ದೇಶದಲ್ಲಿ ಆಹಾರ ಪದಾರ್ಥಗಳ ತೊಂದರೆ ಇದೆ ಎಂದು ಪ್ರತಿ ಸೋಮವಾರ ತಾವು ಉಪವಾಸ ಮಾಡುವ ನಿರ್ಧಾರವನ್ನು ಮಾಡಿದ ಲಾಲ್ ಬಹುದ್ದೂರ್ ಶಾಸ್ತ್ರಿಯವರ ನೆನಪಿನ ನಡುವೆ ಇಂದಿನ ನಮ್ಮನ್ನಾಳುವ ನಾಯಕರುಗಳು.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಸಮಸ್ಯೆಗಳು ಎಷ್ಟೇ ಇದ್ದರೂ ಉದಾರವಾಗಿ ಭೂಮಿಯನ್ನು ಕೊಡಲು ಬಂದ ವ್ಯಕ್ತಿ ಗಳಿಂದ ಅದನ್ನು ನಿರಾಕರಿಸಿ ಸ್ವಾಭಿಮಾನದಿಂದ ಬದುಕಿದ ಶಾಂತವೇರಿ ಗೋಪಾಲಗೌಡರು ಮತ್ತು ಕಡಿದಾಳ ಮಂಜಪ್ಪ ಇವರ ನೆನಪಿನ ನಡುವೆ ಇಂದಿನ ನಮ್ಮ ನಾಯಕರುಗಳು.
ಸುಮಾರು ಏಳು ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಿದ್ದರು ಬೆಂಗಳೂರು ನಗರದಲ್ಲಿ ತಮ್ಮದೇ ಆದ ಸ್ವಂತ ಮನೆಯನ್ನು ಹೊಂದಿರದೆ ನಿವೃತ್ತಿಯ ನಂತರ ತಮ್ಮ ಹುಟ್ಟೂರು ಚಿತ್ರದುರ್ಗದಲ್ಲಿ ಬದುಕಿದ ನಿಜಲಿಂಗಪ್ಪನವರ ಆದರ್ಶದ ನಡುವೆ ಇಂದಿನ ನಮ್ಮ ನಾಯಕರುಗಳು.
ಸಾವಿರಾರು ಶಿಕ್ಷಕರ ಹುದ್ದೆಯನ್ನು ತುಂಬುವ ಸಂದರ್ಭದಲ್ಲಿ ತಮ್ಮ ಕೈಗಳನ್ನು ಮತ್ತು ಮನಸ್ಸನ್ನು ಶುದ್ಧವಾಗಿ ಇಟ್ಟುಕೊಂಡು ಆದರ್ಶಪ್ರಾಯವಾಗಿ ನಡೆದುಕೊಂಡ ಸಚಿವರಾಗಿದ್ದ ಗೋವಿಂದೇಗೌಡರ ಪ್ರಾಮಾಣಿಕತೆಯ ಸಾರ್ವಜನಿಕ ಬದುಕಿನ ನಡುವೆ ಇಂದಿನ ನಾಯಕರುಗಳು.
ಕಾರ್ಮಿಕ ಸಚಿವರಾಗಿದ್ದು ಚುನಾವಣೆಯ ಸೋಲಿನ ನಂತರ ಜೀವನ ನಿರ್ವಹಣೆಗೆ ಮತ್ತೆ ನೌಕರರಾಗಿ ದುಡಿದು ತಮ್ಮ ಬದುಕಿನ ಸಾರ್ಥಕ ಸಾಧನೆಗಾಗಿ ಸರ್ಕಾರ ಕೊಟ್ಟ 10 ಲಕ್ಷ ರೂಪಾಯಿಗಳ ದೇವರಾಜ ಅರಸು ಪ್ರಶಸ್ತಿಯ ಮೊತ್ತವನ್ನು ಮರಳಿ ಸರ್ಕಾರಕ್ಕೆ ನೀಡಿದ ಮಾಜಿ ಸಚಿವ ಎಸ್ ಕೆ ಕಾಂತಾರವರಂತಹ ಸ್ವಚ್ಛ ರಾಜಕಾರಣಿಗಳ ನೆನಪಿನ ನಡುವೆ ಇಂದಿನ ನಮ್ಮ ನಾಯಕರುಗಳು.
ಕೇಂದ್ರದ ಸಚಿವರಾಗಿದ್ದರು ಹಲವಾರು ಬಾರಿ ಲೋಕಸಭಾ ಸದಸ್ಯರಾಗಿದ್ದರು. ಬದುಕಿನಲ್ಲಿ ಸಣ್ಣದಾದಂತಹ ಲೋಪವನ್ನು ಹೊಂದಿರದೆ ನಿಷ್ಟೂರವಾದ ನೇರವಾದ ಮಾತುಗಾರಿಕೆ ಮತ್ತು ಪಾರದರ್ಶಕ ಬದುಕಿನ ಮೂಲಕ ಸದಾ ಎಲ್ಲರನ್ನು ಎಚ್ಚರಿಸುವಂತೆ ಬದುಕುತ್ತಿರುವ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರಂತಹ ವ್ಯಕ್ತಿತ್ವಗಳ ನಡುವೆ ನಮ್ಮ ನಾಯಕರುಗಳು.
ಕಳಂಕ ರಹಿತ ಸ್ವಚ್ಛ ಬದುಕಿನ ಮುಖ್ಯಮಂತ್ರಿಗಳೆಂದು ಗುರುತಿಸಲ್ಪಟ್ಟಿರುವ, ನಂಬೂದ್ರಿ ಪಾದ್, ಜ್ಯೋತಿ ಬಸು, ಬುದ್ಧದೇವ ಭಟ್ಟಾಚಾರ್ಯ, ಮಾಣಿಕ್ ಸರ್ಕಾರ್, ಬಿ ಎನ್ ಚಕ್ರವರ್ತಿ, ಅಂಟೋನಿ ಮುಂತಾದವರ ವ್ಯಕ್ತಿತ್ವಗಳ ನಡುವೆ ನಮ್ಮ ನಾಯಕರುಗಳು.
ಪಟ್ಟಿ ಮಾಡುತ್ತಾ ಹೋದರೆ ಲಕ್ಷ್ಮಿ ಸಾಗರ್ ರವರಂತಹ ಮಂತ್ರಿಗಳು, ಟಿ ಆರ್ ಶಾಮಣ್ಣನಂತಹ ಜನಪ್ರತಿನಿಧಿಗಳು ಜಿ ನಾರಾಯಣ್ ರವರಂತಹ ವ್ಯಕ್ತಿತ್ವಗಳು ಸಾಲು ಸಾಲು ದೊರೆಯುತ್ತದೆ. ಇಂತವರ ವಿಚಾರಧಾರೆಗಳ ನೆನಪಿನ ನಡುವೆ ಕರ್ನಾಟಕದ ರಾಜಕಾರಣಿಗಳು.
ಸದಾ ತಮ್ಮ ಸಂಬಳ ಸವಲತ್ತು ಸೌಕರ್ಯ ಅಂತಸ್ತು ಅಧಿಕಾರ ಇವುಗಳ ಬಗ್ಗೆ ಚಿಂತಿಸುತ್ತಾ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವ ರಾಜಕಾರಣಿಗಳ ನಡುವೆ ಹಲವಾರು ಆದರ್ಶಗಳ ಮಾದರಿಗಳ ನೆನಪಿನಲ್ಲಿ ಇಂದು ಸಾರ್ವಜನಿಕ ಬದುಕು ಮುನ್ನಡೆದಿದೆ.
– ಕೆ ಎಸ್ ನಾಗರಾಜ್, ಬೆಂಗಳೂರು



