ಮೈಸೂರು: ಸಂಸತ್ ಒಳಗಿನ ಸ್ಮೋಕ್ ಬಾಂಬ್ ಪ್ರಕರಣ ಮಾಜಿ ಸಂಸದ ಪ್ರತಾಪ ಸಿಂಹ ದೋಷ ಮುಕ್ತರಾಗಿ ಹೊರಬರುವವರೆವಿಗೆ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಅವರಿಗೆ ಮೈ.ಕಾ.ಪ್ರೇಮ್ ಕುಮಾರ್ ಪರಿಶಿಷ್ಟ ಪಂಗಡಗಳ ಮೊರ್ಚ ರಾಜ್ಯ ಕಾರ್ಯಕಾರಿ ಸದಸ್ಯ ಮತ್ತು ಚಾಮರಾಜ ಕ್ಷೇತ್ರದ ಮಾಜಿ ಉಪಾಧ್ಯಕ್ಷ ಕುಮಾರ್ ಗೌಡ ನೇತೃತ್ವದ ತಂಡ ಮನವಿ ಸಲ್ಲಿಸಿತು.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಇಂದು ಮೈಸೂರಿಗೆ ಆಗಮಿಸಿದ ಬಿ.ವೈ.ವಿಜಯೇಂದ್ರ ರವರನ್ನು ಭೇಟಿ ಮಾಡಿದ ತಿಂಡಿ ಮಾಜಿ ಸಂಸದ ಪ್ರತಾಪ ಸಿಂಹ ಅವರನ್ನು ಉಚ್ಚಾಟನೆ ಮಾಡಬೆಕೆಂದು ಮನವಿ ಸಲ್ಲಿಸಿತು. ಮಾಜಿ ಸಂಸದ ಪ್ರತಾಪ್ ಸಿಂಹರವರ ಪಕ್ಷ ವಿರೋಧಿ ಚಟುವಟಿಕೆ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಕೋರಿತು. ಈ ಕುರಿತು ಮನವಿ ಪತ್ರ ನೀಡಲಾಗಿದೆ.
ನಾವುಗಳು ತಮ್ಮ ಗಮನಕ್ಕೆ ತರಲು ಬಯಸುವುದೇನೆಂದರೆ, ಸುಮಾರು ಮೂವತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ನಾವುಗಳು ಹಿಂದೂ ಸಂಘಟನೆ ಸೇರಿದಂತೆ ಭಾರತೀಯ ಜನತಾ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ಮತ್ತು ಬ್ಲಾಕ್ ಮಟ್ಟದ, ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದು ಸರಿಯಷ್ಟೇ, ಇತ್ತೀಚಿನ ದಿನಗಳಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಂದಾಗಿ ಪಕ್ಷಕ್ಕೆ ಉಂಟಾಗುತ್ತಿರುವ ಹಾನಿ ಮತ್ತು ಮುಜುಗರ ನಮಗೆ ತೀವ್ರ ಬೇಸರವನ್ನು ಉಂಟುಮಾಡಿವೆ. ಅವುಗಳಲ್ಲಿ ಪ್ರಮುಖವಾದ ಕೆಲವು ಅಂಶಗಳನ್ನು ಈ ಮುಖಾಂತರ ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರತಾಪ್ ಸಿಂಹ ಅವರು ಪ್ರಜಾಪ್ರಭುತ್ವದ ದೇಗುಲವೆಂದೇ ಕರೆಯಲ್ಪಡುವ ದೇಶದ ಸಂಸತ್ ಭವನದ ಒಳಗೆ ಸ್ಮೋಕ್ ಬಾಂಬ್ ದಾಳಿ ನಡೆಸಿದ ಭಯೋತ್ಪಾದಕರಿಗೆ ಯಾವುದೇ ಪೂರ್ವಾಪರ ಪರಿಶೀಲಿಸದೆ ಒಳಗೆ ಪ್ರವೇಶಿಸಲು ಪಾಸ್ ನೀಡಿರುವುದು ದೇಶದ ಭದ್ರತಾ ವ್ಯವಸ್ಥೆಯನ್ನೇ ಆಣಕಿಸಿದ್ದಷ್ಟೇ ಅಲ್ಲದೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ಸಮಸ್ತ ಕರ್ನಾಟಕದ ಜನತೆ ತಲೆ ಎತ್ತಿ ನಡೆಯಲು ಸಾಧ್ಯವಾಗದಷ್ಟು ಮುಜುಗರವನ್ನು ಸೃಷ್ಟಿಸಿತ್ತು. ಆ ಪ್ರಕರಣದ ತನಿಖೆ ಇಂದಿಗೂ ಕೂಡ ನಡೆಯುತ್ತಿದ್ದು ಪಾಸ್ ನೀಡಿಕೆಯ ಆರೋಪ ಹೊತ್ತಿರುವ ಪ್ರತಾಪ್ ಸಿಂಹ ಅವರ ತಲೆಯ ಮೇಲೆ ತೂಗುಗತ್ತಿ ಇಂದಿಗೂ ಬದಿಗೆ ಸರಿದಿರುವುದಿಲ್ಲ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿರವರ ನೇತೃತ್ವದ ಕೇಂದ್ರ ಸರ್ಕಾರ ವಿಶ್ವದಲ್ಲಿಯೇ ಭದ್ರತೆಯಲ್ಲಿ ಸುಭದ್ರತೆಯಲ್ಲಿದೆ ಎಂದು ಹೆಸರು ಗಳಿಸಿರುವ ಸುಸಂದರ್ಭದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಮತ್ತು ಮೋದಿರವರು ತಲೆ ತಗ್ಗಿಸುವ ಪ್ರಕರಣವಾಗಿದೆ. ಈ ಸಂಸತ್ ಮೇಲಿನ ಸ್ಮೋಕ್ ದಾಳಿ. ಈ ದಾಳಿಗೆ ಮುಖ್ಯ ಕಾರಣ ಸಂಸದ ಪ್ರತಾಪ ಸಿಂಹರವರೇ ಎಂದು ಹೇಳಲು ಯಾವುದೇ ಅಂಜಿಕೆ ಬೇಡ ಎಂದು ಹೇಳಲಾಗಿದೆ.
ಸಂಸತ್ತಿನಲ್ಲಿ ಭಯೋತ್ಪಾದಕರಿಗೆ ಸಂಸದ ಪ್ರತಾಪ ಸಿಂಹ ಮೂರ್ನಾಲ್ಕು ಬಾರಿ ಪಾಸ್ ನೀಡಿದ್ದಾರೆಂದರೆ ಆ ಇಬ್ಬರು ಯುವಕರು ನಿತ್ಯ ನಿರಂತರ ಪರಿಚಯಸ್ತರು ಎಂಬುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದಿದ್ದಾರೆ.
ಸಂಸತ್ ಭವನದ ಒಳಗೆ ಸ್ಮೋಕ್ ಬಾಂಬ್ ವಿಷಯವಾಗಿ ಸಂಸದ ಪ್ರತಾಪ ಸಿಂಹ ಸಿಲುಕಿರುವ ವಿಷಯ ಗೊತ್ತಿದ್ದರು ಪತ್ರಿಕಾ ಮಾದ್ಯಮ ಮತ್ತು ದೃಶ್ಯಮಾದ್ಯಮದವರು ಇದುವರೆವಿಗೂ ಪ್ರತಾಪ ಸಿಂಹರವರನ್ನ ಪ್ರಶ್ನೆ ಮಾಡದರೂ ಪ್ರತಾಪ ಸಿಂಹ ನುಣಿಚಿಕೊಳುತ್ತಿದ್ದಾರೆಂದರೆ ಅಚ್ಚರಿ ಉಂಟುಮಾಡುತ್ತದೆ ಎಂದು ಹೇಳಿದ್ದಾರೆ.
ಸಂಸತ್ ಭವನದ ದಾಳಿಯ ತನಿಖೆ ಮುಗಿಯುವವರೆವಿಗೂ ಪ್ರತಾಪ ಸಿಂಹರವರನ್ನ ಪಕ್ಷದ ಯವುದೇ ಉನ್ನತ ಉದ್ದೆ ನೀಡಬಾರದು. ಒಟ್ಟಾರೆಯಾಗಿ ಪ್ರತಾಪ ಸಿಂಹರವರನ್ನ ಉಚ್ಚಾಟನೆ ಮಾಡಬೇಕೆಂದು ಕೇಂದ್ರ ಭಾರತೀಯ ಜನತಾ ಪಾರ್ಟಿಗೆ ಶಿಫಾರಸು ಮಾಡಬೇಕೆಂದು ಮನವಿ ಮಾಡಿದ್ದಾರೆ.




