ಕರ್ನಾಟಕದಲ್ಲಿ ಬ್ಯಾಲೆಟ್ ಪೇಪರ್ ಚುನಾವಣೆ: ಕಾನೂನು ತರಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ
What happens is, if you win the elections, EVMs are not tampered. When you lose elections, EVMs are tampered,” a bench of Justices Vikram Nath and Prasanna B Varale said. ಇದು ಸುಪ್ರೀಂ ಕೋರ್ಟ್ ನೀಡಿದ ತೀರ್ಪು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಮುಗಿಯುವುದರೊಳಗೆ ಜನರಿಂದ ಆಡಳಿತ ವಿರೋಧಿ ಆಲೆಗೆ ಗುರಿಯಾಗಿ ಸೋಲುವ ಭೀತಿಯಲ್ಲಿರುವ ರಾಜ್ಯ ಕಾಂಗ್ರೆಸ್ ಒಲ್ಲದ ಗಂಡ, ಮೊಸರಲ್ಲಿ ಕಲ್ಲು ಹುಡುಕಿದ ಎಂಬಂತಾಗಿದೆ ನಿಮ್ಮ ಪರಿಸ್ಥಿತಿ!
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನಗಳನ್ನು ಗೆದ್ದಾಗ EVM ಕಾರ್ಯನಿರ್ವಹಣೆ ಅದ್ಭುತವಾಗಿತ್ತು. ಆಗ ಯಾರಾದರೂ ನಮಗೆ ಇಷ್ಟೊಂದು ಸ್ಥಾನ ಹೇಗೆ? ಬಂದಿತು ಎಂದು ಪ್ರಶ್ನೆ ಮಾಡಿದ್ದೀರಾ?
2024ರ ಲೋಕಸಭಾ ಚುನಾವಣೆಯಲ್ಲಿ ಏಕಾಏಕಿ 9 ಸ್ಥಾನ , ಉಪ ಚುನಾವಣೆಯಲ್ಲಿ 3 ಸ್ಥಾನ ಗೆದ್ದಾಗ EVM ಬಗ್ಗೆ ಒಬ್ಬೇ ಒಬ್ಬ ನಾಯಕರು ಸೊಲ್ಲೆತ್ತಲಿಲ್ಲ. ಫಲಿತಾಂಶ ನಿಮ್ಮ ಕಡೆ ಬಂದಾಗ, ಜೈ, ಸೋಲುವ ಸುಳಿವು ಗೊತ್ತಾಗುತ್ತಿದ್ದಂತೆ ಇಡೀ ವ್ಯವಸ್ಥೆಯೇ ಸರಿ ಇಲ್ಲ. ಇದನ್ನು ಅವಕಾಶವಾದಿತನ ಎನ್ನಬೇಕೇ ಇಲ್ಲವೇ ಆಷಾಢಭೂತಿತನ ಎಂದು ಕರೆಯಬೇಕೆ?
ಅಷ್ಟೇ ಏಕೆ? 2004 ರಿಂದ 2014 ರ ವರೆಗೆ ಕೇಂದ್ರದಲ್ಲಿ ಅಧಿಕಾರ ನಡೆಸಿದ್ದ ಕಾಂಗ್ರೆಸ್ ನೇತೃತ್ವದ UPA ಸರಕಾರ ಒಂದೇ ಒಂದು ದಿನ EVM ಬಗ್ಗೆ ಮಾತನಾಡಿದ ನಿದರ್ಶನ ಇದ್ದರೆ ದಯವಿಟ್ಟು ಯಾರಾದರೂ ತಿಳಿಸಿ.
ಸಾಲು ಸಾಲು ಚುನಾವಣೆ ಸೋತು ಮತದಾರರಿಂದ ತಿರಸ್ಕೃತವಾಗಿರುವ ಕಾಂಗ್ರೆಸ್ EVM ಮೇಲೆ ಸಂಶಯದ ಬೊಟ್ಟು ಮಾಡಿ ಜನರ ಮನಸ್ಸನ್ನು ವಿಷಯಾಂತರ ಮಾಡುವ ವ್ಯರ್ಥ ಪ್ರಯತ್ನವೇ ಹೊರತು ಇದರಲ್ಲಿ ಬೇರೆ ಇನ್ನೇನು ಇಲ್ಲ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ತರುವ ಪ್ರಯತ್ನ ಸೋಲುವ ಮುನ್ಸೂಚನೆಯಾಗಿದೆ. ಸಾಲು ಸಾಲು ಭ್ರಷ್ಟಾಚಾರ, ಸಚಿವರ ರಾಜೀನಾಮೆ, ನಿಗಮ ಮಂಡಳಿಯಲ್ಲಿ ಅಧ್ಯಕ್ಷರಿಂದಲೇ ಕಮೀಷನ್ ಗೆ ಬೇಡಿಕೆ.ಇದು ಕಾಂಗ್ರೆಸ್ ಸರ್ಕಾರದ ಮಹಾನ್ ಸಾಧನೆ.
ಚುನಾವಣಾ ಪ್ರಕ್ರಿಯೆಯಲ್ಲಿ ಮೊದಲು ನಂಬಿಕೆ ಇಟ್ಟುಕೊಳ್ಳಿ. ವ್ಯವಸ್ಥೆಯನ್ನು ಉರುಳಿಸಲು ಪ್ರಯತ್ನಿಸಬೇಡಿ ಎಂದು ಸುಪ್ರೀಂ ಕೋರ್ಟ್ ಹೇಳಿರುವುದನ್ನು ಕಾಂಗ್ರೆಸ್ ಮರೆತಂತಿದೆ.
ನಿಮ್ಮ ಪಕ್ಷದ ಮುಖವಾಣಿಗಳೇ EVM ಬದಲಿಗೆ ಬ್ಯಾಲೆಟ್ ಪೇಪರ್ ಜಾರಿಗೆ PIL ಹಾಕಿದಾಗ ನ್ಯಾಯಾಲಯ ಯಾರ ಮುಖಕ್ಕೆ ಮಹಾ ಮಂಗಳಾರತಿ ಮಾಡಿದೆ ಎಂಬುದನ್ನು ಒಮ್ಮೆ ಕಾಂಗ್ರೆಸ್ ನಾಯಕರು ಆತ್ಮವಲೋಕನ ಮಾಡಿಕೊಂಡು ತಿದ್ದುಪಡಿಗೆ ನಂತರ ಶಿಫಾರಸ್ಸು ಮಾಡಿ.
– ಎಂ ಪಿ ರೇಣುಕಾಚಾರ್ಯ, ಮಾಜಿ ಸಚಿವ




