ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯದ ಬಿಸಿ ತಟ್ಟಲಿದೆಯೇ?

3 years ago

ಬೆಂಗಳೂರು: ಪರ್ಯಾಯ ಸಮ್ಮೇಳನ ಇವತ್ತಿನ ತುರ್ತು ಅಗತ್ಯ ಎಂದು ಹಿರಿಯ ಜಾನಪದ ವಿದ್ವಾಂಸ ಪ್ರೊ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

https://m.facebook.com/story.php?story_fbid=pfbid037C3VZBrRuHnYTR6cSYPX2BfAKKMAJPt6q2AVW9S533HS1Mg8ckwoNZqoFSjUVfhpl&id=100007936930070&mibextid=Nif5oz

ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಲೇಖಕರನ್ನು ಕಡೆಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ದಾವಣಗೆರೆ ಅಥವಾ ಬೆಂಗಳೂರು ಅನುಕೂಲ. ಕೋಲಾರ, ಮೈಸೂರು, ಶಿವಮೊಗ್ಗವೂ ಆದೀತು. ದೇವನೂರು ಬರಬೇಕು. ಬರಗೂರು ಇರಬೇಕು. ರಾಜೇಂದ್ರ ಚೆನ್ನಿ, ಅರುಣ್‌ ಜೋಳದಕೂಡ್ಲಿಗಿ, ಬಿ ಎಂ ಹನೀಫ್‌ ಮೊದಲಾದವರು ಬರುತ್ತಾರೆ. ಅವರವರದೇ ಖರ್ಚು. ಸಭಾಂಗಣ, ಮಧ್ಯಾಹ್ಯ ಊಟ, ಧ್ವನಿವರ್ಧಕ, ಚಹಾ ಇತ್ಯಾದಿಗಳಿಗೆ ಕ್ರೌಡ್‌ ಫಂಡಿಂಗ್‌ ಮಾಡೋಣ. ನಾನು ನನ್ನ ಖರ್ಚಲ್ಲಿ ಬರುತ್ತೇನೆ. ಸತ್ಯನಾರಾಯಣ ಪೂಜೆಗೆ ಸುದ್ದಿ ಕೇಳಿಯೇ ಹೋಗಬೇಕಂತೆ. ಇದೂ ಹಾಗೆಯೇ ಆಗಲಿ. ಸಮ್ಮೇಳನದಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ. ಯಾವುದೂ ಯಃಕಶ್ಚಿತವೂ ಅಲ್ಲ. ಯಾರಾದರೂ ಸಮರ್ಥ ನಾಯಕತ್ವ ಕೊಡಿ! ಎಂದಿದ್ದಾರೆ.

https://m.facebook.com/story.php?story_fbid=pfbid0Dw1zwBbvL39LY2iiq2PhM7GUNsyjmwgorNpgcp3BR99UaAkuaaRQdRfdpN7iHoKml&id=100013329571933&mibextid=Nif5oz

ಜೊತೆಗೆ, ಹಾವೇರಿಯ ಕನ್ನಡ ಸಾಹಿತ್ಯ ಸಮ್ಮೇಳನದಿಂದ ಮುಸ್ಲಿಂ ಲೇಖಕರನ್ನು ಹೊರಗಿಟ್ಟಿರುವುದು ಆಕಸ್ಮಿಕ ಏನೂ ಅಲ್ಲ. ನೆಹರೂ ಅಂಥ ಲೇಖಕರನ್ನೇ ಹೊರಗಿಟ್ಟವರಿವರು. ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ತನ್ನ ನಿಲುವನ್ನು ನೇರವಾಗಿಯೇ ಪ್ರಕಟಿಸಬೇಕು ( ಕೆಲವರನ್ನು ಕರೆದಿದ್ದು ಅವರು ಬರುವುದಿಲ್ಲ ಎಂದೂ ಹೇಳಿರಬಹುದು!) ಈ ಸಂದರ್ಭದಲ್ಲಿ ನಾವು ಕೆಲವು ಮುಸ್ಲಿಂ ಲೇಖಕರ ಹೆಸರನ್ನಾದರೂ ನೆನಪು ಮಾಡಿಕೊಳ್ಳೋಣ ಎಂದಿದ್ದಾರೆ.

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಶಿಶುನಾಳ ಷರೀಫರೇ ನಮಗೆ ಸಿಗುವ ಮೊದಲ ಮಹತ್ವದ ಕವಿ. ಆನಂತರ ಕೆ ಎಸ್‌ ನಿಸಾರ್‌ ಅಹಮದ್‌ , ಬೊಳುವಾರು ಮಹಮ್ಮದ್‌ ಕುಞಿ, ಸಾರಾ ಅಬೂಬಕರ್ ,‌ ಹಸನ್ ನಯೀಂ ಸುರಕೋಡ, ರಹಮತ್‌ ತರೀಕರೆ ಮೊದಲಾದವರು ಕನ್ನಡದ ಸುಪ್ರಸಿದ್ಧ ಲೇಖಕರು. ಬೊಳುವಾರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕಿತ್ತು. ಅವರಿಗೆ ಜ್ಞಾನಪೀಠ ಪ್ರಶಸ್ತಿಯೂ ಬರಬೇಕು. ದಾದಾಪೀರ್‌ ಜೈನ್ ಅವರಿಗೆ ಈ ಸಲದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಸಬೀಹಾ ಭೂಮಿ ಗೌಡರು ಲೇಖಕಿಯಾಗಿ ಪ್ರಸಿದ್ಧರು ಎಂದಿದ್ದಾರೆ.

ಒಂದಾದರೂ ಪುಸ್ತಕ ಪ್ರಕಟಿಸಿದ ಮುಸ್ಲಿಂ ಲೇಖಕರು ಬಹಳ ಜನ ಇದ್ದಾರೆ. ಬಹುಶ: ಮುಂದಿನ ೧೦ ವರ್ಷದಲ್ಲಿ ಕನ್ನಡದ ಲೇಖಕರೆಂದರೆ ಮುಸ್ಲಿಮರೇ ಆಗಿರುತ್ತಾರೆ. ಅವರಲ್ಲಿ ನನಗೆ ಕೂಡಲೇ ನೆನಪಿಗೆ ಬರುವವರೆಂದರೆ, ಆರಿಫ್‌ ರಾಜಾ, ಎ ಕೆ ಕುಕ್ಕಿಲ, ಬಿ ಎಂ ಬಷೀರ್, ಇಸ್ಮಾಯಿಲ್ , ಮಹಮ್ಮದ್‌ ಕುಳಾಯಿ , ಗಂಗಾವತಿ ಸಲೀಮಾ, ಅಬ್ಬುಸ್ಸಲಾಮ್ ಪುತ್ತಿಗೆ , ಇಬ್ರಾಹಿಂ ಸಯೀದ್ ಸಾಬ್, ಸಲಾಂ ಸಮ್ಮಿ , ಬಾನು ಮುಷ್ತಾಕ್ , ಫಾತಿಮಾ ರಲಿಯಾ, ಕೆ ಷರೀಫಾ , ಡಿ ಬಿ ರಜಿಯಾ , ಜಹಾನ್ ಆರಾ , ಎ ಎಸ್ ಮಕಾನದಾರ , ಬಿ ಪೀರ್ ಭಾಷಾ, ಅಜಮೀರ ನಂದಾಪುರ, ದಸ್ತಗೀರ್ ದಿನ್ನಿ , ಇಮಾಮ್ ಹಡಗಲಿ, ಮುಸ್ತಾಫಾ, ಡಾ. ಮಕ್ತೂಂಬಿ ಮುಲ್ಲಾ, ಶಿ ಜು ಪಾಶಾ, ಮೆಹಬೂಬ್ಬಿ ಶೇಖ್ , ಸಿರಾಜ್ ಬಿಸರಳ್ಳಿ , ನಜ್ಮಾ ನಜೀರ್ ಚಿಕ್ಕನೇರಳೆ, ಮುನವ್ವರ್ ಜೋಗಿಬೆಟ್ಟು, ಬಿ ಎಂ ಹನೀಫ್‌, ಮೆಹಬೂಬಭಾಷಾ ಮಕಾನದಾರ , ಬಾಬು ಮನಸೇ, ಹಕೀಂ ಪದಡ್ಕ, ಹಸನ್ಮುಖಿ ಬಡಗನ್ನೂರು, ಆಸೀಫಾ, ನೂರಜಾನ್, ಸಕೀನಾ ಬೇಗಂ, ಸುನೈಫ್ ವಿಟ್ಲ, ಇಮಾಮ್ ಹಡಗಲಿ, ಅಮೀರಸಾಬ ವಂಟಿ, ಉಮರ್ ದೇವರಮನಿ, ಅಮೀನ್ ಅತ್ತಾರ್, ಸಯ್ಯದ್ ಸಿಕಂದರ್ ಮೀರ್ ಅಲಿ, ಚಾಂದ್ ಕವಿಚಂದ್ರ, ಕಾ ಹು ಚಾನಪಾಶಾ, ಸೈಫ್ ಜಾನ್ಸೆ, ರಾಜೇಸಾಬ ಬಾಗವಾನ್, ಶರೀಫ್ ಹಸಮಕಲ್, ಆಶಿಖ್ ಮುಲ್ಕಿ , ಇಮಾಮ್ ಗೋಡೆಕಾರ , ಸಿಹಾನಾ ಎಂ ಬಿ ಮೊದಲಾದವರು. ( ಈ ಪಟ್ಟಿ ಸಮಗ್ರ ಅಲ್ಲ ಅಂತ ನನಗೆ ತಿಳಿದಿದೆ, ನಿಮಗೆ ತಿಳಿದಿರುವ ಬೇರೆ ಹೆಸರುಗಳು ದಯವಿಟ್ಟು ಸೇರಿಸಿ). ಹಿಂದೊಮ್ಮೆ ಪರ್ಯಾಯ ಸಮ್ಮೇಳನ ನಡೆಸಿದ್ದೆವು. ನಾವೆಲ್ಲ ಮನಸು ಮಾಡಿದರೆ ಅದನ್ನು ಸುರು ಮಾಡುವುದು ಕಷ್ಟ ಅಲ್ಲ ಎಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅವರು ಕೊಟ್ಟಿರುವ ಕರೆಗೆ ಕನ್ನಡ ಸಾಹಿತ್ಯ ಲೋಕ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎಂಬುದರ ಮೇಲೆ ಇದರ ಯಶಸ್ಸು ನಿಂತಿದೆ.

Leave a Reply