ಕರ್ನಾಟಕ ರಾಜ್ಯ ಸಾಹಿತಿ ಕಲಾವಿದರ ಸಾಂಸ್ಕೃತಿಕ ಚಿಂತಕರ ಸಂಘ ಸಂಸ್ಥೆಗಳ ಒಕ್ಕೂಟದ ಸಭೆ
ಬೆಂಗಳೂರು: ರವೀಂದ್ರ ಕಲಾ ಕ್ಷೇತ್ರದ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ದಿ.01.12 2023 ರಂದು “ಕರ್ನಾಟಕ ರಾಜ್ಯ ಸಾಹಿತಿ ಕಲಾವಿದರ ಸಾಂಸ್ಕೃತಿಕ ಚಿಂತಕರ ಸಂಘ ಸಂಸ್ಥೆಗಳ ಒಕ್ಕೂಟ” ಕರೆದಿದ್ದ ಸಭೆಯಲ್ಲಿ, ಕಲಾವಿದರ ಮತ್ತು ಸಂಘ ಸಂಸ್ಥೆಗಳ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಿ, ನಿರ್ಣಯಿಸಲಾಯಿತು.

ಪ್ರಮುಖ ನಿರ್ಣಯಗಳು:
* ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾವಿದರು ಸಾಹಿತಿಗಳು ಮತ್ತು ಸಂಘ ಸಂಸ್ಥೆಗಳಿಗೆ ಮಾರಕವಾಗಿರುವ ನಿಯಮಾವಳಿಗಳನ್ನು ಕೂಡಲೇ ತಿದ್ದುಪಡಿ ಮಾಡಲು ಹಕ್ಕುತಾಯ.
* ಸಂಘ ಸಂಸ್ಥೆಗಳ ಧನಸಹಾಯ ಯೋಜನೆಯ ಪ್ರಸ್ತುತ ಮಾರ್ಗಸೂಚಿ ಕೂಡಲೇ ರದ್ದು ಮಾಡಿ ಸರ್ವ ಸಮ್ಮತವಾದ ನಿಯಮಾವಳಿಗಳನ್ನು ರೂಪಿಸಲು ಆಗ್ರಹ.
* ಒಂದು ಸಂಘ ಸಂಸ್ಥೆಗಳಿಗೆ ಕನಿಷ್ಠ 5 ಲಕ್ಷ ಮಿತಿಗೊಳಿಸುವುದು ಹಿರಿಯ ಸಂಸ್ಥೆಗಳಿಗೆ 15 ಲಕ್ಷ ದವರೆಗೆ ಧನ ಸಹಾಯ ನೀಡುವುದು.
* ಇಲಾಖೆಯೂ ಕಲಾವಿದರು ಸಾಹಿತಿಗಳು ಮತ್ತು ಸಂಘ ಸಂಸ್ಥೆಗಳ ಪ್ರಮುಖರೊಂದಿಗೆ ಚರ್ಚಿಸದೆ ಇಲಾಖೆಯ ಮೂಗಿನ ನೇರಕ್ಕೆ ರೂಪಿಸಿರುವ ನಿಯಮಾವಳಿಗಳನ್ನು ರದ್ದುಗೊಳಿಸುವುದು.
* ಸಂಸ್ಕೃತಿ ಇಲಾಖೆ ಮುಂದೆ ರೂಪಿಸುವ ಕಲಾವಿದರ ಸಂಘ-ಸಂಸ್ಥೆಗಳ ಧನಸಹಾಯ ಯೋಜನೆಯ ರೂಪರೇಷೆಯಲ್ಲಿ ಕಡ್ಡಾಯವಾಗಿ ಸಂಘ ಸಂಸ್ಥೆಗಳ ಪ್ರಮುಖರು ಕಲಾವಿದರು ಸಾಹಿತಿಗಳನ್ನು ಒಳಗೊಳ್ಳುವುದು.
* ಧನಸಹಾಯ ಯೋಜನೆಯಂತೆ ಕಿರಿಯ ಮತ್ತು ಹಿರಿಯ ಸಂಸ್ಥೆ ಎಂದು ಗುರುತಿಸಿ ಧನಸಹಾಯಕ್ಕೆ ಪರಿಗಣಿಸುವುದು 2023-24ರ ಕ್ರಿಯಾ ಯೋಜನೆಯಲ್ಲಿ ಪ್ರತ್ಯೇಕ ಹಣ ಹಣ ಮೀಸಲು ಇಡುವುದು.
* ಆರ್ಟಿಜಿಎಸ್ ಹಾಗೂ ಕಲಾತಂಡ ಆಪ್ ರದ್ದುಗೊಳಿಸುವುದು.
* ಸಂಸ್ಥೆಗಳನ್ನು ಅನಗತ್ಯವಾಗಿ ತಿರಸ್ಕರಿಸುವುದು ಅವೈಜ್ಞಾನಿಕವಾಗಿದೆ. ಸಂಸ್ಥೆಗಳನ್ನು ಸಹ ಗುಣಮಟ್ಟದ ಆಧಾರದ ಮೇಲೆ ಧನಸಾಯಕ್ಕೆ ಪರಿಗಣಿಸುವುದು.
ಹೀಗೆ ಸಂಘ ಸಂಸ್ಥೆಗಳ ಪ್ರಮುಖರು ಕಲಾವಿದರು ಸಾಹಿತಿಗಳು ಚಿಂತಕರು ರಂಗ ತಜ್ಞರು ಭಾಗವಹಿಸಿ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. ಸರಕಾರ ಈ ವಿಚಾರಗಳಲ್ಲಿ ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ಮುಂದೆ ಬೃಹತ್ ಪ್ರತಿಭಟನೆ, ಕಲಾವಿದ ಹಕ್ಕೊತ್ತಾಯ ಮೆರವಣಿಗೆ ನಡೆಸಲು ಹೋರಾಟದ ರೂಪರೇಷೆಯನ್ನು ತಯಾರಿಸಲು ನಿರ್ಣಯಿಸಲಾಯಿತು.
ಪ್ರಮುಖವಾಗಿ ಸಭೆಯನ್ನು ಮುನ್ನಡೆಸಿದವರು ಕುಮಾರ್ ಕೆಎಚ್, ವೈಕೆ ಮುದ್ದುಕೃಷ್ಣ, ಪ್ರತಿಭಾ, ನಾರಾಯಣ್, ಡಾ. ಎಆರ್ ಗೋವಿಂದ್ ಸ್ವಾಮಿ ನಾಯಕ್, ತಮಟೆ ನಾಗರಾಜು, ಮಾಲತೇಶ್ ಬಡಿಗೇರ್, ಶ್ರೀನಾಥ್, ರವೀಂದ್ರ ಸೊರಗಾವಿ, ಕಿಕ್ಕೇರಿ ಕೃಷ್ಣಮೂರ್ತಿ, ಮೃತ್ಯುಂಜಯ ದೊಡ್ಡವಾಡ, ಸವಿತಾ ಗಣೇಶ್, ಪ್ರಸಾದ್ ಸಬರದ, ಪುಣ್ಯಶ್ ಕುಮಾರ್, ಶಂಕರ ಭಾರತಿಪುರ, ಸಬ್ಬನಹಳ್ಳಿ ರಾಜು, ಸಮತಾವಾಣಿ ಸುಧಾಕರ್, ಡಬ್ಲ್ಯೂ ಎಚ್ ಶಾಂತಕುಮಾರ್, ಜಲಮಂಡಳಿ, ರಾಮಚಂದ್ರ, ರಾಜೇಗೌಡ, ಆತ್ಮಾನಂದ ಮುಂತಾದ ಸಾಹಿತಿ ಕಲಾವಿದರು, ಸಂಘ ಸಂಸ್ಥೆಗಳ ಪ್ರಮುಖರು, ಚಿಂತಕರು ಮುಂತಾದವರ ಭಾಗವಹಿಸಿದ್ದರು.




