ಬೆಂಗಳೂರು: ದೇಶಾದ್ಯಂತ ಕಾಂಗ್ರೆಸ್ ಸೇರಿದಂತೆ ಇತರೆ ವಿಪಕ್ಷಗಳು ಇವಿಎಂಗೆ ಬದಲಾಗಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಬೇಕು ಎಂದು ಆಗ್ರಹಿಸುತ್ತಿರುವಾಗಲೇ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್ ಮೂಲಕವೇ ನಡೆಸಲು ಕೈಗೊಂಡಿರುವ ತೀರ್ಮಾನ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ರಾಜ್ಯ ಸರ್ಕಾರದ ಈ ನಿರ್ಧಾರದ ವಿರುದ್ಧ ಪ್ರಮುಖ ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರೆ, ಸಿಎಂ ಸಿದ್ದರಾಮಯ್ಯ ಆದಿಯಾಗಿ ರಾಜ್ಯ ಸರ್ಕಾರದ ಪ್ರತಿನಿಧಿಗಳು ಮತ್ತು ಕಾಂಗ್ರೆಸ್ ನಾಯಕರು ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿದ್ದಾರೆ.
ರಾಜ್ಯ ಸರ್ಕಾರದ ತೀರ್ಮಾನ ನಾವು ಶಿಲಾಯುಗಕ್ಕೆ ಹೋಗುತ್ತಿದ್ದೇವೆ ಎಂಬುದರ ಸಂದೇಶವಾಗಿದೆ ಎಂದು ಹೇಳಿರುವ ಬಿಜೆಪಿ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಇವಿಎಂಗಳ ಮೇಲೆ ವಿಶ್ವಾಸ ಇಲ್ಲದೆ ಹೋದರೆ ಇವಿಎಂ ಆಧಾರದಲ್ಲಿ ಗೆದ್ದಿರುವ ತಮ್ಮ ಸ್ಥಾನಕ್ಕೆ ಎಲ್ಲರೂ ರಾಜೀನಾಮೆ ನೀಡಲಿ ಎಂದು ಸವಾಲ್ ಎಸೆದಿದೆ.
ಸುದ್ದಿಗಾರದೊಂದಿಗೆ ಮಾತನಾಡಿದ ಮಾಜಿ ಸಚಿವ ಸುರೇಶ್ ಕುಮಾರ್, ಕೃತಕ ಬುದ್ಧಿಮತ್ತೆಯ ಈ ಯುಗದಲ್ಲಿ ರಾಜ್ಯ ಸರ್ಕಾರ ಮತ್ತೆ ಪುರಾತನ ಯುಗಾದತ್ತ ಹೋಗುತ್ತಿದೆ. ಡಿಜಿಟಲ್ ಪೇಮೆಂಟ್ ಅತ್ಯಂತ ಸುಲಭ ಮತ್ತು ಸುರಕ್ಷಿತ ಎಂದು ಹೇಳುತ್ತಿರುವಾಗಲೇ ಇದರಲ್ಲೂ ಕೂಡ ವಂಚನೆ ನಡೆಯುತ್ತಿದೆ ಎಂದು ಹೇಳಿ ಇದರ ಬದಲಿಗೆ ಮತ್ತೆ ನಗದು ವಹಿವಾಟಿಗೆ ಚಾಲನೆ ನೀಡಲಿದೆಯಾ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರದ ಈ ನಿರ್ಧಾರದ ಹಿಂದೆ ಯಾವುದೇ ಜನ ಹಿತ ಅಡಗಿಲ್ಲ. ಕೇವಲ ತಮ್ಮ ಪಕ್ಷದ ನಾಯಕನನ್ನು ಮೆಚ್ಚಿಸುವ ದೃಷ್ಟಿಯಿಂದ ಮಾತ್ರ ಈ ನಿರ್ಧಾರ ಕೈಗೊಳ್ಳಲಾಗಿದೆ. ಇವಿಎಂ ಬಳಕೆ ಬಗ್ಗೆ ಹಲವಾರು ಪ್ರಯೋಗಗಳು ನಡೆದು ಅದು ಅತ್ಯಂತ ಸುರಕ್ಷಿತ ಸುಲಭ ಮತ್ತು ಕಡಿಮೆ ವೆಚ್ಚದಾಯಕ ಎಂಬ ವರದಿಗಳ ಹಿನ್ನೆಲೆಯಲ್ಲಿ ಇದನ್ನು ರೂಪಿಸಲಾಗಿದೆ. ನಮ್ಮ ದೇಶದ ಈ ಪ್ರಯೋಗ ವಿದೇಶಗಳ ಗಮನ ಸೆಳೆದಿದ್ದು, ಹಲವರು ಈ ಮಾದರಿ ಅಳವಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಇದಕ್ಕೆ ವ್ಯತಿರಿಕ್ತ ದಿಕ್ಕಿನಲ್ಲಿ ಹೋಗುತ್ತಿದೆ ಎಂದು ಆರೋಪಿಸಿದರು.
ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಸಕಾಲಕ್ಕೆ ನಡೆಸಲಾಗದ ಸರಕಾರ ಇದೀಗ ಬ್ಯಾಲೆಟ್ ಪೇಪರ್ ಎಂದು ಕಾಲಹರಣ ಮಾಡಲು ಹೊರಟಿದೆ. ಇದರ ವಿರುದ್ಧ ಬಿಜೆಪಿ ಕಾನೂನು ಹೋರಾಟ ಸೇರಿದಂತೆ ಎಲ್ಲ ಹೋರಾಟಗಳನ್ನು ನಡೆಸಲಿದೆ ಎಂದರು.




