ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರುನಲ್ಲಿ ಜುಲೈ 6 ರಂದು ನಡೆದ ಗುಂಪುಘರ್ಷಣೆಯಲ್ಲಿ ಗಾಯಗೊಂಡವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಭೇಟಿ ನೀಡಿದರು.
ಗಾಯಗೊಂಡ ಕುಟುಂದವರಿಗೆ ಸಿದ್ದರಾಮಯ್ಯ ಅವರು 2 ಲಕ್ಷ ರೂ ನೀಡಿದರು. ಈ ವೇಳೆ ಮಹಿಳೆ ನನಗೆ ಹಣ ಬೇಡ ಎಂದು ಹಣವನ್ನು ಬೆಂಗಾವಲು ಕಾರು ಮೇಲೆ ರಾಜ್ಮಾ ಎಂಬ ಮಹಿಳೆ ಬಿಸಾಕಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ರಾಜ್ಮಾ, ನಾವು ಅಣ್ಣ ತಮ್ಮಂದಿರಂತೆ ಕೆರೂರುನಲ್ಲಿ ಬದುಕಿದ್ದೇವೆ. ನಮಗೆ ಪರಿಹಾರ ಬೇಡ. ನಮಗೆ ಶಾಂತಿ, ನ್ಯಾಯ ಬೇಕು. ನಮಗೆ ಹಸಿವಾದರೆ ಹಿಂದೂ ಆದ್ರೂ ಆಗಲಿ ಮುಸ್ಲಿಂ ಆದ್ರೂ ಆಗಲಿ ಒಂದು ರೊಟ್ಟಿ ನೀಡ್ತಾರೆ ಎಂದು ಆಕ್ರೋಶ ಹೊರಹಾಕಿದರು.
ನ್ಯಾಯ ಬೇಕು ಅಂತಾ ಬೆಂಗಾವಲು ವಾಹನದ ಮೇಲೆ ಹಣ ಬಿಸಾಕಿದ ಮಹಿಳೆಯ ವಿಡಿಯೋ ಕುರಿತು ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.




