ಬೆಳಗಾವಿ: ಹುಬ್ಬಳ್ಳಿಯ ನೇಹಾ, ಅಂಜಲಿ ಕೊಲೆ ಪ್ರಕರಣ ಮಾಸುವ ಮುನ್ನವೇ ಇದೀಗ ಪಕ್ಕದ ಬೆಳಗಾವಿ ಜಿಲ್ಲೆಯ ಕಿಣೆ ಗ್ರಾಮದಲ್ಲಿ ಅಂತಹದ್ದೇ ಆರೋಪ ಕೇಳಿಬಂದಿದೆ ಎಂದು ಎಸ್ ಡಿ ಟಿ ಐ ನಾಯಕ ಅಪ್ಸರ್ ಕೊಡ್ಲಿಪೇಟೆ ಆತಂಕ ವ್ಯಕ್ತಪಡಿಸಿದ್ದಾರೆ.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಅವರು, ಪೋಲಿಸರು ಒಂದು ಬಾರಿ ದೂರು ನೀಡಿದ್ದಾಗ ಅವನನ್ನು ಕರೆದು ವಾರ್ನಿಂಗ್ ಮಾಡಿದ್ದರು. ಆದರೆ ಎರಡನೇ ಬಾರಿ ದೂರು ಕೊಡಲು ಹೋದರೆ ನಾಳೆ ಬಾ ಎನ್ನುತ್ತಿದ್ದಾರೆ ಎಂದು ಕಾಲಹರಣ ಮಾಡುತ್ತಿದ್ದಾರೆ ಎಂದು ತಿಪ್ಪಣ್ಣನ ಕಾಟದಿಂದ ನೊಂದ ಯುವತಿ ಆರೋಪಿಸಿದ್ದಾಳೆ ಎಂದು ಹೇಳಿದ್ದಾರೆ.
ಕಳೆದ ಮೂರು ವರ್ಷಗಳಿಂದ ಪ್ರೀತಿ ಪ್ರೇಮ ಅಂತಾ ಯುವತಿಗೆ ಕಿರುಕುಳ ಕೊಡುತ್ತಿರುವ ಕಿಣೆಯ ಗ್ರಾಮದ ತಿಪ್ಪಣ್ಣ ಡೋಕರೆ (27) ಅದೇ ಗ್ರಾಮದ ಬಿಕಾಂ ಓದುತ್ತಿದ್ದ ಯುವತಿ ಕಾಲೇಜಿಗೆ ಹೋಗುವಾಗೆಲ್ಲ ಹಿಂದೆ ಬಿದ್ದು ಪ್ರೀತಿಸುವಂತೆ ಕಾಡುತ್ತಿದ್ದು ಇದರಿಂದ ಯುವತಿ ರೋಸಿಹೋಗಿ ಬೇಸತ್ತಿರುವ ಯುವತಿ ಕಾಲೇಜಿಗೆ ಹೋಗುವುದನ್ನೇ ನಿಲ್ಲಿಸಿಬಿಟ್ಟಿದ್ದಾಳಂತೆ ಎಂದಿದ್ದಾರೆ.
ದಿನನಿತ್ಯ ಪ್ರೀತಿ ಪ್ರೇಮ ಅಂತಾ ಪೀಡಿಸುತ್ತಿರುವ ಪಾಗಲ್ ಪ್ರೇಮಿಯ ಕಾಟಕ್ಕೆ ಕಾಲೇಜಿಗೆ ಹೋಗದಂತಾಗಿದೆ. ಮನೆಯಿಂದ ಕಾಲೇಜಿಗೆ ಹೋಗೋದನ್ನೇ ಕಾಯುತ್ತ ಕೂರುತ್ತಾನಂತೆ ಪಾಗಲ್ ಪ್ರೇಮಿ. ಕಾಲೇಜಿಗೆ ಹೋಗುವಾಗೆಲ್ಲ ಹಿಂದೆ ಬಿದ್ದು ಪ್ರೀತಿಸುವಂತೆ ಕಾಟ ಕೊಡೋದು ಮಾಡ್ತಾನಂತೆ. ಇದರಿಂದ ಬೇಸತ್ತಿರುವ ಯುವತಿ ಕಾಲೇಜಿಗೆ ಹೋಗುವುದನ್ನೇ ನಿಲ್ಲಿಸಿಬಿಟ್ಟಿದ್ದಾಳೆ ಎಂದು ಹೇಳಿದ್ದಾರೆ.
ಮತ್ತೊಂದು ನೇಹಾ, ಅಂಜಲಿ ಘಟನೆಯಾಗುವ ಮುನ್ನ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಪಾಗಲ್ ಪ್ರೇಮಿಯ ಹೆಡೆಮುರಿ ಕಟ್ಟಬೇಕೆಂದು @SPBelagavi, @DCP_LO_Belagavi ರವರಲ್ಲಿ ಆಗ್ರಹಿಸಿದ್ದಾರೆ.




