ಲಾಸ್ ಏಂಜಲೀಸ್: ಪಾಪ್ ಸ್ಟಾರ್ ಮೈಕೆಲ್ ಜಾಕ್ಸನ್ ಕುರಿತು ಅನೇಕ ಕತೆಗಳು ಪ್ರಚಲಿತವಾಗಿವೆ. ಅವರ ಡ್ರಗ್ಸ್ ಚಟಕ್ಕೆ ಅವುಗಳ ಖರೀದಿಗೆ 19 ನಕಲಿ ಗುರುತಿನ ಚೀಟಿಗಳನ್ನು ಹೊಂದಿದ್ದರು ಎಂದು ವರದಿಯಾಗಿದೆ.
2009 ರಲ್ಲಿ ಮೈಕಲ್ ಜಾಕ್ಸನ್ (50 ವರ್ಷ) ಲಾಸ್ ಏಂಜಲೀಸ್ ಮನೆಯಲ್ಲಿ ಹೃದಯಸ್ತಂಭನಕ್ಕೊಳಗಾಗಿ ಕಾಲವಶರಾದರು. ಇವರ ಸಾವಿಗೆ ವೈದ್ಯರು ನಿಯಮಿತವಾಗಿ ಕೊಡುತ್ತಿದ್ದ ಅರಿವಳಿಕೆ ಪ್ರೊಪೋಫೋಲ್ ಎಂಬ ಔಷಧವೇ ಕಾರಣ ಎನ್ನಲಾಗಿತ್ತು. ಇವೆಲ್ಲವುಗಳ ನಡುವೆ ಜಾಕ್ಸನ್ ವೈದ್ಯರ ವಿರುದ್ಧ ನರಹತ್ಯೆ ಆರೋಪದಡಿ 4 ವರ್ಷ ಜೈಲು ಶಿಕ್ಷೆ ನೀಡಲಾಗಿತ್ತು.
19 ನಕಲಿ ಐಡಿಗಳನ್ನು ಜಾಕ್ಸನ್ ಹೊಂದಿದ್ದ ಮಾಹಿತಿ ಜಾಕ್ಸನ್ ಕುರಿತ ಟಿಎಂಝೆಡ್ ಇನ್ವೆಸ್ಟಿಗೇಟ್ಸ್ ಎಂಬ ಸಾಕ್ಷ್ಯಚಿತ್ರದಲ್ಲಿ ದಾಖಲಿಸಲಾಗಿದೆ. ಟಿಎಂಝೆಡ್ ಇನ್ವೆಸ್ಟಿಗೇಟ್ಸ್ ಡಾಕ್ಯುಮೆಂಟರಿ ಮುಂದಿನ ತಿಂಗಳು ಫಾಕ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಸಾಧ್ಯತೆ ಇದೆ.
