ಬಿಜೆಪಿಯ ರಾಜ್ಯದ ನಾಯಕರಿಗೆ ಬಹಳಷ್ಟು ತಿಳುವಳಿಕೆ ಮತ್ತು ವಿವೇಕದ ಕೊರತೆ ಎದ್ದು ಕಾಣುತ್ತಿದೆ. ಏಕೆಂದರೆ ಎಲ್ಲದಕ್ಕೂ ಪ್ರತಿಭಟನೆ ಮಾಡುವುದು, ಮಾಹಿತಿ ಇಲ್ಲದೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯ ಮಾತುಗಳನ್ನ ಆಡುವುದು, ಸರ್ಕಾರವನ್ನ ಜವಾಬ್ದಾರಿಯನ್ನಾಗಿಸುವುದು ಮಾಮೂಲಿಯಾಗಿವೆ.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಆರ್ ಬಿ ಐ ಅಡಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತವೆ. ಇವುಗಳ ನಿಯಂತ್ರಣ ಸಂಪೂರ್ಣವಾಗಿ ಅವರ ಕೈಲಿ ಇರುತ್ತದೆ. ಹೀಗಿದ್ದರೂ ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲಗಾರರಿಗೆ ಕಿರುಕುಳ ಕೊಟ್ಟು ಇದರಿಂದ ಜೀವ ಹಾನಿಯಾದರೆ ಅದಕ್ಕೆ ರಾಜ್ಯ ಸರ್ಕಾರವನ್ನು ಹೊಣೆಯನ್ನಾಗಿ ಮಾಡುತ್ತಾರೆ. ರಾಜ್ಯ ಸರ್ಕಾರ ಇವರನ್ನು ನಿಯಂತ್ರಿಸುವ ಸಲುವಾಗಿ ಸುಗ್ರೀವಾಜ್ಞೆಯನ್ನು ಹೊರಡಿಸಲು ಸಿದ್ಧಪಡಿಸಿಕೊಂಡು ರಾಜ್ಯಪಾಲರಿಗೆ ಕಳುಹಿಸಿದರೆ ಅವರು ಪದೇಪದೇ ನೆಪಗಳನ್ನ ಹೇಳುತ್ತಾ ಹಿಂತಿರುಗಿಸುತ್ತಿದ್ದಾರೆ.
ಬಿಜೆಪಿ ನಾಯಕರಿಗೆ ಬಡವರ ಮೇಲೆ ನಿಜವಾದ ಪ್ರೀತಿ ಇದ್ದರೆ ಮೊದಲು ದೇಶದ ಅರ್ಥ ಸಚಿವರಿಗೆ ಹೇಳಿ ಮೈಕ್ರೋ ಫೈನಾನ್ಸ್ ಕಂಪನಿಗಳ ವಿಚಾರದಲ್ಲಿ ಆರ್ ಬಿ ಐ ನವರು ಸಾರ್ವಜನಿಕರಿಗೆ ವಿಶೇಷವಾಗಿ ಸಾಲಗಾರರಿಗೆ ತೊಂದರೆ ಕೊಟ್ಟರೆ ಅವರ ಲೈಸೆನ್ಸ್ ಗಳನ್ನು ರದ್ದುಪಡಿಸುವ ಎಚ್ಚರಿಕೆಯನ್ನು ಕೊಡಿಸಲಿ.
ಬಿಜೆಪಿಯ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಬಡವರ ಹಿತ ದೃಷ್ಟಿಯಿಂದ ಕೂಡಲೇ ಸುಗ್ರೀವಾಜ್ಞೆಗೆ ಅಂಕಿತವನ್ನು ಹಾಕಿ ಎಂದು ಒತ್ತಾಯವನ್ನು ಮಾಡಲಿ. ಕೇವಲ ಬಡವರ ಸಾವಿನ ನೆಪದಲ್ಲಿ ರಾಜಕಾರಣವನ್ನು ಮಾಡುತ್ತಾ ಟೀಕೆ ಮಾಡುವ ಸಲುವಾಗಿ ಮಾತುಗಳನ್ನ ಆಡಬಾರದು ಇದರಿಂದ ಯಾರಿಗೂ ಮೂರು ಕಾಸಿನ ಅನುಕೂಲವಿಲ್ಲ.
ಮೆಟ್ರೋ ಪ್ರಯಾಣ ದರ ಏರಿಕೆ ರಾಜ್ಯ ಸರ್ಕಾರದ ವಿಚಾರವಲ್ಲ. ಇವುಗಳ ನಿಯಂತ್ರಣಕ್ಕೆ ಮೆಟ್ರೋ ಸಂಸ್ಥೆ ಇದೆ ಮತ್ತು ಇವುಗಳು ಕೇಂದ್ರ ಸರಕಾರದ ಅದೀನದಲ್ಲಿದೆ. ಮೆಟ್ರೋ ಪ್ರಯಾಣ ದರ ಏರಿಕೆಗೆ ಕೇಂದ್ರ ಸರ್ಕಾರವೇ ಪರೋಕ್ಷವಾಗಿ ಕಾರಣ. ಈ ವಿಚಾರ ತಿಳಿಯದೆ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವಂತಹ ಕೆಲಸವನ್ನು ಮಾಡುತ್ತಾ ತಿಳುವಳಿಕೆ ಇಲ್ಲದೆ ಪ್ರತಿಭಟನೆಗಳನ್ನ ಮಾಡಿ ಸಾರ್ವಜನಿಕರ ದೃಷ್ಟಿಯಲ್ಲಿ ಅಪಹಸ್ಯಕ್ಕೆ ಗುರಿಯಾಗಿದ್ದಾರೆ.
ಮೆಟ್ರೋ ಪ್ರಯಾಣಿಕರ ಮೇಲೆ ಬಿಜೆಪಿಯವರಿಗೆ ನಿಜವಾದ ಪ್ರೀತಿ ಇದ್ದರೆ ಕೇಂದ್ರದ ನಗರಾಭಿವೃದ್ಧಿ ಸಚಿವರಿಗೆ ದೆಹಲಿಗೆ ಹೋಗಿ ಮನವಿಯನ್ನ ಕೊಟ್ಟು ಮೆಟ್ರೋ ಪ್ರಯಾಣ ದರವನ್ನ ಕೂಡಲೇ ಇಳಿಸುವಂತೆ ಸಂಬಂಧಪಟ್ಟವರಿಗೆ ಆದೇಶವನ್ನು ನೀಡಿ ಎಂದು ಹೇಳಲಿ. ಅದು ನಿಜವಾದ ಜನಪರ ಕಾಳಜಿಯಾಗುತ್ತದೆ. ಇಲ್ಲದಿದ್ದರೆ ನಕಲಿ ಕಾಳಜಿಯ ಮಾತುಗಳಾಗುತ್ತದೆ.
ಈ ರೀತಿಯಲ್ಲಿ ರಾಜ್ಯದಲ್ಲಿರುವ ಬಿಜೆಪಿಯ ನಾಯಕರಿಗೆ ವಿಚಾರವೂ ತಿಳಿದಿರುವುದಿಲ್ಲ. ಎತ್ತು ಈದಿದೆ ಎಂದರೆ ಕೊಟ್ಟಿಗೆಗೆ ಕಟ್ಟು ಎಂಬ ಮಾತಿನಂತೆ ಅಪ್ರಬುದ್ಧವಾಗಿ ವರ್ತಿಸುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಮುಡಾದ ವಿಚಾರವನ್ನು ಹಿಡಿದುಕೊಂಡು ಪಾದಯಾತ್ರೆಯನ್ನು ಮಾಡಿ, ಏನೋ ಸಾಧನೆ ಮಾಡಿದ ರೀತಿಯಲ್ಲಿ ತಮ್ಮ ಬೆನ್ನುಗಳನ್ನು ತಾವೇ ತಟ್ಟಿಕೊಂಡು ಎದೆಯುಬಿಸಿ ನಡೆದ ನಾಯಕರುಗಳಿಗೆ ನ್ಯಾಯಾಲಯಗಳಲ್ಲಿ ಈ ಪ್ರಕರಣದ ಸಂಬಂಧದಲ್ಲಿ ಬರುತ್ತಿರುವಂತಹ ವಾದ ವಿವಾದದ ವಿಚಾರಗಳನ್ನು ಗಮನಿಸಿದಾಗ ಸಿದ್ದರಾಮಯ್ಯನವರು ನಿರಪರಾಧಿ ಎಂಬ ಸತ್ಯ ಅಂತಿಮ ತೀರ್ಪಿನಲ್ಲಿ ಬರುತ್ತದೆಂಬ ವಿಶ್ವಾಸ ಮೂಡುತ್ತಿದೆ. ಈ ವಿಚಾರದಲ್ಲೂ ಸಹ ಆತುರ ಆತುರವಾಗಿ ಮಾತುಗಳನ್ನಾಡಿ ಬೆಟ್ಟವನ್ನು ಕಡಿದು, ಇಲಿಯನ್ನು ಹಿಡಿದಂತಹ ಮಹಾನ್ ಸಾಧನೆಯ ಮಾಡಿದಂತಾಗುತ್ತದೆ.
– ಕೆ ಎಸ್ ನಾಗರಾಜ್, ಬೆಂಗಳೂರು




