯಾಂಡ್ ರಾಜ್ಯಗಳಾದ ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ್ ರಾಜ್ಯಗಳಲ್ಲಿ exit ಫಲಿತಾಂಶ ಅಚ್ಚರಿ ತರಿಸಿಲ್ಲ.

ಆದರೆ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಹರಿಯಾಣ, ದೇಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಜನ ಅಂದಾಜಿಸಿದ ಫಲಿತಾಂಶಗಳಿಗೆ ಹತ್ತಿರವಾಗಿಲ್ಲ. ಕರ್ನಾಟಕದಲ್ಲಿ ೧೩-೧೪ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುವ ವಿಶ್ವಾಸ ಹೊಂದಿದೆ. ಅದನ್ನು ಚುನಾವಣಾ ಪಂಡಿತರು ಅಲ್ಲಗಳೆದಿಲ್ಲ. ಅದರಂತೆ ಅಂದ್ರದಲ್ಲಿ ಕಾಂಗ್ರೆಸ್ಗೆ ಇಷ್ಟೋಂದು ಕುಸಿತ ಅಸಾಧ್ಯ. ಭಾಜಪವನ್ನು ಹರಿಯಾಣ ರಾಜ್ಯದಲ್ಲಿ ಬಹಿಷ್ಕಾರ ಹಾಕಿದ ವರದಿಗಳಿದ್ದವು. ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ಪ್ರಚಾರ ಮಾಡುವುದೆ ದುಸ್ತರವಾಗಿತ್ತೆಂಬ ವರದಿಗಳಿದ್ದವು. ಅಲ್ಲಿ india ಅಲೈಯನ್ಸ್ ಭರ್ಜರಿಯಾಗಿ ಗೆಲ್ಲಬಹುದು ಎಂದು ಹೇಳಲಾಗುತ್ತಿತ್ತು. ದೆಹಲಿಯ ಕೇಜ್ರಿವಾಲ್ ಹಾಗೂ ಜಾರ್ಖಂಡಿನ ಹೇಮಂತ್ ಸೊರೇನ್ ಬಂಧನ ಚುನಾವಣೆಯ ಮೇಲೆ ಪರಿಣಾಮ ಅಡ್ಡ ಪರಿಣಾಮ ಬೀರುತ್ತವೆ ಎನ್ನಲಾಗಿತ್ತು. ಇದು ಡಬಲ್ ಎಡ್ಜ್ ಸ್ವಾರ್ಡ್ ಆಗುವ ಭಯ ಇದ್ದೇ ಇತ್ತು. ಅದು India  ಅಲೈಯನ್ಸ್ ಗೆ ಸಹಕಾರಿಯೂ ಆಗಬಹುದು ಅಥವಾ  ಉಲ್ಟಾ ಹೊಡೆಯಬಹುದೆಂಬ ಅಂದಾಜಿತ್ತು.

ಮಹಾರಾಷ್ಟ್ರದಲ್ಲಿ ಬಿ.ಜೆ.ಪಿ. ಸೊರಗಿದೆ ಎಂದು ರಿಪೋರ್ಟ್ ಬಂದಿದ್ದವು. ಏಕನಾಥ ಶಿಂಧೆಗೆ ಜನ ‘ಗದ್ಧಾರ’ ಎಂಬ ಬಿರುದು ಅಂಟಿಸಿದ್ದಾರೆ ಎನ್ನಲಾಗಿತ್ತು. ಹಿರಿಯ ಶರದ್ ಪವಾರ ಸಾಹೇಬ ಮನೆಮನೆಗೆ ತೆರಳಿ ತಮ್ಮ ವಯಸ್ಸನ್ನು ಪಣಕ್ಕೆ ಹಚ್ಚಿದ್ದರಂತೆ, ಶಿವಸೇನಾ (UBT) ಬಣವು ಅಪಾರವಾಗಿ ಜನವನ್ನು ಆಕರ್ಷಿಸಿಸುತ್ತಿದೆ ಎಂಬ ವರದಿಗಳೂ ಇದ್ದವು. ಅಲ್ಲಿಯ ಫಲಿತಾಂಶ ಅಚ್ಚರಿ ತಂದಿದೆ.

‘ಉತ್ತರ ಪ್ರದೇಶದಲ್ಲಿ ಬದಲಾವಣೆ ಗಾಳಿ ಬೀಸಲಾರಂಭಿಸಿದೆ’ ಎಂದು ಬಿಂಬಿಸಲಾಗಿತ್ತು. ಅಖಿಲೇಶ್ ಯಾದವ್ ಮತ್ತು ರಾಹುಲ್ ಗಾಂಧಿಯವರ ಅಲೆಯು ಸುನಾಮಿಯ ರೂಪ ಪಡೆಯುತ್ತಿದೆ ಎನ್ನುವುದು ಸತ್ಯವಲ್ಲವೆ? ಬಿಹಾರದಲ್ಲಿ India ಅಲಯನ್ಸ್ ಮುಂದಿದೆ ಎಂಬ ವರದಿಗಳು ಸುಳ್ಳನ್ನು ಸಾರಿದ್ದವೆ?

ಪಶ್ಚಿಮ ಬಂಗಾಳ, ಓರಿಸ್ಸಾ ರಾಜ್ಯಗಳಲ್ಲಿ ಆಳುವ ಪಕ್ಷಗಳು ಜನರ ಭಾವನೆಯನ್ನು ಅರಿತುಕೊಳ್ಳುವುದರಲ್ಲಿ ಎಡವಿ ಬಿಟ್ಟವೆ?

ಅಥವಾ

ಮುಂಬರುವ ಚುನಾವಣೆ ಫಲಿತಾಂಶಗಳನ್ನು ತಿರುಚುವ ಅಥವಾ ಅಕ್ರಮ ಎಸಗುವ ಭಾಗವಾಗಿ ವೇದಿಕೆಯನ್ನು ಸಿದ್ದಗೊಳಿಸುವ ಇನ್ನೊಂದು ಅಸ್ತ್ರವೆ?

– ಜಿ ಬಿ ಪಾಟೀಲ್, ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ

Leave a Reply