ಹುಬ್ಬಳ್ಳಿ: ಕೌಟುಂಬಿಕ ಕಲಹದಿಂದ ಬೇಸತ್ತು ಅತ್ತಿಗೆಯನ್ನೇ ಹತ್ಯೆ ಮಾಡಿದ ಮೈದುನನ್ನು, ಕೊಲೆ ಮಾಡಿದ ಇಪ್ಪತ್ನಾಲ್ಕು ಗಂಟೆಯ ಒಳಗೆ ಆರೋಪಿಯನ್ನು ಕುಂದಗೋಳ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮದ ಸುನಂದಾ ಮೆಣಸಿನಕಾಯಿ ಹತ್ಯೆಯಾದ ಮಹಿಳೆ. ನಿನ್ನೆ ಹಾಡುಹಗಲೇ ಕುಡಗೋಲಿನಿಂದ ಮಹಿಳೆಯನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಂಬಂಧಿಗಳ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಕುಂದಗೋಳ ಠಾಣೆ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಗೆ ರವಾನೆ ಮಾಡಿ ಪರಿಶೀಲಿಸಿದ್ದರು.




