ವಿಡಿಯೋ: ದೇವನೂರು ಈ ನಾಡಿನ ಸಾಕ್ಷಿ ಪ್ರಜ್ಞೆ ಮಾತನಾಡುವಾಗ ವಿವೇಚನೆ ಇರಬೇಕು: ಸಿಂಹಗೆ ತಿವಿದ ಯತೀಂದ್ರ

4 years ago

ಮೈಸೂರು: ದೇವನೂರ ಮಹಾದೇವ ಅವರು ಕೇವಲ ಸಾಹಿತಿ ಅಷ್ಟೇ ಅಲ್;ಲ ನಮ್ಮ ನಾಡಿನ ಸಾಕ್ಷಿ ಪ್ರಜ್ಞೆ. ಅವರ ವಿರುದ್ಧ ನಾಲಿಗೆ ಹರಿಬಿಡುವುದು ಸರಿಯಲ್ಲ ಎಂದು ಸಂಸದ ಪ್ರತಾಪ ಸಿಂಹ ಅವರಿಗೆ ವರುಣಾ ಶಾಸಕ ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ದೇವನೂರ ಮಹಾದೇವ ಅವರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಅವರು ಅಧಿಕಾರದಲ್ಲಿರುವವರನ್ನು ತಿದ್ದುವ ಕೆಲಸ ಮಾಡುತ್ತಿರುತ್ತಾರೆ. ಸಮಾಜದ ಒಳಿತಿಗಾಗಿ ದುಡಿದವರು. ಮೊನ್ನೆ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ಅವರ ಮುಂದಾಳತ್ವದಲ್ಲಿ ಎಲ್ಲ ಪ್ರಗತಿಪರರು ಸೇರಿ ಅಭ್ಯರ್ಥಿ ನಿಲ್ಲಿಸಿದ್ದರು. ಅಂತಹವರನ್ನು ಯಾವುದೇ ಪಕ್ಷದ ಆಳ ಎನ್ನವುದು ಸಂಸದರಿಗೆ ಶೋಭೆ ತರುವುದಿಲ್ಲ. ವಿಕೃತಿಯ ಕೃತಿ ರಚಿಸಿದ್ದರೆ ಅದು ಪ್ರತಾಪ್ ಸಿಂಹ ಮಾತ್ರ. ಸಂಸದರಾದವರಿಗೆ ವಿವೇಚನೆ ಇರಬೇಕು ಎಂದರು.

ಸಾಂಸ್ಕೃತಿಕ ಸಂಘಟನೆಯ ಹೆಸರಿನಲ್ಲಿ ಕೇವಲ ರಾಜಕೀಯ ಮಾಡುವ ಸಂಸ್ಥೆ ಆರ್.ಎಸ್ಎಸ್. ಇತಿಹಾಸದಲ್ಲಿ ಎಷ್ಟೋ ಬಾರಿ ಅದನ್ನು ನಿಷೇಧ ಕೂಡ ಮಾಡಲಾಗಿತ್ತು ಎಂದು ಅವರು ಹೇಳಿದರು.

 

Leave a Reply