ಬೆಂಗಳೂರು: ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವೆ ತಣ್ಣಗಾಗಿರುವ ಗಡಿ ವಿವಾದವನ್ನು ಮತ್ತೆ ಕೆರೆಗೆ ಇರುವ ಮಹಾರಾಷ್ಟ್ರದ ಅಜಿತ್ ಪವಾರ್ ಅವರ ನಡೆಗೆ ಬಿಜೆಪಿ ಸಂಸದ ಡಾ. ಸುಧಾಕರ್ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಭಾಷಾವಾರು ರಾಜ್ಯಗಳ ಪುನರ್ವಿಂಗಡಣೆಯಾಗಿ 70 ವರ್ಷಗಳಾದ ಮೇಲೂ ಇಂತಹ ವಿಭನಜನಕಾರಿ, ಪ್ರಚೋದನಕಾರಿ ಹೇಳಿಕೆಗಳನ್ನು ಕೊಡುವುದು ಯಾರಿಗೂ ಶೋಭೆ ತರುವುದಿಲ್ಲ ಎಂದರು.
ಮಹಾರಾಷ್ಟ್ರ ನಾಯಕರ ಇಂತಹ ಹೇಳಿಕೆಗೆ ಉತ್ತರವಾಗಿ ಕರ್ನಾಟಕ ಕನ್ನಡ ಭಾಷಿಕರೇ ಹೆಚ್ಚಾಗಿರುವ ಮಹಾರಾಷ್ಟ್ರದ ಸೊಲ್ಲಾಪುರ ಮತ್ತು ಅಕ್ಕಲಕೋಟೆ ನಮಗೆ ಸೇರಬೇಕು ಎಂದು ಕರ್ನಾಟಕ ಬೇಡಿಕೆ ಇಟ್ಟರೆ ಮಹಾರಾಷ್ಟ್ರದ ಉತ್ತರವೇನು? ಎಂದು ಪ್ರಶ್ನಿಸಿದರು.
ಹೀಗೆ ಮಾಡುತ್ತಾ ಹೋದರೆ ಭಾರತದಂತಹ ವಿವಿಧತೆಯಲ್ಲಿ ಏಕತೆ ಇರುವ ದೇಶದಲ್ಲಿ ಇಂತಹ ಹಗ್ಗಜಗ್ಗಾಟಗಳಿಗೆ ಕೊನೆಯೇ ಇರುವುದಿಲ್ಲ. ಆದ್ದರಿಂದ ಜವಾಬ್ದಾರಿಯುತ ಸ್ಥಾನದಲ್ಲಿರುವ ಹಿರಿಯ ರಾಜಕೀಯ ನಾಯಕರು ಇಂತಹ ಅಸಂಬದ್ಧ, ಕೆಲಸಕ್ಕೆ ಬಾರದ ಹೇಳಿಕೆಗಳನ್ನು ಕೊಡುವುದು ಬಿಟ್ಟು, ನಾವೆಲ್ಲರೂ ಮೊದಲಿಗೆ ಭಾರತೀಯರು ಎಂಬ ಒಗ್ಗಟ್ಟಿನ ಭಾವನೆಯಿಂದ ಅಭಿವೃದ್ಧಿಯ ಕಡೆ, ಗಡಿ ಭಾಗಗಳ ಜನರ ಕಲ್ಯಾಣದ ಕಡೆ ಗಮನ ಹರಿಸುವುದು ಎಲ್ಲರಿಗೂ ಒಳ್ಳೆಯದು ಎಂದು ಸಲಹೆ ನೀಡಿದರು.




