ಮಲ್ಲೇಶ್ವರಂನಲ್ಲಿ ಗುಂಡಿಯಲ್ಲಿ ಬಿದ್ದು, ವಿದ್ಯುತ್ ಶಾಕ್ ನಿಂದ ಸಾಯುವಂತಹ ಪರಿಸ್ಥಿತಿ!

4 years ago

ಬೆಂಗಳೂರು: ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಯಶವಂತಪುರ, ಶರೀಫ್ ನಗರದಲ್ಲಿ ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ವಿದ್ಯುತ್ ತಂತಿ 12 ವರ್ಷದ ರುಕ್ಮಾನ್ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಪ್ರವಹಿಸಿ ಸಾವು ಸಂಭವಿಸಿದ ಘಟನೆ ಖಂಡಿಸಿ  ಮಲ್ಲೇಶ್ವರಂ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಸಮಾಜ ಸೇವಕ ಅನೂಪ್ ಅಯ್ಯಂಗಾರ್, ಶರೀಫ್ ನಗರ ನಿವಾಸಿಗಳು ಸಮಸ್ಯೆಗಳ ವಿರುದ್ದ ಮೌನ ಪ್ರತಿಭಟಿಸಿದರು. ಇದೇ ವೇಳೆ ಮಾತಾಡಿದ ಅನೂಪ್ ಅಯ್ಯಂಗಾರ್, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಗುಂಡಿಯಲ್ಲಿ ಬೀಳಬೇಕು ಅಥವಾ ಕರೆಂಟ್ ಹೊಡೆದು ಜನರ ಸಾಯಬೇಕು ಎಂಬ ಪರಿಸ್ಥಿತಿ ಬಂದಿದೆ. ಶರೀಫ್ ನಗರ ಸ್ಲಂ ಪ್ರದೇಶವಾಗಿದ್ದು ಸಾವಿರಾರು ಜನರು ಇಲ್ಲಿ ವಾಸವಿದ್ದಾರೆ. ಒಂದೊಂದು ವಿದ್ಯುತ್ ಕಂಬದಲ್ಲಿ ಹಲವಾರು ಮನೆಗಳ ಸಂಪರ್ಕವಿದೆ ಎಂದರು.

ಸ್ಥಳೀಯ ನಿವಾಸಿಗಳು ಜನಪ್ರತಿನಿಧಿಗಳಿಗೆ ಮತ್ತು ಬೆಸ್ಕಾಂನವರಿಗೆ ಹಲವಾರು ಬಾರಿ ದೂರು ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ. ಸುರಿದ ಮಳೆಯಿಂದ ವಿದ್ಯುತ್ ತಂತಿ ತುಂಡಾಗಿ ಬಾಲಕನ ತಲೆ ಮೇಲೆ ಬಿದ್ದು ವಿದ್ಯುತ್ ಪ್ರವಹಿಸಿ ಸಾವು ಸಂಭವಿಸಿದೆ. ಜನಪ್ರತಿನಿಧಿಗಳ ಮತ್ತು ಬೆಸ್ಕಾಂರವರ ನಿರ್ಲಕ್ಷ್ಯದಿಂದ ಈ ದುರಂತ ಸಾವು ಸಂಭವಿಸಿದೆ. ಮೃತಪಟ್ಟ ಕುಟುಂಬದವರಿಗೆ ಸೂಕ್ತ ಪರಿಹಾರ ಕೊಡಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂಬುದು ನಮ್ಮ ಒತ್ತಾಯ ಎಂದರು.

Leave a Reply