ಬಲ್ಕೀಶ್ ಬಾನು ಜೊತೆ ಕರ್ನಾಟಕ: ನ್ಯಾಯಕ್ಕಾಗಿ ಹೋರಾಡಲು ಕರೆ

4 years ago

ದಾವಣಗೆರೆ: ಸಂಗಾತಿಗಳೇ, ನಿಮ್ಮೆಲ್ಲರಿಗು ಗೊತ್ತಿರುವ ಹಾಗೆ ಬಲ್ಕೀಶ್ ಬಾನು ಒಬ್ಬರ ತಾಯಿ, ಹೆಂಡತಿ, ಅಕ್ಕ, ಮಗಳು ಮತ್ತು ಈ ದೇಶದ ಮಗಳು ಕೂಡ ಎಂದು ಸಾಮಾಜಿಕ ಹೋರಾಟಗಾರ್ತಿ ಜಬೀನಾ ಖಾನಂ ಹೇಳಿದ್ದಾರೆ.
2002ರ ಗುಜರಾತ್ ಭೀಕರ ಹತ್ಯಾಕಾಂಡ ಎಲ್ಲರನ್ನು ಬೆಚ್ಚಿಬೀಳಿಸಿತ್ತು. ಈ ನರಮೇಧ ನಡೆಯುವ ಸಂದರ್ಭದಲ್ಲಿ ಇಡೀ ಕುಟುಂಬವನ್ನು ತನ್ನ ಕಣ್ಣಮುಂದೆ ಕೊಚ್ಚಿ ಹಾಕಿದ್ದಲ್ಲದೆ, ಯಾರ ಮುಂದೆ ಬಲ್ಕೀಶ್ ಬಾನು ಹುಟ್ಟು ಬೆಳೆದಿದ್ದಳೊ, ಅವರೇ ಯಾವ ಮಾನವೀಯತೆಯನ್ನು ಲೆಕ್ಕಿಸದೆ 20 ಜನರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ತನ್ನ 3 ವರ್ಷದ ಮಗಳು ಸಾಲೇಹಳನ್ನು ಕಲ್ಲಿಗೆ ಜಜ್ಜಿ ಸಾಯಿಸಿರುವ ದಾರುಣ ಕೃತ್ಯ ಎಲ್ಲರಿಗೂ ಗೊತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಹತ್ಯಾಕಾಂಡದಲ್ಲಿ ಭಾಗಿಯಾದ 11 ಜನ ಅತ್ಯಾಚಾರಿ ಕೊಲೆಗಡುಕರನ್ನು ಜನವರಿ 21, 2008ರಂದು ಜೀವಾವಧಿ ಶಿಕ್ಷೆಗೆ ಒಳಗಾಗಿದ್ದು, ಸ್ವಾತಂತ್ರ್ಯ ಅಮೃತ ಮಹೊತ್ಸವದಂದು ಬಿಡುಗಡೆಗೊಳಿಸಿದ್ದು ಖಂಡನಾರ್ಹ. 27/08/2022ರಂದು ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, “ಬಲ್ಕೀಶ್ ಬಾನು ಜೊತೆ ಕರ್ನಾಟಕ” ಹೆಸರಿನಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಆದ್ದರಿಂದ ಎಲ್ಲಾ ಸೌಹಾರ್ದ ಮನಸ್ಸುಳ್ಳ ಸಂಗಾತಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಬಲ್ಕೀಶ್ ಬಾನುಗೆ ನ್ಯಾಯ ಸಿಗಲಿ ಎಂದು ಒತ್ತಾಯಿಸೋಣ ಎಂದು ಅವರು ಕರೆ ನೀಡಿದ್ದಾರೆ.

Leave a Reply