ಮಂಗಳೂರು: ಹಿಂದೂಗಳ ವೋಟು ಹೆಚ್ಚಾಗಲು ಹಿಂದೂ ಹೆಣ್ಮಕ್ಕಳು ಮೂರಕ್ಕಿಂತ ಕಡಿಮೆ ಹೆರಬಾರದು ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
- ಎಲ್ಇಡಿ ಬೀದಿ ದೀಪ ಯೋಜನೆ ಅನುಷ್ಠಾನಗೊಂಡರೆ ಶೇ.61.01 ರಷ್ಟು ವಿದ್ಯುತ್ ಉಳಿತಾಯ: ಕೃಷ್ಣ ಬೈರೇಗೌಡ
- ಋಗ್ವೇದದ ಮಹತ್ವ ಮತ್ತು ಅಪೌರುಷೇಯ ತತ್ವದ ವಿಶ್ಲೇಷಣೆ
- ಸುರೇಶ್ ಕುಮಾರ್ ರಿಂದ ಕಾಂಗ್ರೆಸ್ ವಿರುದ್ದ ‘ಸಂವಿಧಾನಿಕ’ ಪೊಳ್ಳು ವಾದ !
- ಬುದ್ಧಿಜೀವಿ ನಟ ಎಂದು ಕರೆಯಲ್ಪಡುವ ಅನಂತನಾಗ್ ಅವರೊಂದಿಗಿನ ಒಂದು ಪ್ರಸಂಗ
- ಆರ್‌ಎಸ್‌ಎಸ್ ಮುಖ್ಯಸ್ಥರ ಪ್ರಕಾರ ಹಿಂದೂಗಳ ವಿಧಗಳು
ದೀಪಾವಳಿ ಪ್ರಯುಕ್ತ ಪುತ್ತೂರು ತಾಲೂಕಿನ ಉಪ್ಪಳಿಗೆಯಲ್ಲಿಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶ ಪ್ರಜಾಪ್ರಭುತ್ವ ದೇಶ. ಇಲ್ಲಿ ಜನಪ್ರತಿನಿಧಿಗಳು ಆಯ್ಕೆಯಾಗುವುದು ಜನಗಳ ವೋಟಿನ ಆಧಾರದ ಮೇಲೆ. ಹಾಗಾಗಿ, ಹಿಂದೂಗಳ ವೋಟು ಹೆಚ್ಚಾಗಲು ಹಿಂದೂ ಹೆಣ್ಮಕ್ಕಳು ಮೂರಕ್ಕಿಂತ ಕಡಿಮೆ ಹೆರಬಾರದು. ಹಿಂದೂಗಳ ಮನೆಯಲ್ಲಿ ವೋಟಿನ ಸಂಖ್ಯೆ ಕಡಿಮೆ ಆಗಬಾರದು. ಈ ಬಗ್ಗೆ ಹಿಂದೂ ದಂಪತಿಗಳು ನಿರ್ಣಯ ಮಾಡಿಕೊಳ್ಳಬೇಕು ಎಂದರು.
ಉಳ್ಳಾಲದಲ್ಲಿ ಹಿಂದೂ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ. ಯಾಕೆಂದರೆ ಅಲ್ಲಿನ ಬ್ಯಾರಿಗಳ ಮನೆಯಲ್ಲಿ ಆರರಿಂದ ಏಳು ಮಕ್ಕಳಿದ್ದಾರೆ. ಅಲ್ಲಾನ ಹೆಸರಿನಲ್ಲಿ ಅವರು ಮಕ್ಕಳು ಮಾಡುತ್ತಲೇ ಇದ್ದಾರೆ. ಹಿಂದೂಗಳಲ್ಲಿ ವೋಟಿಲ್ಲದ ಕಾರಣ ನಮ್ಮವರು ಸೋಲುತ್ತಿದ್ದಾರೆ ಎಂದರು.
ಉಳ್ಳಾಲದಲ್ಲಿ ಕೇವಲ 90 ಸಾವಿರ ಹಿಂದೂಗಳ ವೋಟಿದೆ. ಆದರೆ, ಒಂದು ಲಕ್ಷದ 10 ಸಾವಿರ ಬ್ಯಾರಿಗಳೇ ಇದ್ದಾರೆ. ಹಾಗಾಗಿ, ಖಾದರ್ ಗೆಲ್ಲುತ್ತಲೇ ಇದ್ದಾರೆ. ಹಾಗಾಗಿ, ಹಿಂದೂಗಳು ಮಕ್ಕಳು ಮಾಡಬೇಕು ಎಂದರು.




