ಶ್ರೀಕಂಠೆಗೌಡ್ರು ರಾಜಕಾರಣಿ ಆದ್ರೆ ದೇವೇಗೌಡ್ರು ಸಾಹಿತಿಯೆ ಜೋಶಿ?

1 year ago

ಮಾನ್ಯ ಮಹೇಶ ಜೋಷಿ, ನಿನ್ನೆಯ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಶ್ರೀಕಂಠೇಗೌಡರು ರಾಜಕಾರಣಿ. ಅವರು ಕಸಾಪ ಚಟುವಟಿ ಪ್ರವೇಶಿಸಿದರೆ ಸುಮ್ಮನಿರಲ್ಲ! ಎಂದು ಧಮಕಿ ಹಾಕಿದ್ದೀರಿ.

ಶ್ರೀಕಂಠೇಗೌಡರು, ತಮ್ಮ ಸರ್ವಾಧಿಕಾರಿ ಧೋರಣೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದವರಲ್ಲಿ ಒಬ್ಬರಾಗಿದ್ದರಿಂದ ಅದರಲ್ಲಿ ರಾಜಕೀಯ ಇದೆ ಎಂಬ ಅಣಿಮುತ್ತನ್ನು ಉದರಿಸಿದ್ದೀರಾ… ಸರಿ.

ನಾಚಿಕೆಯಿಲ್ಲದ ನಿಮ್ಮ ಈ ಆರೋಪ ಕುರಿತಂತೆ ತಮ್ಮದೇ ರಾಜಕೀಯದ ಬಗ್ಗೆ ನಿಮಗೆ ನೆನಪಿಸುವುದು ನನ್ನ ಕರ್ತವ್ಯ.

ನೀವು ಕನ್ನಡ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ  ಸ್ಪರ್ಧಿಸಿದಾಗ ನಿಮ್ಮನ್ನು ಗೆಲ್ಲಿಸಬೇಕೆಂದು ಹಿರಿಯ ವಯೋವೃದ್ಧ ರಾಜಕಾರಣಿ ಮಾನ್ಯ ಶ್ರೀ ಎಚ್.ಡಿ. ದೇವೇಗೌಡರ ಮನವಿ ಪತ್ರವನ್ನು ಅವರಿಂದ ಕಾಡಿ ಬೇಡಿ ಪಡೆದು, ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿ ಬಿಟ್ಟದ್ದು ತಮ್ಮ ಜಾಣ ಮರೆವೇ? ಮಾನ್ಯ ದೇವೇಗೌಡರು ದೊಡ್ಡ ಸಾಹಿತಿಯೇ?

ನೀವು ಅದೇ ಚುನಾವಣೆಯಲ್ಲಿ ನಾಚಿಕೆ, ಸಂಕೋಚಗಳಿಲ್ಲದೆ ಬಿಜೆಪಿ, ಆರ್ ಎಸ್ ಎಸ್ ಎಸ್ ಬೆಂಬಲ ಪಡೆದದ್ದು, ಅವುಗಳ ಸಂಪನ್ಮೂಲಗಳನ್ನು ಧಾರಾಳವಾಗೇ ಹಂಚಿ ಗೆದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಆ ಸಂಸ್ಥೆಯನ್ನು ಸಂಘಿಗಳಿಗೆ ಧಾರೆಎರೆದದ್ದು ಇಡೀ ರಾಜ್ಯಕ್ಕೆ ತಿಳಿದ ವಿಷಯವಾಗಿದೆ. ಸಂಘದ ಮುಕುಂದ, ಬಿ ಎಲ್ ಸಂತೋಷ, ಮೈ ಚ ಜಯದೇವ ಯಾವ ತರದ ಸಾಹಿತಿಗಳು?

ಪರಿಷತ್ತಿನಲ್ಲಿ ರಾಜಕೀಯ, ರಾಜಕಾರಣ, ಅದರ ಹೇಸಿಗೆಗಳನ್ನು ತಂದ ಕೀರ್ತಿ ತಮ್ಮದೇ ಎಂಬುದೂ ಇಡೀ ರಾಜ್ಯದಲ್ಲಿ ಹರಡಿದೆ ಎಂಬುದನ್ನೂ ತಮ್ಮ ಗಮನಕ್ಕೆ ತರುತ್ತಿದ್ದೇನೆ. ತಾವು ಈ ಕುರ್ಚಿಯಲ್ಲಿ ಕುಳಿತ ದಿನದಿಂದ ಬರಿ ಕ್ರಿಮಿಲ್ ಬುದ್ಧಿ ತೋರುತ್ತ ಬಂದದ್ದು ಜಗಜ್ಜಾಹೀರು…

ಇನ್ನು ಶ್ರೀಕಂಠೇಗೌಡರು ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು. ಅವರು ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದಾಗ ತಾವು ಇನ್ನೂ ಚಡ್ಡಿಯ ಲಾಡಿ ಕಟ್ಟುವುದನ್ನು ಕೇಶವ ಕೃಪಾದವರಿಂದ ಕಲಿತಿರಲಿಲ್ಲ. ನಿಮ್ಮದು ಆಚಾರವಿಲ್ಲದ ನಾಲಗೆ ಮಾತ್ರವಲ್ಲ, ವಿಚಾರವಿಲ್ಲದ ನಾಲಗೆಯೂ ಹೌದು.

– ಆರ್ ಜಿ ಹಳ್ಳಿ ನಾಗರಾಜ, ಕಸಾಪ ಆಜೀವ ಸದಸ್ಯ, ಪತ್ರಕರ್ತ

Leave a Reply