ಬೆಂಗಳೂರು: ಕಾಂಗ್ರೆಸ್ ಪಕ್ಷ ತನ್ನ ಆಡಳಿತದ ಅವಧಿಯಲ್ಲಿ ಉದ್ಯೋಗ ಸೃಷ್ಟಿ ಮತ್ತು ಯುವ ಸಮೂಹಕ್ಕೆ ಉದ್ಯೋಗ ಕಲ್ಪಿಸುವಲ್ಲಿ ಯೋಜನೆ ರೂಪಿಸಿ ಕಾರ್ಯಗತಕ್ಕೆ ತಂದಿದೆ ಎಂದು ರಾಜಾಜಿನಗರ ಕಾಂಗ್ರೆಸ್ ವಿಧಾನಸಭೆ ಟಿಕೆಟ್ ಆಕಾಂಕ್ಷಿ ರಘುವೀರ್ ಗೌಡ ಹೇಳಿದರು.
ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ರಘುವೀರ್ ಗೌಡ ಹುಟ್ಟುಹಬ್ಬ ಅಚರಣೆ ಪ್ರಯುಕ್ತ 8000 ಮಹಿಳೆಯರಿಗೆ ಸೀರೆ ಮತ್ತು ಆಟೋ ಚಾಲಕರಿಗೆ ಸಮವಸ್ತ್ರಗಳನ್ನು ವಿತರಿಸಲಾಯಿತು. ಇದೇ ವೇಳೆ ಮಾತಾಡಿದ ಅವರು, ಕಾಂಗ್ರೆಸ್ ಪಕ್ಷ ಬಡವರ, ದೀನದಲಿತರ ಪರ ಹೋರಾಟ ಮಾಡುವ ಪಕ್ಷ. ಕಾಂಗ್ರೆಸ್ ಪಕ್ಷ ಆಡಳಿತದಲ್ಲಿ ಉದ್ಯೋಗ ಸೃಷ್ಟಿ ಮತ್ತು ಯುವ ಸಮೂಹಕ್ಕೆ ಉದ್ಯೋಗ ಕಲ್ಪಿಸುವಲ್ಲಿ ಯೋಜನೆ ರೂಪಿಸಿ ಕಾರ್ಯಗತಕ್ಕೆ ತಂದಿದೆ ಎಂದರು.
ಈ ಹಿಂದೆ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಬೆಂಗಳೂರು ನಗರ ಅಭಿವೃದ್ಧಿ ಮತ್ತು ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ ನೀಡಿದ ಪ್ರೋತ್ಸಾಹ, ಸಹಕಾರದಿಂದ ವಿಶ್ವದಲ್ಲಿ ನಮ್ಮ ನಗರ ಐ.ಟಿ.ಬಿ.ಟಿ. ಹಬ್ ಎಂದು ಖ್ಯಾತಿ ಗಳಿಸಿದೆ. ಲಕ್ಷಾಂತರ ಜನರಿಗೆ ಉದ್ಯೋಗ ಲಭಿಸಿದೆ ಎಂದರು.
ಕಾಂಗ್ರೆಸ್ ಪಕ್ಷದ ಯೋಜನೆಗಳ ಮೂಲಕ ಕೊಟ್ಯಂತರ ನಿರುದ್ಯೋಗ ಯುವಕ, ಯುವತಿಯರಿಗೆ ಸರಳ ಸಾಲ ಸೌಲಭ್ಯ ನೀಡಿ, ಸ್ವಾವಲಂಬಿ ಜೀವನ ನಡೆಸಲು ಸಹಕಾರ ನೀಡಿದೆ ಎಂದರು.
ರಾಜಾಜಿನಗರ ವಿಧಾನಸಭಾ ಕ್ಷೇತ್ರ ನನ್ನ ಕುಟುಂಬದಂತೆ. ಅವರ ನೋವು, ನಲಿವುಗಳಿಗೆ ಜೊತೆಯಾಗಿ ಸದಾಕಾಲ ನಿಂತಿದ್ದೇನೆ. ಜನರ ನಡುವೆ, ಜನರ ಸಮಸ್ಯೆ ಅಲಿಸುವ ಕೆಲಸ ಕಳೆದ ಮಾಡುತ್ತಾ ಬಂದಿದ್ದೇನೆ, ಕ್ಷೇತ್ರದ ಜನರು ನನ್ನನ್ನು ಮನೆ ಮಗನಂತೆ ಕಾಣುತ್ತಾರೆ. ಅವರ ಸೇವೆ ಮಾಡುವುದು ನನ್ನ ಜೀವನದ ಪುಣ್ಯ. ನನ್ನ ಸಮಾಜಸೇವೆ ಮತ್ತು, ರಾಜಕೀಯ ಕ್ಷೇತ್ರದಲ್ಲಿ ಯಶ್ವಸಿಯಾಗಲು ಜನರ ಪ್ರೀತಿ, ವಿಶ್ವಾಸವೇ ಕಾರಣ ಎಂದರು.
ಸಂಕ್ರಾಂತಿ ಹಬ್ಬ ವಿಶೇಷ ಹಬ್ಬ ಎಳ್ಳು, ಬೆಲ್ಲ, ಕಬ್ಬುಗಳನ್ನು ವಿತರಿಸಿ, ಎಲ್ಲರಿಗೂ ಬಾಳಿನಲ್ಲಿ ಸಿಹಿಯಾಗಿರಲಿ ಎಂದು ಶುಭ ಹಾರೈಸುವ ಹಬ್ಬವಾಗಿದೆ ಎಂದರು.
ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಮಹಾನಗರ ಪಾಲಿಕೆಯ ಮಾಜಿ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.




