ಕರಡು ಮತದಾರರ ಪಟ್ಟಿ ಪ್ರಕಟ
ಜಿಲ್ಲೆಯಲ್ಲಿ 12,98,219 ಮತದಾರರು
ಸೆಪ್ಟೆಂಬರ್ 23 ರೊಳಗೆ ಹಕ್ಕು-ಆಕ್ಷೇಪಣೆಗೆ ಅವಕಾಶ
ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಸೂಚನೆ
ದಾವಣಗೆರೆ: ಎಸ್.ಐ.ಆರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಕರಡು ಮತದಾರರ ಪಟ್ಟಿಯನ್ವಯ ಜಿಲ್ಲೆಯಲ್ಲಿ 12,98,219 ಮತದಾರರಿದ್ದಾರೆ. ಮತದಾರರು ತಮ್ಮ ಹಕ್ಕು ಮತ್ತು ಆಕ್ಷೇಪಣೆಳಿದ್ದರೆ ಸೆಪ್ಟೆಂಬರ್ 23ರೊಳಗೆ ನಿಗದಿತ ನಮೂನೆಯಲ್ಲಿ ತಮ್ಮ ಹಕ್ಕುನ್ನು ಪ್ರತಿಪಾದಿಸಬಹುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದರು.
- ದಾವಣಗೆರೆಯಲ್ಲಿ ಎಸ್.ಐ.ಆರ್ ಪೂರ್ಣ
- ನೆಲ ಮಾಳಿಗೆಗಳನ್ನು ಕಡ್ಡಾಯವಾಗಿ ವಾಹನ ನಿಲುಗಡೆ ಉದ್ದೇಶಕ್ಕೆ ಬಳಸಲು ಆದೇಶಿಸಿ
- ಮಿಷನ್ ಶಕ್ತಿ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ಅರ್ಜಿ ಆಹ್ವಾನ
- ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಂದ ಪಿಹೆಚ್ಡಿ ಫೆಲೋಶಿಪ್ಗೆ ಅರ್ಜಿ ಆಹ್ವಾನ
- ದುರಾಡಳಿತ ಮತ್ತು ಭ್ರಷ್ಟಾಚಾರ ಸಹಿಸುವುದಿಲ್ಲ: ನ್ಯಾ.ಬಿ.ಎಸ್.ಪಾಟೀಲ್
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಕರಡು ಮತದಾರರ ಪಟ್ಟಿ ಕುರಿತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯಾದ್ಯಂತ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ, ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ವೇಳೆ ಜಿಲ್ಲೆಯಲ್ಲಿ ಒಟ್ಟು 14,99,282 ಮತದಾರರಿದ್ದು, ಎಲ್ಲಾ ಮತದಾರರಿಗೂ ಗಣತಿ ನಮೂನೆಗಳನ್ನು ವಿತರಿಸಲಾಗಿತ್ತು. ಗಣತಿ ನಮೂನೆಗಳನ್ನು ಭರ್ತಿ ಮಾಡಿ ವಾಪಸ್ ನೀಡಿದವರಲ್ಲಿ 12,98,219 ಫಾರಂಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಜಿಲ್ಲೆಯು ಒಟ್ಟಾರೆಯಾಗಿ ಶೇಕಡಾ 86.59 ರಷ್ಟು ಪ್ರಗತಿ ಸಾಧಿಸಿದೆ ಎಂದರು.
108 – ಮಾಯಕೊಂಡ ಕ್ಷೇತ್ರದಲ್ಲಿ ಒಟ್ಟು 1,97,048 ಮತದಾರರಿದ್ದು, 1,84,535 ಇ-ಫಾರಂಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ಜಿಲ್ಲೆಯಲ್ಲೇ ಗರಿಷ್ಠ ಶೇಕಡಾ 93.65 ರಷ್ಟು ಸಾಧನೆ ಮಾಡಲಾಗಿದೆ. 110 – ಹೊನ್ನಾಳಿ ಕ್ಷೇತ್ರದಲ್ಲಿ ಒಟ್ಟು 2,00,033 ಮತದಾರರಲ್ಲಿ 1,83,606 ಫಾರಂಗಳನ್ನು (ಶೇಕಡಾ 91.79) ಡಿಜಿಟಲೀಕರಣಗೊಳಿಸಲಾಗಿದೆ. 109 ಚನ್ನಗಿರಿ ಕ್ಷೇತ್ರದಲ್ಲಿ 2,03,628 ಮತದಾರರ ಪೈಕಿ 1,85,593 ಫಾರಂಗಳನ್ನು (ಶೇಕಡಾ 91.14) ಹಾಗೂ 103 – ಜಗಳೂರು ಕ್ಷೇತ್ರದಲ್ಲಿ 2,00,836 ಮತದಾರರಲ್ಲಿ 1,80,936 ಫಾರಂಗಳನ್ನು (ಶೇಕಡಾ 90.09) ಡಿಜಿಟಲೀಕರಣಗೊಳಿಸಿ ಉತ್ತಮ ಪ್ರಗತಿ ದಾಖಲಿಸಲಾಗಿದೆ ಎಂದರು.
105 – ಹರಿಹರ ಕ್ಷೇತ್ರದಲ್ಲಿ 2,11,023 ಮತದಾರರ ಪೈಕಿ 1,90,022 ಫಾರಂಗಳು (ಶೇಕಡಾ 90.05) ಡಿಜಿಟಲೀಕರಣಗೊಂಡಿವೆ. ಇನ್ನುಳಿದಂತೆ 106 – ದಾವಣಗೆರೆ ಉತ್ತರ ಕ್ಷೇತ್ರದಲ್ಲಿ 2,58,718 ಮತದಾರರಲ್ಲಿ 1,99,136 ಫಾರಂಗಳು (ಶೇಕಡಾ 76.97) ಮತ್ತು 107 – ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 2,27,996 ಮತದಾರರಲ್ಲಿ 1,74,391 ಫಾರಂಗಳು (ಶೇಕಡಾ 76.49) ಡಿಜಿಟಲೀಕರಣಗೊಂಡಿವೆ ಎಂದರು.
ಮತದಾರರು ಕರಡು ಮತದಾರರ ಪಟ್ಟಿಯನ್ನು ತಮ್ಮ ಮತಗಟ್ಟೆ ಕೇಂದ್ರ, ಗ್ರಾಮ ಪಂಚಾಯಿತಿ ಕಚೇರಿ, ನಗರಸಭೆ/ಪುರಸಭೆ, ಪಟ್ಟಣ ಪಂಚಾಯಿತಿ, ತಾಲ್ಲೂಕು ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ www.ceokarnataka.kar.nic.in ಮತ್ತು https://davanagere.nic.in ಜಾಲತಾಣಗಳಲ್ಲಿ ಪರಿಶೀಲಿಸಬಹುದು. ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ECINET App ಮೂಲಕವೂ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
2027 ಜನವರಿ 1, ಏಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1ಕ್ಕೆ 18 ವರ್ಷ ಪೂರ್ಣಗೊಳ್ಳುವವರು ಹಾಗೂ ಅರ್ಹ ಮತದಾರರು ಸಂಬಂಧಿಸಿದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಲ್ಲದವರು ಹಾಗೂ ಹೆಸರು ಕೈಬಿಟ್ಟು ಹೋಗಿರುವವರು ಹಾಗೂ ಮತದಾರರ ಪಟ್ಟಿಯಲ್ಲಿ ಮಾಹಿತಿಯನ್ನು ತಿದ್ದುಪಡಿ ಮಾಡಿಸಬೇಕಾದಲ್ಲಿ ಮತ್ತು ಅದೇ ವಿಧಾನಸಭಾ ಕ್ಷೇತ್ರದ ಬೇರೆ ಮತಗಟ್ಟೆಗೆ ವರ್ಗಾಯಿಸಬೇಕಾಗಿದ್ದಲ್ಲಿ ನಿಗದಿಪಡಿಸಿರುವ ನಮೂನೆಗಳಲ್ಲಿ ಇಂದಿನಿಂದ ಅಕ್ಟೋಬರ್ 22ರೊಳಗೆ ಅರ್ಜಿಗಳಲ್ಲಿ ಭರ್ತಿ ಮಾಡಿ ಮತದಾನ ಕೇಂದ್ರದಲ್ಲಿ, ತಾಲ್ಲೂಕು ಕಚೇರಿಯಲ್ಲಿ, ಮತದಾರರ ನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ನೀಡಿ ಸ್ವೀಕೃತಿ ಪಡೆಯಬಹುದಾಗಿದೆ ಎಂದರು.
ನಮೂನೆ 6 (Form 6) ಅನ್ನು ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅಥವಾ 18 ವರ್ಷ ತುಂಬಿದ ಹೊಸ ಮತದಾರರ ನೋಂದಣಿಗೆ. ನಮೂನೆ 6A (Form 6A) ಅನಿವಾಸಿ ಭಾರತೀಯ (NRI) ಮತದಾರರ ನೋಂದಣಿಗೆ. ನಮೂನೆ 7 (Form 7) ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಅಥವಾ ಆಕ್ಷೇಪಣೆ ಸಲ್ಲಿಸಲು ನಮೂನೆ 8 (Form) ವಿಳಾಸ ಬದಲಾವಣೆ, ಹೆಸರು/ಮಾಹಿತಿ ತಿದ್ದುಪಡಿ ಹಾಗೂ ಹೊಸ ವೋಟರ್ ಐಡಿ ಕಾರ್ಡ್‌ಗಾಗಿ ಸಲ್ಲಿಸಬಹುದು ಪ್ರತಿಯೊಂದು ನಮೂನೆಯ ಜೊತೆಗೆ ಕಡ್ಡಾಯವಾಗಿ ಡಿಕ್ಲರೇಷನ್ (ಘೋಷಣಾಪತ್ರ) ನೀಡಬೇಕಾಗುತ್ತದೆ ಎಂದರು.
ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಮಹಾನಗರ ಪಾಲಿಕೆ ಆಯುಕ್ತ ಮಹಾಂತೇಶ್ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.



