ಶುಲ್ಕ ಮರುಪಾವತಿ : ಮಾ.30 ರವರೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

1 year ago

ಚಿತ್ರದುರ್ಗ: 2023-24ನೇ ಸಾಲಿನಲ್ಲಿ ಕೆಲ ಸ್ನಾತಕೊತ್ತರ ಹಾಗೂ ವೃತ್ತಿಪರ ಪದವಿ ಕೋರ್ಸ್‍ಗಳ ಕೌನ್ಸಿಂಗ್ ತಡವಾಗಿ ಪ್ರಾರಂಭವಾಗಿದ್ದರಿಂದ, ಕಳೆದ ಶೈಕ್ಷಣಿಕ ವರ್ಷದ ಫಲಿತಾಂಶ ಹೊರಬೀಳುವುದು ತಡವಾಗಿದೆ.

ಈ ಹಿನ್ನಲೆಯಲ್ಲಿ ಹಿಂದುಳಿದ ವರ್ಗಗಳು ಮತ್ತು ಪ್ರವರ್ಗ-1ರ ಅಲೆಮಾರಿ, ಅರೆಅಲೆಮಾರಿ ವಿದ್ಯಾರ್ಥಿಗಳ ಶುಲ್ಕ ಮರು ಪಾವತಿ ಅರ್ಜಿ ಸಲ್ಲಿಕೆ ಅವಧಿಯನ್ನು ಮಾರ್ಚ್ 30 ವರೆಗೆ ವಿಸ್ತರಿಸಲಾಗಿದೆ.

ಅರ್ಹ ವಿದ್ಯಾರ್ಥಿಗಳು ವೆಬ್‍ಸೈಟ್ https://ssp.postmatric.karnataka.gov.in/ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ಮಾಹಿತಿಗಾಗಿ ವೆಬ್‍ಸೈಟ್ https://bcwd.karnataka.gov.in ಭೇಟಿ ನೀಡಬಹುದು.

ಇಲಾಖೆ ಸಹಾಯವಾಣಿ 8050770005 ಹಾಗೂ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದ ಸಹಾಯವಾಣಿ 1902ಗೆ ಕರೆ ಮಾಡಬಹುದು. bcwdhelpline@gmail.com ಮತ್ತು postmatrichelp@karnataka.gov.in  ಇಮೇಲ್ ಮಾಡಬಹುದು.

Leave a Reply