ಹಿಂದುತ್ವ ಉಳಿಸುವುದು ಎಂದರೆ ಕೇವಲ ಆರ್ಭಟಿಸುವುದಲ್ಲ

1 year ago

ಪ್ರಧಾನಮಂತ್ರಿಗಳು 32 ಲಕ್ಷ ಆಹಾರದ ಕಿಟ್ ಗಳನ್ನ ರಂಜಾನ್ ಹೆಸರಿನಲ್ಲಿ ಮುಸ್ಲಿಮರಿಗೆ ಹಂಚುವುದನ್ನು ಯಾವುದೇ ಕಾರಣಕ್ಕೂ ಟೀಸುವಿರಾ? 

ಬಿಜೆಪಿ ಹಿಂದುತ್ವದ ಬಗ್ಗೆ ಮಾತನಾಡುತ್ತಾ ಅದನ್ನು ಮತಗಳಿಸುವ ವಿಚಾರವನ್ನಾಗಿ ಮಾತ್ರವೇ ಬಳಸಿಕೊಳ್ಳುತ್ತದೆ 

ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿಯವರು ಹಿಂದುತ್ವವನ್ನು ಉಳಿಸುವುದು ಎಂದರೆ ಕೇವಲ ಆರ್ಭಟಿಸುವುದಲ್ಲ, ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವುದು ಎಂದು ತೋರಿಸಿಕೊಟ್ಟಿದ್ದಾರೆ.

ಹಿಂದುತ್ವ ಎಂದರೆ ಕೇವಲ ಆರ್ಭಟಿಸುವುದಲ್ಲ. ಅನ್ಯ ಧರ್ಮದ ವಿರುದ್ಧ ದ್ವೇಷದ, ಬೆಂಕಿಯ ಮಾತುಗಳನ್ನು ಆಡುವುದಲ್ಲ, ಸಮಾಜದಲ್ಲಿ ಶಾಂತಿಗೆ ಅಪಾಯ ತರುವುದಲ್ಲ, ಹಿಂದುತ್ವವನ್ನು ಉಳಿಸುವುದು ಎಂದರೆ ಕಾರ್ಯಕ್ರಮಗಳು ಮತ್ತು ಅವುಗಳನ್ನು ಅನುಷ್ಠಾನಗೊಳಿಸುವುದು ಎನ್ನುವುದನ್ನು ಎಲ್ಲ ರಾಜ್ಯದ ಬಿಜೆಪಿಯ ನಾಯಕರಿಗೆ ರಾಮಲಿಂಗಾರೆಡ್ಡಿ ತೋರಿಸಿಕೊಟ್ಟಿದ್ದಾರೆ.

ರಾಜ್ಯದ ಪ್ರಮುಖ 14 ದೇವಾಲಯಗಳ ಪ್ರಸಾದವನ್ನು ಮನೆ ಬಾಗಿಲಿಗೆ ತಲುಪಿಸುವ ಪ್ರಸಾದ ಯೋಜನೆಗೆ ಚಾಲನೆಯನ್ನು ಕೊಡುವುದರ ಮೂಲಕ ಮತ್ತೊಂದು ವಿನೂತನವಾದ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದಾರೆ.

ಇವರು ಮುಜರಾಯಿ ಇಲಾಖೆಯ ಸಚಿವರಾದ ತಕ್ಷಣವೇ ಹಲವಾರು ಯೋಜನೆಗಳನ್ನ ಜಾರಿ ತರುವುದರ ಮೂಲಕ ದೇಶಕ್ಕೆ ಮುಜರಾಯಿ ಇಲಾಖೆಯ ಮೂಲಕ ಎಷ್ಟೆಲ್ಲ ಬದಲಾವಣೆಗಳನ್ನು ಆಧ್ಯಾತ್ಮಿಕವಾಗಿ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ತರಬಹುದೇ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಅರ್ಚಕರ ಹಿತವನ್ನು ಕಾಯುತ್ತಾ, ಭಕ್ತಾದಿಗಳಿಗೆ ಸೌಲಭ್ಯ ಸೌಕರ್ಯಗಳನ್ನು ಕಲ್ಪಿಸುತ್ತಾ, ದೇವಾಲಯದ ಅಭಿವೃದ್ಧಿ ಕಡೆಗೆ ಗಮನವನ್ನು ಕೊಡುತ್ತಾ ಕರ್ನಾಟಕ ರಾಜ್ಯದಲ್ಲಿ ಮುಜರಾಯಿ ಇಲಾಖೆ ಒಂದು ಕ್ರಿಯಾಶೀಲ ಇಲಾಖೆಯಾಗಿ ಬದಲಾವಣೆಗೊಂಡಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ಅದನ್ನು ಜಾರಿಗೊಳಿಸುತ್ತಿರುವುದು ಜೊತೆಗೆ ಹಿಂದುಳಿದ ವರ್ಗದವರು ಮತ್ತು ದಲಿತರು ಹಾಗೂ ಬಡವರ ಆರಾಧ್ಯ ದೈವ ಸವದತ್ತಿ ಎಲ್ಲಮ್ಮನ ದೇವಾಲಯದ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಿರುವುದು, ಚಾಮುಂಡೇಶ್ವರಿ ದೇವಾಲಯಕ್ಕೆ ಪ್ರಾಧಿಕಾರ ರಚನೆ ಮಾಡಿರುವುದು ಇವೆಲ್ಲವೂ ಸಹ, ಭಕ್ತರ ಮತ್ತು ಆಸ್ತಿಕ ಮಹಾಶಯರ ಭಾವನೆಗಳನ್ನು ಅರಿತು ಅದಕ್ಕೆ ಪೂರಕವಾಗಿ ಸ್ಪಂದಿಸುತ್ತಿರುವಂತಹ ಕಾರ್ಯಕ್ರಮಗಳಾಗಿವೆ.

ಹಿಂದಿನ ಸರ್ಕಾರಗಳು ವಿಶೇಷವಾಗಿ ಬಿಜೆಪಿ ನೇತೃತ್ವದ ಸರ್ಕಾರ ಹಿಂದುತ್ವದ ಬಗ್ಗೆ ಮಾತನಾಡುತ್ತಾ ಅದನ್ನು ಮತಗಳಿಸುವ ವಿಚಾರವನ್ನಾಗಿ ಮಾತ್ರವೇ ಬಳಸಿಕೊಳ್ಳುತ್ತಿದ್ದರು. ಆದರೆ ರಾಮಲಿಂಗಾರೆಡ್ಡಿಯವರು ಈ ಖಾತೆಯನ್ನು ವಹಿಸಿಕೊಂಡ ನಂತರ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವುದರ ಮೂಲಕ. ಶಾಶ್ವತವಾದ ಯೋಜನೆಗಳನ್ನ ಜಾರಿಗೊಳಿಸಿ. ನಿಜಕ್ಕೂ ಭಕ್ತರ ಭಾವನೆಗಳಿಗೆ ಸ್ಪಂದಿಸುತ್ತಿರುವುದು ಅರ್ಚಕರ ಮನಸ್ಸಿಗೂ ಮತ್ತು ಆಸ್ತಿಕ ಮಹಾಶಯರ ಮನಸ್ಸಿಗೂ ಸಂತೋಷವನ್ನು ತಂದಿದೆ. ಇವುಗಳನ್ನು ಗಮನಿಸಿದಾಗ ಕೇವಲ ಒಂದು ಧರ್ಮದ ಉಳಿಸುವ ವಿಚಾರ ಅಥವಾ ಸಂಪ್ರದಾಯವನ್ನು ಕಾಪಾಡುವ ಸಂಗತಿ ಮಾತನಾಡುವುದಲ್ಲ; ಬದಲಿಗೆ ಕೆಲಸ ಮಾಡಿ ತೋರಿಸಬೇಕು ಎನ್ನುವುದಕ್ಕೆ ರಾಮಲಿಂಗಾರೆಡ್ಡಿರವರಿಗಿಂತ ಮತ್ತೊಬ್ಬರು ಬೇಕಿಲ್ಲ.

ಪದೇಪದೇ ಹಿಂದೂ ಧರ್ಮದ ವಕ್ತಾರ ರೀತಿಯಲ್ಲಿ ಮಾತನಾಡುವ ಬಿಜೆಪಿಯ ನಾಯಕರು ತಾವು ಅಧಿಕಾರದಲ್ಲಿದ್ದಾಗ ಮುಜರಾಯಿ ಇಲಾಖೆಯಲ್ಲಿ ಏನೆಲ್ಲ ಮಾಡಿದ್ದೆವು ಎನ್ನುವುದನ್ನು ಜನರ ಮುಂದೆ ಇಟ್ಟು ಮಾತನಾಡಲಿ.

ನಮ್ಮ ಸರ್ಕಾರ ಮುಂಗಡಪತ್ರದಲ್ಲಿ ಒಟ್ಟು ಜನಸಂಖ್ಯೆಯ ಶೇಕಡ 10 ರಿಂದ 12 ಇರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಒಟ್ಟು ಮುಂಗಡಪತ್ರದ ಕೇವಲ ನೂರರಲ್ಲಿ ಒಂದು ಭಾಗವನ್ನು ಅವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪ್ರಗತಿಗೆ ಮೀಸಲಿಟ್ಟರೆ ಅದಕ್ಕೆ ಎಷ್ಟೆಲ್ಲಾ ಮಾತನಾಡುವ ಬಿಜೆಪಿಯವರು ಪ್ರಧಾನಮಂತ್ರಿಗಳು 32 ಲಕ್ಷಕ್ಕೆ ಅಧಿಕ ಆಹಾರದ ಕಿಟ್ ಗಳನ್ನ ರಂಜಾನ್ ಹೆಸರಿನಲ್ಲಿ ಮುಸ್ಲಿಮರಿಗೆ ಹಂಚುವುದನ್ನು ಯಾವುದೇ ಕಾರಣಕ್ಕೂ ಟೀಸುವುದಿಲ್ಲ. ಬಿಜೆಪಿಯವರು ಮಾಡಿದರೆ ಅದು ವಿನೂತನ ಕಾರ್ಯಕ್ರಮ, ಕಾಂಗ್ರೆಸ್ ಪಕ್ಷದವರು ಇಂತಹ ಕಾರ್ಯಕ್ರಮವನ್ನು ಮಾಡಿದರೆ ಅದು ತುಷ್ಟೀಕರಣ ಎಂಬ ಮಾತನಾಡುವ ಬಿಜೆಪಿಯವರು,  ವಿಶೇಷವಾಗಿ ಕರ್ನಾಟಕದ ಬಿಜೆಪಿಯ ಮಹಾನ್ ನಾಯಕರು ಶಕ್ತಿ ಇದ್ದರೆ ಮೋದಿ ಅವರ ಈ ಕಾರ್ಯಕ್ರಮಕ್ಕೆ ತಮ್ಮ ವಿರೋಧದ ಮಾತುಗಳನ್ನ ಹೇಳಲಿ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply