ಹೆರಾತ್ ನಲ್ಲಿ ಸ್ಫೋಟ: 18 ಬಲಿ- ಸಾವಿನ ಸಂಖ್ಯೆ ಏರುವ ನಿರೀಕ್ಷೆ

4 years ago

ಹೆರಾತ್ ನಲ್ಲಿ ಸ್ಫೋಟ: 18 ಬಲಿ- ಸಾವಿನ ಸಂಖ್ಯೆ ಏರುವ ನಿರೀಕ್ಷೆ

ಹೆರಾತ್: ಪಶ್ಚಿಮ ಅಫ್ಘಾನಿಸ್ತಾನದ ಜನನಿಬಿಡ  ಹೆರಾತ್‌ನಲ್ಲಿರುವ ಗುಜರ್ಗಾ ಮಸೀದಿಯಲ್ಲಿ ಮಸೀದಿಯಲ್ಲಿ ಸಂಭವಿಸಿದ ನಮಾಜ್ ವೇಳೆ ಸ್ಫೋಟಕ್ಕೆ ಧರ್ಮಗುರು ಸೇರಿ 18 ನಾಗರಿಕರು ಬಲಿಯಾಗಿದ್ದಾರೆ ಎಂದು ತಾಲಿಬಾನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜೊತೆಗೆ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದಿದ್ದಾರೆ.

ಅಫ್ಘಾನಿಸ್ತಾನದ ಪಾಶ್ಚಿಮಾತ್ಯ ಬೆಂಬಲದ ಸರ್ಕಾರಗಳ ವಿರುದ್ಧದ ಟೀಕೆಯಿಂದಾಗಿ ಅಫ್ಘಾನಿಸ್ತಾನದಾದ್ಯಂತ  ಪ್ರಮುಖ ಧರ್ಮಗುರು ಮುಜಿಬ್-ಉಲ್ ರೆಹಮಾನ್ ಅನ್ಸಾರಿ ಹೆಸರುವಾಸಿಯಾಗಿದ್ದರು. ಅವರು ಈ ಸ್ಪೋಟದಲ್ಲಿ ಬಲಿಯಾಗಿದ್ದಾರೆ

ಅನ್ಸಾರಿ ತಾಲಿಬಾನ್‌ಗೆ ನಿಕಟ ಸಂಪರ್ಕದಲ್ಲಿದ್ದು  ಅವರ ಸಾವಿನ ಕುರಿತಿ ತಾಲಿಬಾನ್ ಮುಖ್ಯ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ. ಅಫ್ಘಾನಿಸ್ತಾನದ ಸಚಿವಾಲಯದ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವು ಸಂಭವಿಸಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಈ ಹಿಂದೆ ನಡೆದ ಮಸೀದಿ ಮೇಲಿನ ದಾಳಿಗಳನ್ನು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಗುಂಪು ಹೊತ್ತುಕೊಂಡಿತ್ತು. ಈ ಸಂಘಟನೆ ತಾಲಿಬಾನ್ ಅನ್ನು ಗುರಿಯಾಗಿಸಿಕೊಂಡು ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರ ವಿರುದ್ಧ ಸರಣಿ ದಾಳಿಗಳನ್ನು ನಡೆಸುತ್ತಲೆ ಇದೆ. ಆದರೆ ಈ ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.

Leave a Reply