ಪ್ರವಾಸೋದ್ಯಮ ಅತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗೆ ಮರು ಅರ್ಜಿ ಆಹ್ವಾನ

11 months ago

ಬಳ್ಳಾರಿ: ಪ್ರವಾಸೋದ್ಯಮ ಇಲಾಖೆ ವತಿಯಿಂದ ಎಸ್.ಸಿ.ಎಸ್.ಪಿ, ಹಾಗೂ ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ ಹಾಗೂ ಅತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗೆ ಮರು ಅರ್ಜಿ ಅಹ್ವಾನಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತ ಅಭ್ಯರ್ಥಿಗಳು ಕಮಲಾಪುರದ ಲೋಟಸ್ ಮಹಲ್ ಬಳಿಯ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಜೂ.02 ರಿಂದ ಅರ್ಜಿ ಪಡೆದು, ಭರ್ತಿ ಮಾಡಿ ಜೂ.9 ರೊಳಗಾಗಿ ಇದೇ ಕಚೇರಿಗೆ ಸಲ್ಲಿಸಬೇಕು. ತರಬೇತಿ ಪಡೆಯುವ ಅಭ್ಯರ್ಥಿಯ ವಯಸ್ಸು ಕನಿಷ್ಠ 20 ರಿಂದ 45 ವರ್ಷದೊಳಗಿರಬೇಕು.

ತರಬೇತಿ ವಿವರ: ಆಹಾರ ಮತ್ತು ಪಾನೀಯ ಸೇವೆಯ ಉಸ್ತುವಾರಿ (ಪುಡ್ ಅಂಡ್ ಬೆವರೇಜ್ ಸರ್ವೀಸ್ ಸ್ಟೇವರ್ಡ್) : ತರಬೇತಿಯ ಕಾಲಾವಧಿ 4 ತಿಂಗಳು ಹಾಗೂ 10 ನೇ ತರಗತಿ ಉತ್ತಿರ್ಣರಾಗಿರಬೇಕು.

ಬಹು ತಿನಿಸು ಕುಕ್ (ಮಲ್ಟಿ ಕ್ಯೂಸೆನ್ ಕುಕ್) : ತರಬೇತಿಯ ಕಾಲಾವಧಿ 5 ತಿಂಗಳು ಹಾಗೂ 8 ನೇ ತರಗತಿ ಉತ್ತೀರ್ಣರಾಗಿರಬೇಕು.

ಕೊಠಡಿ ಪರಿಚಾರಕ (ರೂಂ ಅಟೆಂಡಂಟ್) : ತರಬೇತಿಯ ಕಾಲಾವಧಿ 4 ತಿಂಗಳು ಹಾಗೂ ಐದನೇ ತರಗತಿ ಉತ್ತೀರ್ಣರಾಗಿರಬೇಕು.

ಈಗಾಗಲೇ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ರಾಜ್ಯದ ವಿವಿಧ ಪಂಚತಾರಾ ಹಾಗೂ ಇತರೆ ಹೋಟೆಲ್ ಗಳಲ್ಲಿ ಉದ್ಯೋಗ ಖಾತರಿಯಾಗಿದೆ.

ತರಬೇತಿ ಪಡೆಯುವ ವೇಳೆ ರೂ.2000/- ರಂತೆ ಮಾಹೆಯಾನ ಸ್ಟೈಫಂಡ್ ನೀಡಲಾಗುವುದು.

ತರಬೇತಿಗೆ ಹಾಜರಾಗುವವರಿಗೆ ವಸತಿ, ಊಟೋಪಚಾರ ಹಾಗೂ ಸಮವಸ್ತ್ರ ನೀಡಲಾಗುವುದು. ತರಗತಿಯ ತರಬೇತಿ ಜೊತೆಗೆ ರಾಜ್ಯದ ವಿವಿಧ ಪಂಚತಾರಾ ಹಾಗೂ ಇತರೆ ಹೋಟೆಲ್ ಗಳಲ್ಲಿ ಉದ್ಯೋಗ ತರಬೇತಿ ಸಹ ನೀಡಲಾಗುವುದು.

ಐಹೆಚ್‌ಎಂ ಬೆಂಗಳೂರು ಮತ್ತು ಎಫ್‌ಸಿಐ ಮೈಸೂರು ಸಂಸ್ಥೆಗಳು ಪ್ರತಿಷ್ಠಿತ ಅತಿಥ್ಯ ಕ್ಷೇತ್ರದಲ್ಲಿ ತರಬೇತಿ ನೀಡುವ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾಗಿದ್ದು, ಈ ಸಂಸ್ಥೆಗಳಿಂದ ತರಬೇತಿ ನೀಡಿ ಪ್ರಮಾಣ ಪತ್ರಗಳನ್ನು ನೀಡುವುದರಿಂದ ರಾಜ್ಯದೊಳಗೆ ಅಲ್ಲದೇ ದೇಶದ ಯಾವುದೇ ಭಾಗದ ಹೋಟೆಲ್ ಉದ್ಯಮದಲ್ಲಿ ಕೆಲಸ ಖಾತರಿಯಾಗುವುದು.

ಹೆಚ್ಚಿನ ಮಾಹಿತಿಗಾಗಿ ಕಮಲಾಪುರದ ಲೋಟಸ್ ಮಹಲ್ ಹತ್ತಿರದ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಕಚೇರಿ ಅಥವಾ ದೂ.08394-295640 ಗೆ ಸಂಪರ್ಕಿಸಬಹುದು.

Leave a Reply