“ಮಗಳು ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು. ಮಗಳನ್ನು ನಾನು ಶಾಲೆಗೆ ಬಿಡಲು ಹೋದಾಗ ಮಗಳ ಸಹಪಾಠಿ, “ನಿಮ್ಮಮ್ಮ ಕಾರ್ಪೋರೇಶನ್ ಯುನಿಫಾರ್ಮ್ ಹಾಕ್ಕೊಂಡು ಬಂದಿದ್ದಾರೆ, ವಾಸನೆ.. ದೂರ ಕೂತ್ಕೋ..ನನ್ನ ಪಕ್ಕ ಬರಬೇಡ” ಅಂತ ಹೀಯಾಳಿಸಿ ದೂರ ತಳ್ಳಿದಳಂತೆ!”
- ಹಾರಿಕಾ ಮಂಜುನಾಥ್ ವಿದೇಶಿ ವಿಶ್ವವಿದ್ಯಾಲಯಗಳಿಂದ ಡಿಗ್ರಿ ಪಡೆದಿದ್ದಾರೆಯೇ?
- ಪೌರ ಕಾರ್ಮಿಕರ ದಿರಿಸಿನಲ್ಲಿ ಡಿ ಕೆ ಶಿವಕುಮಾರ್
- ಹಾಸನದಲ್ಲಿ ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ‘ನಾನೇಕೆ ನಾಸ್ತಿಕ’ ಸಮಾವೇಶ
- ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 25 ಸೀಟು ಕೂಡ ಬರುವುದಿಲ್ಲ: ಆರ್.ಅಶೋಕ
- ನಕಲಿ ಔಷಧಿ ತಯಾರಕರು, ಮಾರಾಟಗಾರರನ್ನು ಶಿಕ್ಷಿಸಿ
ಅರಮನೆ ಮೈದಾನದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿ, ಈ ಘಟನೆಯನ್ನು ನೆನೆದು ಪೌರಕಾರ್ಮಿಕೆ ತಾಯಿಯೊಬ್ಬರು ಕಣ್ಣೀರು ಹಾಕಿದ ವಿಡಿಯೋ ನೋಡಿ ಮನಸ್ಸಿಗೆ ಅತೀವ ನೋವಾಯಿತು. ಶ್ರಮದಲ್ಲೇ ಶಿವನನ್ನು ಕಾಣುವ ಪೌರಕಾರ್ಮಿಕರೇ ನಿಜವಾದ ಕಾಯಕಯೋಗಿಗಳು. ಅವರಿಲ್ಲದೆ ನಮ್ಮ ನಗರಗಳು ಸ್ವಚ್ಛವಾಗಿರಲು ಹಾಗೂ ನಾವೆಲ್ಲರೂ ಆರೋಗ್ಯವಾಗಿರಲು ಸಾಧ್ಯವೇ ಇಲ್ಲ.
ಇದಕ್ಕಾಗಿಯೇ ಕಾರ್ಯಕ್ರಮದಲ್ಲಿ ನಾನು ಅವರ ಸಮವಸ್ತ್ರವನ್ನು ಧರಿಸಿ, ಅವರೊಂದಿಗೆ ಕುಳಿತು ಊಟ ಮಾಡಿದೆ. ಇದೊಂದು ತೋರಿಕೆಯ ನಡೆಯಲ್ಲ, ನಮ್ಮ ಸುಸಂಸ್ಕೃತ ಸಮಾಜದಲ್ಲಿ ಇಂತಹ ಅಸ್ಪೃಶ್ಯ ಮನೋಭಾವನೆ ಸಂಪೂರ್ಣವಾಗಿ ತೊಲಗಬೇಕು ಎಂಬ ಆಶಯ.
ಜಗಜ್ಯೋತಿ ಬಸವಣ್ಣನವರು ಹೇಳಿದಂತೆ:
“ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ
ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯಾ”
ಮಾನವೀಯತೆಯೇ ಧರ್ಮವಾಗಿರುವ ಈ ನಾಡಿನಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣೋಣ. ನಮ್ಮ ಆಪತ್ಬಾಂಧವರಾದ ಪೌರಕಾರ್ಮಿಕರನ್ನು ಮತ್ತು ಅವರ ಶ್ರೇಷ್ಠ ಕಾಯಕವನ್ನು ನಾವೆಲ್ಲರೂ ಗೌರವಿಸೋಣ.
– ಡಿ ಕೆ ಶಿವಕುಮಾರ್, ಸಿಎಂ





