ನರೇಂದ್ರಮೋದಿರವರ ಪರಿಶ್ರಮದಿಂದ ದೇಶ ಸಮ್ಮದ್ದಿಯಾಗಿದೆ: ಎಸ್.ಸುರೇಶ್ ಕುಮಾರ್

4 years ago

ಬೆಂಗಳೂರು: ಸಾಮಾನ್ಯ ಕಾರ್ಯಕರ್ತ ದೇಶದ ಪ್ರಧಾನಿಯಾಗಬಹುದು ಎಂದು ಬಿಜೆಪಿ ತೋರಿಸಿದೆ ಎಂದು ಶಾಸಕ ಎಸ್.ಸುರೇಶ್ ಕುಮಾರ್ ಹೇಳಿದರು.

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ದಯಾನಂದನಗರ ವಾರ್ಡ್ ನಲ್ಲಿ ಪ್ರಧಾನಿ ನರೇಂದ್ರಮೋದಿ ಹುಟ್ಟುಹಬ್ಬದ ಪ್ರಯುಕ್ತ ನರೇಂದ್ರಮೋದಿ ಜೀವನ ಚರಿತ್ರೆ ಛಾಯಾಚಿತ್ರ ಪ್ರದರ್ಶನ, ಸೇವಾ ಪಾಕ್ಷಿಕ ಉದ್ಘಾಟನೆ ಮತ್ತು ರಕ್ತದಾನ ಶಿಬಿರ, ಕೊವಿಡ್-19ಲಸಿಕಾ ಶಿಬಿರ ಮತ್ತು ಸಾಧಕರಿಗೆ ಸನ್ಮಾನ, ಕಾರ್ಮಿಕರ ಕಿಟ್, ವಿಧವಾ ವೇತನ, ಪಿಂಚಣಿ ವಿತರಣೆ, ಅರ್ಹ ಫಲಾನುಭವಿಗೆ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವದ ಅತಿ ಹೆಚ್ಚು ಸಂಖ್ಯೆ ಸದಸ್ಯರನ್ನು ಹೊಂದಿರುವ ಬಿ.ಜೆ.ಪಿ.ಪಕ್ಷ ಜನ ಸಾಮಾನ್ಯರ ಪಕ್ಷವಾಗಿದೆ ಎಂದರು.

ಪ್ರಧಾನಿ ನರೇಂದ್ರಮೋದಿಯವರು 8 ವರ್ಷದ ಆಡಳಿತದಲ್ಲಿ ಭಾರತ ಉಜ್ವಲ ಭವಿಷ್ಯವಿದೆ ಮತ್ತು ಇಡಿ ವಿಶ್ವವೆ ಭಾರತದ ಸ್ನೇಹ ಬಯಸುತ್ತಿದೆ ಎಂದರು.

ನರೇಂದ್ರಮೋದಿಯವರ ಕನಸಿನ ಚಿಂತನೆಯಾದ ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಚಿಂತನೆ ಮೂಲಕ ರಾಜಾಜಿನಗರದಲ್ಲಿ ಕೊವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಹತ್ತು ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಯಿತು ಮತ್ತು ಲಕ್ಷಾಂತರ ಲಸಿಕೆ ಹಾಕಿಸಲಾಯಿತು ಎಂದರು.

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮತ್ತು ಕಾರ್ಮಿಕರಿಗೆ ಹಲವಾರು ಯೋಜನೆಗಳ ಲಾಭ ತಲುಪಿಸಲಾಗಿದೆ. ಕಾರ್ಮಿಕರ ಕಿಟ್, ಒಂಟಿ ಮನೆ ಯೋಜನೆ, ವಿಕಲಚೇತನರ ಮತ್ತು ವಿಧವಾ ವೇತನ ಹಲವಾರು ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲಾಗಿದೆ. ಮೋದಿಯವರ ಪರಿಶ್ರಮದಿಂದ ಇಂದು ದೇಶ ಸಧೃಡ ಮತ್ತು ಸಮ್ಮದ್ದಿಯಾಗಿದೆ ಎಂದರು.

ಮಾಜಿ ಉಪ ಮೇಯರ್ ರಂಗಣ್ಣ, ಉಸ್ತುವಾರಿ ಅಶ್ವಥ್ ನಾರಾಯಣ್, ರಾಘವೇಂದ್ರರಾವ್, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಎಂ.ಮುನಿರಾಜು, ಶಕೀಲ ಮುನಿರಾಜು ಮತ್ತು ರಾಜಾಜಿನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷಸಂಜಯ್ ಕುಮಾರ್, ಮಹಾನಗರ ಪಾಲಿಕೆ ಸದಸ್ಯರಾದ ರಾಜಣ್ಣ,ದೀಪಾ ನಾಗೇಶ್, ಬಿ.ಜೆ.ಪಿ. ಮುಖಂಡರಾದ ಬಿ.ಎನ್.ಶ್ರೀನಿವಾಸ್, ಸುದರ್ಶನ್, ಗುರುಮೂರ್ತಿ, ಕಿರಣ್, ಮುನ್ನಬಾಯಿ ಮೊದಲಾದವರು ಇದ್ದರು.

Leave a Reply