ಆರ್.ಆರ್. ನಗರದಲ್ಲಿ ಆಂಬುಲೆನ್ಸ್ ಕೊರತೆಯಾದರೆ ಕರೆಮಾಡಿ: ನೀನಾಸಂ ಮಂಜು

5 years ago

ಬೆಂಗಳೂರು: ಕಳೆದ 1 ವಾರದಿಂದ ಬೆಂಗಳೂರಿನಲ್ಲಿ ಕೊರೊನಾ 2ನೇ ಅಲೆ ಹಿನ್ನೆಲಯಲ್ಲಿ ತೀವ್ರ ಸಮಸ್ಯೆಯಾಗಿದೆ ಈ ಹಿನ್ನೆಲೆಯಲ್ಲಿ ಸ್ಯಾಂಡಲ್ ವುಡ್ ನಿರ್ದೇಶಕ ನೀನಾಸಂ ಮಂಜು ನೆರವಾಗುವುದಾಗಿ ಘೋಷಿಸಿದ್ದಾರೆ.

ಈ ವಿಷಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಅವರು, ನಮಸ್ಕಾರ ಗೆಳೆಯರೇ, ಕೊರೋನಾ ಪ್ರಾಬ್ಲಮ್ ಎಲ್ಲರಿಗೂ ತಿಳಿದಿರುವ ವಿಷಯ. ಅದನ್ನೇ ಮತ್ತೆಮತ್ತೆ ಮಾತಾಡುವ ಬದಲು ಪ್ರಾಬ್ಲಮ್ ಕ್ಲಿಯರ್ ಆಗ್ಬೇಕು ಅಂದ್ರೆ lock down ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ನಂತರದಲ್ಲಿ ಮನೆಯಲ್ಲಿ ಕುಳಿತು ಕೆಲಸವಿಲ್ಲದೆ ನರಳುವವರಿಗೆ ಮತ್ತು ಕೊರೊನಾ ಪೀಡಿತರಿಗೆ ಕರ್ನಾಟಕದ ಎಲ್ಲಾ ರಾಜಕೀಯ ಧುರೀಣರು ಮತ್ತು ಸಿನೆಮಾ ಸ್ಟಾರ್ ಗಳು ಮತ್ತು ದೊಡ್ಡದೊಡ್ಡ ಉದ್ಯಮಿಗಳು ಸಹಾಯ ಮಾಡಲು ಮುಂದಾಗಲೇಬೇಕು. ಏಕೆಂದರೆ ಜನರು, ಅಭಿಮಾನಿಗಳು ಚೇನ್ನಾಗಿದ್ದರೆ ಮಾತ್ರ  ಎಲ್ಲರ ಬದುಕು ಹಸನಾಗುತ್ತದೆ ಎಂದು ಅವರು ರಾಜಕಾರಣಿಗಳಿಗೆ, ಸಿನಿಮಾ ಕ್ಷೇತ್ರದವರಿಗೆ, ಉದ್ಯಮಿಗಳಿಗೆ ಕರೆ ನೀಡಿದ್ದಾರೆ.

ನನ್ನ ಕಯ್ಯಲ್ಲಿ ಆಗುವ ಸಹಾಯವನ್ನು ಮಾಡಲು ನಾನು ಸದಾಕಾಲವೂ ಸಿದ್ದನಿದ್ದೇನೆ. ಕಷ್ಟಕ್ಕಾಗಿ ಮಾತ್ರ ಕರೆಮಾಡಿ. ದಯವಿಟ್ಟು ದುರುಪಯೋಗ ಮಾಡಿಕ್ಕೊಳ್ಳಬೇಡಿ ಆಂಬ್ಯುಲೆನ್ಸ್ ತಕ್ಷಣ ಸಿಗದೆ ಹೋದರೆ ಆರ್.ಆರ್.ನಗರದಲ್ಲಿ ನನಗೆ ಕರೆಮಾಡಿ ಎಂದು ಅವರು ಹೇಳಿದ್ದಾರೆ.

ಒಂದು ವೇಳೆ ನಿಮಗೆ ಅಗತ್ಯವಿದ್ದರೆ, ಈ 9972969646 ನಂಬರ್ ಗೆ ಕರೆ ಮಾಡಿ.

Leave a Reply