ಕೆ.ಆರ್.ಎಸ್. ನಾಯಕರ ಮೇಲೆ ಹಲ್ಲೆ ಆರೋಪ
ಬೆಂಗಳೂರು: ಬೆಂಗಳೂರಿನ HAL ಪೊಲೀಸ್ ಠಾಣೆಯ ದುಷ್ಟ ಮತ್ತು ದುರಹಂಕಾರಿ ಇನ್ಸ್‌ಪೆಕ್ಟರ್ ಕೇಶವಮೂರ್ತಿ ಮತ್ತು ಅಲ್ಲಿಯ ಸುಲಿಗೆಕೋರ ACP ಕಿಶೋರ್ ಭರಣಿ ಇಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸೈನಿಕರಾದ ರಘು ಜಾಣಗೆರೆ, ಆರೋಗ್ಯಸ್ವಾಮಿ, ರೋಲ್ಯಾಂಡ್ ಸೋನ್ಸ್, ಮೋಹನ್ ರೆಡ್ಡಿ ಮತ್ತು ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರ ಕುಟುಂಬದ ನಾರಾಯಣ ಸ್ವಾಮಿಯವರ ಮೇಲೆ FB ಲೈವ್’ನಲ್ಲಿಯೇ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಠಾಣೆಯ ಒಳಗೆಯೂ ದೈಹಿಕವಾಗಿ ಹಿಂಸಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಸುಳ್ಳು ದೂರು ದಾಖಲಿಸಿ ಈಗ ಬಂಧಿಸಿರುತ್ತಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಆರೋಪಿಸಿದ್ದಾರೆ.
ಸ್ವಲ್ಪ ಹೊತ್ತಿಗೆ ಮುಂಚೆ ಠಾಣೆಗೆ ಬಂದ ನಾನು ಎಲ್ಲವನ್ನೂ ವಿಚಾರಿಸಿಕೊಂಡು, ನಮ್ಮ ಸೈನಿಕರನ್ನು ನಿನ್ನ…ನ್ ಎಂದು ಬೈದಿದ್ದ ಮತ್ತು ಹೊಡೆದಿದ್ದ ಇನ್ಸ್‌ಪೆಕ್ಟರ್ ಮತ್ತು ACP’ಯವರಿಬ್ಬರಿಗೂ ಕಾಲು ಹಿಡಿದುಕೊಂಡು ಸಾಷ್ಟಾಂಗ ನಮಸ್ಕಾರ ಮಾಡಿದ್ದೇನೆ. ಠಾಣೆಯ ಒಳಗೆ ಇದ್ದ ನಮ್ಮವರೂ ಹೀಗೆಯೇ ನಮಸ್ಕಾರ ಮಾಡಿದ್ದಾರೆ. KRS ಪಕ್ಷದ ಸೈನಿಕರು ಇಲ್ಲಿಗೆ ಬರುವಾಗ ಹೂವಿನ ಮಾಲೆ ತಂದು ಇವರಿಬ್ಬರಿಗೂ ಹಾಕಿ, ಅವರ ಕಾಲಿಗೆ ನಮಸ್ಕರಿಸಬೇಕು ಎಂದು ಕೋರಿದ್ದೇನೆ. ದೊಡ್ಡವರಿಗೆ ದೊಡ್ಡ ರೀತಿಯ ನಮಸ್ಕಾರಗಳನ್ನೇ ಮಾಡಬೇಕು ಎಂದಿದ್ದಾರೆ.
ಇಷ್ಟೆಲ್ಲಾ ಅನ್ಯಾಯ, ಅಕ್ರಮ, ಭ್ರಷ್ಟಾಚಾರ, ದುರಾಚಾರಗಳ ನಡುವೆಯೂ ಈ ದೇಶ ಹೇಗೆ ಉಳಿದಿದೆ ಎಂದು ನನಗೆ ಒಮ್ಮೆ ಆಶ್ಚರ್ಯವಾಗುತ್ತದೆ. ನಮ್ಮ ಪುರಾತನರ ಯಾವುದೋ ಒಳ್ಳೆಯತನ ಮತ್ತು ಶಕ್ತಿ ಇದನ್ನು ಉಳಿಸಿದೆ ಎಂದು ಅನ್ನಿಸುತ್ತದೆ ಎಂದಿದ್ದಾರೆ.
ಭ್ರಷ್ಟರ ಮತ್ತು ದುಷ್ಟರ ಯಾವುದೇ ಬೆದರಿಕೆ ಅಥವ ದಬ್ಬಾಳಿಕೆಗೆ KRS ಪಕ್ಷದ ಸೈನಿಕರು ಹೆದರುವುದಿಲ್ಲ. ನಮ್ಮ ಪ್ರೀತಿಯ ಕರ್ನಾಟಕ ರಾಜ್ಯದಲ್ಲಿ ನ್ಯಾಯ ಮತ್ತು ಧರ್ಮ ಸಂಸ್ಥಾಪನೆ ಮಾಡಿಯೇ ತೀರುತ್ತೇವೆ ಎನ್ನುವ ಛಲದಲ್ಲಿ ನಮ್ಮ ಸೈನಿಕರು ಕೆಲಸ ಮುಂದುವರೆಸುತ್ತಾರೆ. ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ ಎಂದಿದ್ದಾರೆ.
#ರವಿಕೃಷ್ಣಾರೆಡ್ಡಿ #ರಾಜ್ಯಾಧ್ಯಕ್ಷ #ಕರ್ನಾಟಕರಾಷ್ಟ್ರಸಮಿತಿ #ಪಕ್ಷ #KRS #ravikrishnareddy




