ಭವಿಷ್ಯ ಕಟ್ಟುವ ಮಾರ್ಗದಲ್ಲಿ ನ್ಯಾಯಕ್ಕಾಗಿ ನಡೆಯುವ ಪ್ರಾಮಾಣಿಕ ಹೋರಾಟ ಮುಖ್ಯ

11 months ago

ನಮ್ಮ ಹೋರಾಟ ಬಡವರ ಶಕ್ತಿಯಾಗಿ, ಶೋಷಿತರ ಧ್ವನಿಯಾಗಿ, ದಲಿತರ ಕನಸಿನ ಪ್ರತಿರೂಪವಾಗಿ ಮುಂದುವರೆಯಬೇಕು: ಅಪ್ಸರ್ ಕೊಡ್ಲಿಪೇಟೆ

ಶಿವಮೊಗ್ಗ: ಎಸ್‌ಡಿಪಿಐ ಶಿವಮೊಗ್ಗ ಘಟಕದ ವತಿಯಿಂದ “ದಿಟ್ಟ ನಾಯಕತ್ವ – ಬಲಿಷ್ಠ ಕಾರ್ಯಕರ್ತ” ಎಂಬ ಘೋಷವಾಕ್ಯದಡಿ ಭಾವಪೂರ್ಣ ಕಾರ್ಯಕರ್ತರ ಹಾಗೂ ಸದಸ್ಯರ ಸಮಾವೇಶ ಜರುಗಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಭಾಗವಹಿಸಿದರು. ಅವರು ಮಾತನಾಡುವಾಗ, ಎಸ್‌ಡಿಪಿಐ ಕೇವಲ ರಾಜಕೀಯ ಪಕ್ಷವಲ್ಲ, ಇದು ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳಿಗಾಗಿ ನಡೆಯುವ ಒಂದು ಶಿಸ್ತಿನ ಆಂದೋಲನವಾಗಿದೆ ಎಂದರು.

ಈ ಆಂದೋಲನದ ಹೃದಯ ಶಿಸ್ತಿನ ಕಾರ್ಯಕರ್ತರು ಮತ್ತು ಬಲಿಷ್ಠ, ಮಾರ್ಗದರ್ಶಕ ನಾಯಕತ್ವ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲೂ ನಾವು ಯುವ ಶಕ್ತಿಯ ಧೈರ್ಯಶಾಲಿ ಹೆಜ್ಜೆಗಳನ್ನು ಕಾಣುತ್ತಿದ್ದೇವೆ. ಶಿವಮೊಗ್ಗದ ಸಮಾವೇಶವೂ ಇದೇ ದೃಷ್ಟಿಕೋನದ ಸ್ಪಷ್ಟ ಪ್ರತಿಬಿಂಬವಾಗಿದೆ ಎಂದು ಅಭಿಪ್ರಾಯಪಟ್ಟರು.

ನಾಯಕತ್ವ ಎನ್ನುವುದು ಹುದ್ದೆಯಲ್ಲ, ಅದು ಜವಾಬ್ದಾರಿ. ನಾಯಕನಲ್ಲಿ ಕಾರ್ಯಕರ್ತರ ಹೃದಯದಲ್ಲಿ ಸ್ಪೂರ್ತಿ ಹುಟ್ಟಿಸಬಲ್ಲ ಶಕ್ತಿ ಇರಬೇಕು. ನಮ್ಮ ಭವಿಷ್ಯ ಕಟ್ಟುವ ಮಾರ್ಗದಲ್ಲಿ ಶ್ರದ್ಧೆ, ಶಿಸ್ತಿನ ಶಕ್ತಿ, ಮತ್ತು ನ್ಯಾಯಕ್ಕಾಗಿ ನಡೆಯುವ ಪ್ರಾಮಾಣಿಕ ಹೋರಾಟ ಮುಖ್ಯ ಎಂದು ಹೇಳಿದರು.

ನಮ್ಮ ಹೋರಾಟ ಬಡವರ ಶಕ್ತಿಯಾಗಿ, ಶೋಷಿತರ ಧ್ವನಿಯಾಗಿ, ದಲಿತರ ಕನಸಿನ ಪ್ರತಿರೂಪವಾಗಿ ಮುಂದುವರೆಯಬೇಕು. ಬಲಿಷ್ಠ ನಾಯಕತ್ವ ಮತ್ತು ಬದ್ಧ ಕಾರ್ಯಕರ್ತರು ಸಮಾಜದಲ್ಲಿ ಹೊಸ ಬೆಳಕು ತರಲಿದ್ದಾರೆ ಎಂಬ ನಂಬಿಕೆ ನನ್ನದಾಗಿದೆ ಎಂದರು.

ಕಾರ್ಯಕರ್ತರು ನಿಸ್ವಾರ್ಥ ಸೇವೆ ಮೂಲಕ ಪಕ್ಷದ ಮೌಲ್ಯಗಳನ್ನು ಸಮಾಜದಲ್ಲಿ ಪ್ರತಿಬಿಂಬಿಸಬೇಕು ಎಂದೂ, ಎಸ್‌ಡಿಪಿಐ ಸಂವಿಧಾನಾತ್ಮಕ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯದ ಪರವಿದೆ ಎಂದರು.

ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ಜೀಲಾನ್ ರಝಾ, ಜಿಲ್ಲಾ ಉಪಾಧ್ಯಕ್ಷ ದೇವೇಂದ್ರ ಪಾಟೀಲ್ ಸೇರಿದಂತೆ ಪಕ್ಷದ ಹಿರಿಯರು, ಕಾರ್ಯಕರ್ತರು ಮತ್ತು ಸದಸ್ಯರು ಹಾಜರಿದ್ದರು.

Leave a Reply