ಹಕ್ಕುಪತ್ರಕ್ಕೆ ಆಗ್ರಹಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿ ತಡೆಯಲು ಯತ್ನ

3 years ago

ಬೆಂಗಳೂರು: ಆನೇಕಲ್ ತಾಲ್ಲೂಕು ಕಚೇರಿಯ ಬಳಿ ಹಕ್ಕು ಪತ್ರ ನೀಡುವಂತೆ ಕರ್ನಾಟಕ ಜನಾಂದೋಲನ ಸಂಘಟನೆಯ ನೇತೃತ್ವದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುತ್ತಿದೆ.

 

ಬಡ ಜನಗಳ ಸಮಸ್ಯೆಯನ್ನು ಬಗೆಹರಿಸದ ತಹಶೀಲ್ದಾರ್ ರವರ ನೀತಿಯನ್ನು ಖಂಡಿಸಿ ಅನಿರ್ದಿಷ್ಟಾವಧಿ ಧರಣಿಯನ್ನು ಆನೇಕಲ್ ಪಟ್ಟಣದ ತಾಲೂಕು ಕಚೇರಿ ಮುಂಭಾಗ ನಡೆಯುತ್ತಿದೆ.

94-C ಹಕ್ಕುಪತ್ರ ನೀಡುವಂತೆ ಕರ್ನಾಟಕ ಜಂನಾಂದೊಲನ ಸಂಘಟನೆಯ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟವನ್ನು ಆನೇಕಲ್ ಪಟ್ಟಣದ ಪೋಲಿಸರು  ಮತ್ತು ತಹಶಿಲ್ದಾರರು ಹತ್ತಿಕ್ಕುತ್ತಿದ್ದಾರೆ. ಏಕಾಏಕಿ ಪ್ರತಿಭಟನಾ ಸ್ಥಳಕ್ಕೆ ಬಂದ ಪೋಲೀಸರು ಪ್ರತಿಭಟನಾಕಾರರು ಹಾಕಿದ್ದ ಶಾಮಿಯಾನವನ್ನು ಕಿತ್ತೆಸೆದಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ.

ಅಂಬೇಡ್ಕರ್ ಪೋಟೋವನ್ನು ಪೋಲೀಸರು ತೆಗೆದುಕೊಂಡು ಹೋಗಿದ್ದಾರೆ ಮತ್ತು ಪ್ರತಿಭಟನೆ ಮಾಡುತ್ತಿದ್ದ ದಲಿತರು ಮತ್ತು ರೈತರನ್ನ ಬೆದರಿಸಿದ್ದಾರೆ. ಪ್ರತಿಭಟನೆ ಮಾಡಬಾರದು ಎಂದು ಶಾಮಿಯಾನವನ್ನು ಕಿತ್ತು ದೌರ್ಜನ್ಯ ಎಸಗಿದ್ದಾರೆ. ತಹಶಿಲ್ದಾರರು ಅಥವಾ ಪೋಲೀಸರು ಪ್ರತಿಭಟನೆ ಮಾಡುವವರಿಗೆ ಯಾವುದೇ ಮಾಹಿತಿ ನೀಡದೆ ಈ ರೀತಿ ಮಾಡಿರುವುದು ದಲಿತರನ್ನು ಕೆರಳಿಸಿದೆ ಎಂದು ವಕೀಲ ಪುರುಷೋತ್ತಮ್ ಖಂಡಿಸಿದರು.

KJS ರಾಜ್ಯ ಅದ್ಯಕ್ಷ ಮರಿಯಪ್ಪಣ್ಣ, ವೈಟ್ ಪೀಲ್ಡ್ ಮುರುಘೇಶ್ ಭೀಮ ಪ್ರಜಾಸಂಘ ಅಧ್ಯಕ್ಷ ಸಂಪಂಗಿ, ತಾಲ್ಲೂಕು ಅಧ್ಯಕ್ಷ ರಾಮಯ್ಯ, ಮುನಿಯಪ್ಪ, ಶಕುಂತಲ, ಮುನಿಯಪ್ಪ ರಾಜಪುರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply