ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಂತಹ 5 ಗ್ಯಾರಂಟಿ ಯೋಜನೆಗಳಲ್ಲಿ ಅತ್ಯಂತ ಪ್ರಮುಖವಾದ ಉಚಿತವಾಗಿ ಮಹಿಳೆಯರು ಪ್ರಯಾಣ ಮಾಡಲು ಅವಕಾಶ ಕಲ್ಪಿಸಿರುವ ಶಕ್ತಿ ಯೋಜನೆ ಅಪಾರ ಪ್ರಮಾಣದಲ್ಲಿ ಜನರ ಬದುಕನ್ನು ಬದಲಾಯಿಸಿದೆ ಎಂಬ ಅಂಶ ಅಧ್ಯಯನದಿಂದ ತಿಳಿದುಬಂದಿರುತ್ತದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಶಕ್ತಿ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಿರುತ್ತದೆ ಎಂಬ ಸಂತೋಷದ ವಿಷಯ. ಜೊತೆಗೆ ಈ ಯೋಜನೆಯ ಮೂಲಕ ರಾಜ್ಯದ ಬಹಳಷ್ಟು ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಕಾರಣವಾಗಿದೆ ಎಂಬ ಸಂಗತಿಯು ತಿಳಿದುಬಂದಿರುತ್ತದೆ.
ಅಧ್ಯಯನದ ಪ್ರಕಾರ ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಸೌಲಭ್ಯವನ್ನು ಕಲ್ಪಿಸಿಕೊಟ್ಟ ಹಿನ್ನೆಲೆಯಲ್ಲಿ ಬಹಳಷ್ಟು ಮಹಿಳೆಯರು ಈ ಮೊದಲು ಇದ್ದ ಕೆಲಸಕ್ಕಿಂತ ಮತ್ತಷ್ಟು ಹೆಚ್ಚಿನ ಸಂಬಳ ದೂರದ ಕೆಲಸಗಳಿಗೆ ಹೋಗಲು ಸಾಧ್ಯವಾಗಿರುತ್ತದೆ ಎಂಬುದನ್ನು ತಿಳಿಸಿರುತ್ತಾರೆ.
ಶಕ್ತಿ ಯೋಜನೆಯ ಕಾರಣದಿಂದ ವೈದ್ಯರನ್ನ ತಮ್ಮ ಆರೋಗ್ಯದ ಸಮಸ್ಯೆಗಳಿಗೆ ಸಂಪರ್ಕಿಸಲು ತುರ್ತು ಸಂದರ್ಭಗಳಲ್ಲಿ ಅನುಕೂಲವಾಗಿದೆ ಎನ್ನುವುದನ್ನು ತಿಳಿಸಿರುತ್ತಾರೆ.
ಶಕ್ತಿ ಯೋಜನೆಯ ಜಾರಿಯ ಹಿನ್ನೆಲೆಯಲ್ಲಿ ಬಹಳಷ್ಟು ಮಹಿಳೆಯರ ತಮ್ಮ ಸಂಪಾದನೆಯ ಶೇಖಡ ಮೂರನೇ ಒಂದು ಭಾಗವನ್ನು ಇದರಿಂದ ಉಳಿಸಿಕೊಂಡು ತಮ್ಮ ಸಂಸಾರದ ನಿರ್ವಹಣೆಗೆ ಬಳಸಿಕೊಳ್ಳಲು ಸಾಧ್ಯವಾಗಿರುವುದನ್ನು ತಿಳಿಸಿರುತ್ತಾರೆ.
ಶಕ್ತಿ ಯೋಜನೆಯ ಜಾರಿಯ ಪರಿಣಾಮದಿಂದಾಗಿ ಸಣ್ಣ ಪ್ರಮಾಣದಲ್ಲಿ ಸಂಬಳವನ್ನು ಪಡೆಯುತ್ತಿದ್ದ ಮಹಿಳೆಯರಿಗೆ ತುಂಬಾ ಅನುಕೂಲವಾಗಿ ಅವರ ಬದುಕಿಗೆ ತುಂಬಾ ಅನುಕೂಲವಾಗಿರುವುದನ್ನು ತಿಳಿಸಿರುತ್ತಾರೆ.
ಶಕ್ತಿ ಯೋಜನೆ ಅನುಷ್ಠಾನದಿಂದಾಗಿ ಬಹಳಷ್ಟು ಮಹಿಳೆಯರು ತಮ್ಮ ಬಹುದಿನದ ಕನಸುಗಳಾಗಿದ್ದ ಬೇರೆ ಬೇರೆ ಧಾರ್ಮಿಕ ಮತ್ತು ಐತಿಹಾಸಿಕ ಪ್ರದೇಶಗಳಿಗೆ ಭೇಟಿಕೊಟ್ಟು ಸ್ಥಳಗಳ ವೀಕ್ಷಣೆಯನ್ನು ಮಾಡಲು ಅನುಕೂಲವಾಗಿರುವುದನ್ನು ತಿಳಿಸಿರುತ್ತಾರೆ.
ಶಕ್ತಿ ಯೋಜನೆಯಿಂದ ಮಹಿಳೆಯರ ಆರ್ಥಿಕ ಪ್ರಗತಿಗೆ ಅನುಕೂಲವಾಗಿರುವುದರ ಜೊತೆಗೆ ಶೇಕಡ 95 ರಷ್ಟು ಮಹಿಳೆಯರ ಕುಟುಂಬದ ನಿರ್ವಹಣೆಗೆ ಅನುಕೂಲವಾಗಿರುವುದನ್ನು ತಿಳಿಸಿರುತ್ತಾರೆ.
ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಹೊಸ ಉದ್ಯೋಗಗಳನ್ನ ಹುಡುಕಿಕೊಂಡಿರುತ್ತಾರೆ. ಶೇಕಡ 80ರಷ್ಟು ಮಹಿಳೆಯರು ಶಕ್ತಿ ಯೋಜನೆಯ ಕಾರಣದಿಂದ ಪ್ರತಿವಾರವೂ ಕನಿಷ್ಠ 500 ರೂಪಾಯಿಗಳನ್ನು ಉಳಿತಾಯ ಮಾಡಿಕೊಂಡಿರುತ್ತಾರೆ. ಸಾಕಷ್ಟು ಪ್ರಮಾಣದಲ್ಲಿ ಮಹಿಳೆಯರು ಉದ್ಯೋಗಸ್ಥರಾಗಲು ಈ ಯೋಜನೆ ಅನುಕೂಲ ಕಲ್ಪಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮತ್ತು ಸಾರಿಗೆ ಸಚಿವರಾಗಿರುವ ರಾಮಲಿಂಗಾರೆಡ್ಡಿಯವರು ಶಕ್ತಿ ಯೋಜನೆ ಜಾರಿಯಲ್ಲಿ ಪ್ರಮುಖವಾದಂತಹ ಪಾತ್ರವನ್ನು ನಿರ್ವಹಿಸಿರುತ್ತಾರೆ.
ಶಕ್ತಿ ಯೋಜನೆ ಜಾರಿಗೆ ತಂದ ಹಿನ್ನೆಲೆಯಲ್ಲಿ ಬಸ್ ಗಳ ಸಂಖ್ಯೆ ಸಹ ಹೆಚ್ಚು ಮಾಡಿ ಮಹಿಳೆಯರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವುದರ ಜೊತೆಗೆ ಬಸ್ಸಿನಲ್ಲಿ ಪ್ರಯಾಣ ಮಾಡುವ ನಾಗರಿಕರಿಗೆ ತೊಂದರೆಯಾಗದಂತೆ ಕ್ರಮವನ್ನು ಕೈಗೊಂಡಿದ್ದಾರೆ.
ಶಕ್ತಿ ಯೋಜನೆ ಬಗ್ಗೆ ಲಘುವಾಗಿ ಮಾತನಾಡುವ ಅಥವಾ ಅದನ್ನು ಹಂಗಿಸಿ ಮಾತನಾಡುವ ಜನರು ಒಂದು ಬಾರಿ ದುಡಿಯುವ ಮಹಿಳೆಯರ ಮತ್ತು ಅತ್ಯಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡುವ ಹಾಗೂ ನಿರ್ದಿಷ್ಟ ಸಂಪಾದನೆ ಇಲ್ಲದೆ ದುಡಿಯುವ ಅಸಂಘಟಿತ ಕಾರ್ಮಿಕರ ಬದುಕಿಗೆ ಶಕ್ತಿ ಯೋಜನೆ ಎಷ್ಟರಮಟ್ಟಿಗೆ ಅವರ ಕುಟುಂಬಿಕ ನಿರ್ವಹಣೆಗೆ ಅನುಕೂಲವಾಗಿದೆ ಎನ್ನುವುದನ್ನು ಅರಿತು ಮಾತನಾಡಬೇಕು.
ಸರ್ಕಾರ ಜಾರಿಗೆ ತಂದ ಯೋಜನೆಯನ್ನು ಶ್ರದ್ಧೆಯಿಂದ ಮತ್ತು ಆಸಕ್ತಿಯಿಂದ ಎಲ್ಲಿಯೂ ಲೋಪ ಬರದಂತೆ ಕಾಲಕಾಲಕ್ಕೆ ಬೇಕಾದಂತಹ ಆಡಳಿತಾತ್ಮಕವಾದಂತಹ ನಿರ್ಧಾರಗಳನ್ನು ಕೈಗೊಂಡು ಯಶಸ್ಸಿನ ಹಾದಿಯಲ್ಲಿ ಯೋಜನೆಯ ಸಾಗಿಸುತ್ತಾ ಜನರ ಮನವನ್ನ ಗೆದ್ದಿರುವ ಈ ಯೋಜನೆಯ ಯಶಸ್ಸಿನ ರೂವಾರಿಗಳಾದ ರಾಮಲಿಂಗಾರೆಡ್ಡಿ ಅವರಿಗೆ ಪ್ರತಿ ದಿನ ಲಕ್ಷಾಂತರ ಮಹಿಳೆಯರು ತಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದಾರೆ.
– ಕೆ ಎಸ್ ನಾಗರಾಜ್, ಬೆಂಗಳೂರು




