ಬಗರ್ ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿದವರಿಗೆ ಸಿಹಿ ಸುದ್ದಿ

3 years ago

ಬೆಂಗಳೂರು: ಬಗರ್ ಹುಕುಂ ಯೋಜನೆಯಡಿ ಭೂಮಿಯ ಹಕ್ಕು ಪಡೆದುಕೊಳ್ಳಲು ಚಾತಕ ಪಕ್ಷಿಗಳಂತೆ ಹಲವಾರು ವರ್ಷಗಳವರೆಗೆ ಕಾಯುತ್ತಿದ್ದ ನಗರ ಪ್ರದೇಶಗಳ ಜನರಿಗೆ ರಾಜ್ಯ ಸರ್ಕಾರ ಖುಷಿ ಕೊಡುವ ಸಂಗತಿಯೊಂದನ್ನು ಪ್ರಕಟಿಸಿದೆ.

ನಗರಗಳು ಮತ್ತು ನಗರ ಪುರಸಭೆ ಪರಿಮಿತಿಯೊಳಗೆ ಬಗರ್ ಹುಕುಂ ಭೂಮಿ ಮಂಜೂರು ಮಾಡುವ ಕುರಿತು ಕಂದಾಯ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಇದರನ್ವಯ ಭೂ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಬಗರ್ ಹುಕುಂ ಸಾಗುವಳಿ ಭೂ ಮಂಜೂರಾತಿ ಭರವಸೆಯಡಿ ಸರಕಾರ ಹಲವು ಬಾರಿ ಅರ್ಜಿ ಸ್ವೀಕರಿಸಿದೆ. ಇದರ ನಡುವೆಯೇ ಷರತ್ತು, ನಿಯಮದ ಹೆಸರಲ್ಲಿ ಭೂ ಮಂಜೂರಾತಿಯನ್ನು ತಡೆದಿದೆ.

ಸುಮಾರು 3 ದಶಕದಿಂದ ಅರ್ಜಿದಾರರು ಮಾತ್ರ ಜಾತಕಪಕ್ಷಿಯಂತೆ ಕಾದರೂ ಹಕ್ಕುಪತ್ರ ಮಾತ್ರ ದೊರೆತಿರಲಿಲ್ಲ. ಬಗರ್ ಹುಕುಂ ಸಾಗುವಳಿ ರೈತರಿಗೆ ಇದೀಗ ಫಾರಂ-57ರಡಿ ಅರ್ಜಿ ಸಲ್ಲಿಸಲು ಸರಕಾರ ಪುನಃ ಅವಕಾಶ ನೀಡಲು ನಿರ್ಧರಿಸಿದೆ.

ಈಗಾಗಲೇ ಸಲ್ಲಿಸಿದ ಅರ್ಜಿ ವಿಲೇವಾರಿ ಪ್ರಕ್ರಿಯೆಯನ್ನು ಸರಕಾರ ಪೂರ್ಣಗೊಳಿಸಿಲ್ಲ. ವಿವಿಧ ವರ್ಗೀಕರಣ ಭೂ ಪ್ರದೇಶ ಮಂಜೂರಾತಿ ತಿರಸ್ಕರಿಸಿ ಬಹುತೇಕ ಅರ್ಜಿಯನ್ನು ಸರಕಾರ ವಜಾಗೊಳಿಸುತ್ತಿದೆ. ಅರ್ಜಿ ಸ್ವೀಕರಿಸಲು ತೋರಿಸುವ ಉತ್ಸಾಹವನ್ನು ಭೂ ಮಂಜೂರಾತಿಗೆ ತೋರಿಸುತ್ತಿಲ್ಲ ಎಂಬ ಅಪವಾದ ಸರಕಾರದ ಮೇಲಿತ್ತು.

ಅರ್ಜಿ ಸಲ್ಲಿಸಲು ಅವಕಾಶ ನೀಡಿರುವ ಸರಕಾರ ಬಗರ್‍ಹುಕುಂ ಸಾಗುವಳಿ ರೈತರಲ್ಲಿ ಭೂ ಮಂಜೂರಾತಿ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಇದೀಗ ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎನ್. ಜಯರಾಮ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ನಿರ್ದಿಷ್ಟಪಡಿಸಿರುವ ಪರಿಮಿತಿಗಳಿಂದ ಅಂತರದೊಳಗೆ ಬರುವ ಭೂಮಿಯನ್ನು ಮಂಜೂರು ಮಾಡತಕ್ಕದ್ದಲ್ಲ ಎಂದು ಸೂಚನೆ ನೀಡಲಾಗಿದೆ.

ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94(ಎ)ರನ್ವಯ ವಿಧಾನಸಭಾ ಕ್ಷೇತ್ರವಾರು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗಳನ್ನು ರಚಿಸಿ, ಅವುಗಳ ಮುಖಾಂತರ ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 94ಎ, 94ಬಿ ಹಾಗೂ 94ಎ(4)ರಡಿ ಮಂಜೂರು ಮಾಡಲು ಅವಕಾಶವಿರುತ್ತದೆ.

ರಚಿತವಾದ ಸಮಿತಿಗಳು ಕಲಂ 94ಎ(4)ರನ್ವಯ ನಗರಗಳು ಮತ್ತು ನಗರ ಪುರಸಭೆಗಳ ಪರಿಮಿತಿಯೊಳಗೆ ಬರುವ ಪ್ರದೇಶಗಳಲ್ಲಿ ನಿರ್ದಿಷ್ಟಪಡಿಸಿರುವ ಪರಿಮಿತಿಗಳಿಂದ ಅಂತರದೊಳಗೆ ಬರುವ ಭೂಮಿಯನ್ನು ಮಂಜೂರು ಮಾಡತಕ್ಕದ್ದಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕರ್ನಾಟಕ ನಗರ ಪಾಲಿಕೆಗಳ ಅನಿಯಮ, 1976ರ ಅಡಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಂತರ 18 ಕಿ. ಮೀ ಇರಬೇಕು. ಕರ್ನಾಟಕ ನಗರ ಪಾಲಿಕೆಗಳ ಅನಿಯಮ, 1976ರ ಉಪಬಂಧಗಳಡಿ ಅನುಕ್ರಮವಾಗಿ ಬರುವ ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ- ಧಾರವಾಡ, ಮಂಗಳೂರು ಮತ್ತು ಮೈಸೂರು ನಗರಗಳು ಮತ್ತು ಕರ್ನಾಟಕ ನಗರ ಪಾಲಿಕೆಗಳ ಅನಿಯಮ, 1976ರ ಉಪಬಂಧಗಳಡಿ ಬರುವ ಇತರ ನಗರ ಪಾಲಿಕೆಗಳು 10 ಕಿ. ಮೀ., ಕರ್ನಾಟಕ ಪೌರಸಭೆಗಳ ಅಧಿನಿಯಮ, 1964ರ ಉಪಬಂಧಗಳ ಅಡಿಯಲ್ಲಿ ಬರುವ ಎಲ್ಲಾ ನಗರ ಪೌರಸಭೆಗಳು 5 ಕಿ. ಮೀ. ವ್ಯಾಪ್ತಿಯಲ್ಲಿರಬೇಕು.

ಕರ್ನಾಟಕ ಪೌರಸಭೆಗಳ ಅನಿಯಮ, 1964ರ ಉಪಬಂಧಗಳ ಅಡಿಯಲ್ಲಿನ ಎಲ್ಲಾ ಪೌರಸಭೆಗಳು ಮತ್ತು ಪಟ್ಟಣ ಪಂಚಾಯತ್‍ಗಳು 3 ಕಿ. ಮೀ ವ್ಯಾಪ್ತಿಯ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶವನ್ನು ಕಳುಹಿಸಲಾಗಿದೆ.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಾಗೂ ಅದರ ಸರಹದ್ದಿನಿಂದ ನಿರ್ಬಂಸಿರುವ ಅಂತರದ ಒಳಗೆ ಇರುವ ಜಮೀನುಗಳನ್ನು ಸಕ್ರಮಗೊಳಿಸುವುದು ಕಾನೂನು ಬಾಹಿರ ಎಂದು ಸರ್ಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Leave a Reply