ಬೆಂಗಳೂರು: ಮಗಳ ಮೇಲೆ ಅತ್ಯಾಚಾರ ನಡೆದಿದೆ. ನನಗೆ ನ್ಯಾಯ ಕೊಡಿಸಲು ಎಸ್.ಐ.ಟಿ ರಚಿಸುವಂತೆ ಕೋರಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಳಿ ತೆರಳಿದ ವೇಳೆ ನನ್ನ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯವನ್ನು ನಡೆಸಲಾಗಿದೆ ಎಂದು ತಾಯಿಯೊಬ್ಬರು ಆರೋಪಿಸಿ ದೂರು ನೀಡಿದ್ದಾರೆ.
- ನಕಲಿ ಔಷಧಿ ತಯಾರಕರು, ಮಾರಾಟಗಾರರನ್ನು ಶಿಕ್ಷಿಸಿ
- ಹೈಕಮಾಂಡ್ಗೆ ಕೊಡಲು ಹಣವಿದೆ, ರೈತರಿಗೆ ಕೊಡಲು ಹಣವಿಲ್ಲ: ಆರ್.ಅಶೋಕ
- ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಕುರಿತು ಡಿ ಕೆ ಶಿವಕುಮಾರ್ ಹೇಳಿದ್ದೇನು?
- ಬರ ಘೋಷಣೆಗಿರುವ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಲಿ: ಡಾ. ಜಿ. ಪರಮೇಶ್ವರ್
- ಧನುಷ್ ನಟನೆಯ ‘OM’ ಬಿಡುಗಡೆ ದಿನಾಂಕ ಮುಂದೂಡಿಕೆ!
ಸದರಿ ದೂರಿನ ಆಧಾರದಲ್ಲಿ ಸದಾಶಿವ ನಗರ ಪೊಲೀಸರು ಪೋಕ್ಸೋ (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ) ಅಡಿಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಫೆಬ್ರವರಿ 2ರಂದು ಸದರಿ ವಿಷಯಕ್ಕೆ ಸಂಬಂಧಿಸಿದಂತೆ ನೆರವು ಕೋರಲು ಹೋದ ಸಮಯದಲ್ಲಿ ಬಾಲಿಕಯನ್ನು ಕೋಣೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಜೊತೆಗೆ, ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಒಡ್ಡಿದ್ದರು. ಬಾಲಕಿ ಭಯಗೊಂಡಿದ್ದರಿಂದ ತಡವಾಗಿ ದೂರು ದಾಖಲಿಸುತ್ತಿರುವುದಾಗಿ ತಾಯಿ ಹೇಳಿಕೆ ನೀಡಿದ್ದಾರೆ.




