ಬೆಂಗಳೂರು: ನಿರ್ದೇಶಕ ಸುಧೀಂದ್ರ ನಾಡಿಗರ್ ನಿರ್ದೇಶನ ಮಾಡಿದ ಚಿತ್ರದಿಂದ ಹೆಸರು ತೆಗೆದು, ತನ್ನ ಹೆಸರು ಹಾಕಿಕೊಂಡಿದ್ದಾರೆ ಎಂದು ‘ನಿಮಗೊಂದು ಸಿಹಿ ಸುದ್ದಿ’ ಚಿತ್ರದ ನಿರ್ದೇಶಕ ಸುಧೀಂದ್ರ ನಾಡಿಗರ್ ಮತ್ತು ಕಾರ್ಯಕಾರಿ ನಿರ್ಮಾಪಕಿ ನಿಶಿತಾ ಆರೋಪಿಸಿದರು.
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
- ದಶಕ ಮೀರಿದ ಕಾನೂನು ಹಾದಿ ಮತ್ತು ಉತ್ತರವಿಲ್ಲದ ಪ್ರಶ್ನೆಗಳು
- ಪರಿಸರವನ್ನೂ ಉಳಿಸಬೇಕು, ಮಲೆನಾಡಿನ ರೈತರ ಬದುಕನ್ನೂ ಉಳಿಸಬೇಕು: ಮಧು ಬಂಗಾರಪ್ಪ
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
ನಿಮಗೊಂದು ಸಿಹಿ ಸುದ್ದಿ ಚಲನಚಿತ್ರ ಪರ್ಪಲ್ ರಾಕ್ ಎಂಟರ್ಟೈನರ್ ಪಾಲುದಾರ ಗಣೇಶ ಪಾಪಣ್ಣ ಅವರ ನಿರ್ಮಾಣದಲ್ಲಿ 2020ರಲ್ಲಿ ಸುಧೀಂದ್ರ ನಾಡಿಗರ್ ನಿರ್ದೇಶನದಲ್ಲಿ ಮತ್ತು ಕಥೆ ಮತ್ತು ಚಿತ್ರಕಥೆ ರಚಿಸಿ ನಾಯಕನಾಗಿ ರಘು ಭಟ್ ನಟಿಸಿದ್ದರು.
ಗೋವಾದಲ್ಲಿ ಚಿತ್ರೀಕರಣ ಪೂರ್ಣಗೊಂಡ ನಂತರ ಕೊರೊನಾ ಸಂದರ್ಭದಲ್ಲಿ ಚಲನಚಿತ್ರ ಬಿಡುಗಡೆಗೆ ವಿಳಂಬವಾಯಿತು. ನಂತರ ಚಲನಚಿತ್ರವನ್ನು ಅವ್ಯಕ್ತ ಫಿಲ್ಮ್ ಮಾಲೀಕರಾದ ಹರೀಶ್ ಎನ್.ಗೌಡರವರಿಗೆ ಮಾರಾಟ ಮಾಡಿದರು.
ಸೆನ್ಸಾರ್ ಮಂಡಳಿಯಲ್ಲಿ ಚಿತ್ರ ಸೆನ್ಸಾರ್ ಆಗಿ ಹೊರ ಬಂದ ಮೇಲೆ ನಿರ್ದೇಶಕರಾದ ಸುಧೀಂದ್ರ ನಾಡಿಗರ್ ನಿರ್ದೇಶನ ಎಂಬ ಹೆಸರು ನಾಪತ್ತೆಯಾಯಿತು. ನಿರ್ದೇಶನ ರಘು ಭಟ್ ಎಂಬ ಹೆಸರು ಹಾಕಲಾಗಿತ್ತು. ಈ ಅನ್ಯಾಯದ ವಿರುದ್ದ ಸುಧೀಂದ್ರ ನಾಡಿಗರ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿ ನಮಗೆ ನ್ಯಾಯ ಕೊಡಿ ಎಂದು ಮನವಿ ಸಲ್ಲಿಸಿದರು.
ನಾನು ಕಷ್ಟಪಟ್ಟು ನಿರ್ದೇಶನ ಮಾಡಿದ್ದೇನೆ ಹಾಗೂ ಇದಕ್ಕೆ ನನ್ನ ತಂಡದ ಸಹಕಾರವಿದೆ. ಆದರೆ ಏಕಾಏಕಿ ನಿರ್ದೇಶನ ಮಾಡಿದವರ ಹೆಸರು ಬದಲಾವಣೆ ಮಾಡಿರುವುದು ಅನ್ಯಾಯ. ಇದರ ಬಗ್ಗೆ ಚಿತ್ರ ಖರೀದಿ ಮಾಡಿದ ಹರೀಶ್ ಎನ್.ಗೌಡರವರಿಗೆ ಹೇಳಿದರೆ “ನನ್ನಿಷ್ಟ ನಾನು ಯಾರ ಹೆಸರು ಬೇಕಾದರು ಹಾಕಿಕೊಳ್ಳುತ್ತೇನೆ ಎಂದು ಉಡಾಫೆ ಉತ್ತರ ನೀಡುತ್ತಾರೆ” ಎಂದು ಆರೋಪಿಸಿದರು.
ಚಲನಚಿತ್ರ ನಿರ್ಮಾಣ ಸಂದರ್ಭದಲ್ಲಿ ನಿರ್ದೇಶನಕ್ಕೆ ಸಿಗಬೇಕಾದ ಹಣ ಸಿಕ್ಕಿಲ್ಲ. ಹೋಗಲಿ, ಚಲನಚಿತ್ರ ನಿರ್ದೇಶನ ಮಾಡಿರುವ ನನ್ನ ಹೆಸರನ್ನ ತೆಗೆದಿರುವದು ದುಖಃದ ಸಂಗತಿ. ಕೂಡಲೆ ಚಲನಚಿತ್ರ ವಾಣಿಜ್ಯ ಮಂಡಳಿಯವರು ಮಧ್ಯ ಪ್ರವೇಶ ಮಾಡಿ ಚಲನಚಿತ್ರದ ನಿರ್ದೇಶನ ಎಂಬುದರಲ್ಲಿ ನನ್ನ ಹೆಸರು ಬಂದರೆ ಸಾಕು. ನಾನು ಯಾರಿಗೂ ತೊಂದರೆ ಕೊಡುವುದಿಲ್ಲ ಎಂದು ನಿರ್ದೇಶಕ ಸುಧೀಂದ್ರ ನಾಡಿಗರ್ ಹೇಳಿದರು.



