ಎಐಸಿಸಿ ಅಧ್ಯಕ್ಷರಾಗಿ ಖರ್ಗೆ ಆಯ್ಕೆ: ಸಾವಳಗಿಯಲ್ಲಿ ಸಂಭ್ರಮಾಚರಣೆ

4 years ago

ಬಾಗಲಕೋಟೆ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಚುನಾಯಿತರಾದ ಹಿನ್ನಲೆಯಲ್ಲಿ ಸಾವಳಗಿ ಕಾಂಗ್ರೆಸ್ ಪಕ್ಷದ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುವ ಮೂಲಕ ವಿಜಯೋತ್ಸವ ಆಚರಿಸಿದರು.

ಇದೇ ವೇಳೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯತಿ ಸದಸ್ಯ ಅನೀಲ ತೀಕೋಟಾ, ಮಲ್ಲಿಕಾರ್ಜುನ ಖರ್ಗೆಯವರ ಪ್ರಾಮಾಣಿಕತೆಗೆ ಸಂದ ಜಯ ಇದಾಗಿದ್ದು, ಇದರಿಂದ ಪಕ್ಷದ ಸಂಘಟನೆಗೆ ಹಾಗೂ ಬಲವರ್ಧನೆಗೆ ಶಕ್ತಿ ತುಂಬಿದಂತಾಗಿದೆ ಎಂದರು.

ಈ ಸಂದರ್ಭದಲ್ಲಿ ಸಾಗರ ಕಾಂಬಳೆ, ಅಮೀತ ಸೂರಗೊಂಡ, ಸನತಕುಮಾರ ತಳಕೇರಿ, ಸತೀಶ ತಿಕೋಟಾ, ಸಿದ್ದು ಬಂಡಿವಡ್ಡರ, ನಿಂಗಪ್ಪ ಹರಿಜನ, ಪಿಂಟು ತಳಕೇರಿ, ಅಭಿ ತಿಕೋಟಾ, ಸಂಜು ಮಾಂಗ ಹಾಗೂ ಅನೇಕರು ಉಪಸ್ಥಿತರಿದ್ದರು.

Leave a Reply