ಅಮಾಯಕ ಜನರನ್ನು ಪ್ರಚೋದಿಸುವುದು, ನಂತರ ಆಗುವ ಅನಾಹುತಗಳಿಂದ ಲಾಭ ಪಡೆಯುವ ಸಂಚು ರೂಪಿಸುವುದು ಬಿಜೆಪಿಯ ಚುನಾವಣಾ ರಾಜಕೀಯದ ಕಾರ್ಯಕ್ರಮ. ಅದರ ಭಾಗವೇ ಆರ್ ಸಿಬಿ ಸಂಭ್ರಮಾಚರಣೆಯ ಸಂದರ್ಭದ ಘಟನೆಗಳು ಸಾಕ್ಷಿ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
RCB ಗೆಲುವಿನ ಸಂಭ್ರಮಾಚರಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಮುಂಜಾಗ್ರತಾ ಕ್ರಮಗಳನ್ನೇ ಬಿಜೆಪಿ ಮತ್ತು ಜೆಡಿಎಸ್ ವಿರೋಧಿಸಿ ಜನರನ್ನು ಸರ್ಕಾರದ ವಿರುದ್ಧ ಪ್ರಚೋದಿಸಿತ್ತು. ಆದರೆ ಈಗ ಬಿಜೆಪಿ ಮತ್ತು ಜೆಡಿಎಸ್ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಘೋಷಣೆ ಮಾಡಿರುವುದು ಹಾಸ್ಯಾಸ್ಪದ. ಬಿಜೆಪಿಗರು ಇಂತಹ ಕೀಳು ಮಟ್ಟದ ರಾಜಕೀಯವನ್ನು ನಿಲ್ಲಿಸಬೇಕು.
ಬಿಜೆಪಿಗರು ಮಾಡಬೇಕಾಗಿರುವ ಹೋರಾಟ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಗ ಬಿಸಿಸಿಐ ಮುಖ್ಯಸ್ಥರಾಗಿದ್ದ, ಐಸಿಸಿಯ ಅಧ್ಯಕ್ಷ ಜೈಷಾ ವಿರುದ್ಧವೇ ಹೊರತು ರಾಜ್ಯ ಸರ್ಕಾರದ ವಿರುದ್ಧವಲ್ಲ. ಐಪಿಎಲ್ ನಡೆಸಿ ಸಾವಿರಾರು ಕೋಟಿ ಲಾಭ ಪಡೆಯುವ ಬಿಸಿಸಿಐ ಮತ್ತು ಐಸಿಸಿ ಈಗ ಬಾಯ್ಮಿಚ್ಚಿಕೊಂಡಿರುವುದು ಯಾಕೆ?
ಲಾಭ ಮಾತ್ರ ಬೇಕು ಪರಿಹಾರ ಬೇಡವೇ? ಬಿಜೆಪಿ ಮತ್ತು ಎನ್ಡಿಯ ಫಲಾನುಭವಿ ಜೆಡಿಎಸ್ ಪಕ್ಷ ಕೂಡಲೇ ಗೃಹ ಸಚಿವ ಅಮಿತ್ ವಿರುದ್ಧ ಹೋರಾಟ ನಡೆಸಿ ಐಸಿಸಿ ಅಧ್ಯಕ್ಷ ಜೈ ಷಾ ಅವರ ಬಳಿ ಮೃತರ ಕುಟುಂಬಗಳಿಗೆ ತಲಾ 5 ಕೋಟಿ ರೂಪಾಯಿಗಳ ಪರಿಹಾರವನ್ನು ಕೊಡಿಸಲು ಒತ್ತಾಯಿಸಲಿ.
– ಬಿ ಕೆ ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ




