ಧ್ವಜ ನೀತಿಸಂಹಿತೆಯನ್ನು ಪಾಲಿಸದೆ ಬೇಕಾಬಿಟ್ಟಿ ಧ್ವಜವನ್ನು ಮಾಡಿ ಮಾರಾಟ ಮಾಡುತ್ತಿರುವುದು ಶಿಕ್ಷಾರ್ಹ ಅಪರಾಧ

4 years ago

ಬೆಂಗಳೂರು: ಬಿಜೆಪಿ ಕರೆ ನೀಡಿರುವ ಹರ್ ಘರ್ ತಿರಂಗಾ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಇಷ್ಟು ದಿನಗಳ ಕಾಲ ಇದ್ದ ಧ್ವಜ ಸಂಹಿತೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದು ಪಾಲಿಸ್ಟರ್ ಧ್ವಜವನ್ನು ಅಂಗೀಕರಿಸಲಾಗಿದೆ. ಇದರಿಂದಾಗಿ ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತಿದ್ದ ಖಾದಿ ಧ್ವಜ ಉತ್ಪಾದನಾ ಘಟಕ ಸಂಕಷ್ಟಕ್ಕೆ ಸಿಲುಕಿದೆ.

ಇದಷ್ಟೇ ಅಲ್ಲದೆ ಪಾಲಿಸ್ಟರ್ ಧ್ವಜ ಹಾರಿಸಲು ಅಂಗೀಕಾರ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರ ನಿಗದಿಪಡಿಸಿರುವ ಅಳತೆಯ ಧ್ವಜಗಳ ಬದಲಿಗೆ ಮನಸೋ ಇಚ್ಛೆ ಅಳತೆಯ, ಹರಿದ, ವಿಕಾರದ ಧ್ವಜಗಳ ರಾರಾಜಿಸತೊಡಗಿವೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದವರು ದೇಶಪ್ರೇಮಿಗಳೇ? ಎಂದು  ಜಗದೀಶ್ ಪ್ರಶ್ನಿಸಿದ್ದಾರೆ.

ಜೊತೆಗೆ, ಈಶ್ವರ್ ಪ್ರಸಾದ್ ಎನ್.ಎಸ್. ಎಂಬುವವರು ವಸ್ತುಸ್ಥಿತಿಯನ್ನು ಈ ರೀತಿ ವಿವರಿಸಿದ್ದಾರೆ. “ಇನ್ನೇನು ಕೆಲವೇ ದಿನಗಳಲ್ಲಿ ಭಾರತದ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ದೇಶದ ಎಲ್ಲೆಡೆ ವಿಜೃಂಭಣೆಯಿಂದ ಸಂತಸದಿಂದ ಆಚರಿಸುವ ನಿಟ್ಟಿನಲ್ಲಿ ಇಡೀ ದೇಶ ತಯಾರಿಯಲ್ಲಿದೆ ಹರ್ ಗರ್ ತಿರಂಗ…” ಎಂದಿದ್ದಾರೆ.

ಪ್ರತಿ ಮನೆಯಲ್ಲೂ ಬಾವುಟ ಅಭಿಯಾನವನ್ನು ಕೇಂದ್ರ ಸರ್ಕಾರ ಘೋಷಿಸಿದ್ದು ಕೇಂದ್ರ ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ಬರುವ ಅಂಚೆ ಕಚೇರಿಗಳಲ್ಲಿ 25 ರೂ.ಗಳಿಗೆ ದೇಶದ ಬಾವುಟವನ್ನು ಮಾರಾಟ ಮಾಡುವ ವ್ಯವಸ್ಥೆಯನ್ನು ಮಾಡಿದ್ದು ಸೂರತ್ ನಿಂದ ಯಾವುದೋ ಕಂಪನಿಯಲ್ಲಿ ತಯಾರಾದ ತೀರ ಕಳಪೆ ಮಟ್ಟದ ಬಾವುಟಗಳನ್ನು ಮಾರಾಟ ಮಾಡುತ್ತಿರುವುದು ಖಂಡನೀಯ ಎಂದಿದ್ದಾರೆ.

ಯಾವುದೇ ಧ್ವಜ ನೀತಿಸಂಹಿತೆಯನ್ನು ಪಾಲಿಸದೆ ಬೇಕಾಬಿಟ್ಟಿ ಧ್ವಜವನ್ನು ಮಾಡಿ ಮಾರಾಟ ಮಾಡುತ್ತಿರುವುದು ಶಿಕ್ಷಾರ್ಹ ಅಪರಾಧ. ಇದನ್ನ ತಯಾರು ಮಾಡಿದ ಮಾರಾಟ ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಚಿಕ್ಕನಾಯಕನಹಳ್ಳಿ ನಾಗರಿಕರು ಆಗ್ರಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಮಾರಾಟವನ್ನು ಕೂಡಲೇ ಕೂಡಲೇ ನಿಲ್ಲಿಸುವಂತೆ ಉತ್ತಮ ಗುಣಮಟ್ಟದ ಧ್ವಜಗಳನ್ನು ಮನೆಗಳಲ್ಲಿ ಮನೆಗಳಲ್ಲಿ ಹಾರಿಸುವ ವ್ಯವಸ್ಥೆಯನ್ನು ಸರ್ಕಾರ ರೂಪಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

Leave a Reply