ಡಾ.ಕೆ ಸುಧಾಕರ್ ಗೆ ಆಂಧ್ರಪ್ರದೇಶದ ಚುನಾವಣಾ ಉಸ್ತುವಾರಿ

2 years ago

ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲುವ ಉಮೇದಿನಲ್ಲಿರುವ ಡಾ.ಸುಧಾಕರ್ ಅವರಿಗೆ ಬಿಜೆಪಿ ಹೈಕಮಾಂಡ್ ಈಗ ಮತ್ತೊಂದು ಜವಾಬ್ದಾರಿ ನೀಡಿದೆ.

ಆಂಧ್ರಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷೆ ಹಾಗು ಮಾಜಿ ಮುಖ್ಯಮಂತ್ರಿ ಎನ್ ಟಿಆರ್ ಪುತ್ರಿ ಪುರಂದೇಶ್ವರಿ ಸ್ಪರ್ಧೆ ಮಾಡುತ್ತಿರುವ ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಉಸ್ತುವಾರಿಯಾಗಿ ಸುಧಾಕರ್ ನೇಮಕ ಮಾಡಲಾಗಿದೆ.

ತೆಲುಗು ಭಾಷೆಯ ಮೇಲೆ ಹಿಡಿತ ಹಾಗು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ತಮ್ಮದೇ ಪ್ರಭಾವ ಹೊಂದಿರುವ ಸುಧಾಕರ್ ಅವರಿಗೆ ಈ ಹಿಂದೆ ಕೂಡ ಬಿಜೆಪಿ ಹೈಕಮಾಂಡ್ ಹೈದರಾಬಾದ್ ಮಹಾನಗರ ಪಾಲಿಕೆ ಹಾಗು ತೆಲಂಗಾಣ ವಿಧಾನಸಭಾ ಚುನಾವಣೆಗಳಲ್ಲಿ ಜವಾಬ್ದಾರಿ ನೀಡಿತ್ತು. ಈಗ ಮತ್ತೊಮ್ಮೆ ಅವಕಾಶ ನೀಡಿದೆ.

Leave a Reply